ಮಡಿಕೇರಿ, ಜೂ. ೧೩: ರಾಜ್ಯ ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದ ಕೊಡಗಿನವರಾದ ಶಾಂತೆಯAಡ ವೀಣಾ ಅಚ್ಚಯ್ಯ ಅವರ ಅಧಿಕಾರಾವಧಿ ತಾ. ೧೪ ರಂದು (ಇಂದು) ಮುಕ್ತಾಯಗೊಳ್ಳಲಿದೆ. ಕಳೆದ ಆರು ವರ್ಷಗಳ ಹಿಂದೆ ವಿಧಾನಸಭೆಯಿಂದ ವಿಧಾನ ಪರಿಷತ್ಗೆ ವೀಣಾ ಕಾಂಗ್ರೆಸ್ ಪಕ್ಷದ ಮೂಲಕ ಆಯ್ಕೆಗೊಂಡಿದ್ದರು.
ವೀಣಾ ಅಚ್ಚಯ್ಯ ಸೇರಿದಂತೆ ೭ ಎಂಎಲ್ಸಿಗಳ ಅಧಿಕಾರಾವಧಿ ತಾ. ೧೪ ರಂದು ಕೊನೆಗೊಳ್ಳುತ್ತಿದೆ. ವಿಧಾನ ಸಭೆಯಲ್ಲಿ ವಿವಿಧ ಪಕ್ಷಗಳು ಹೊಂದಿದ್ದ ಶಾಸಕರ ಸಂಖ್ಯಾಬಲದ ಪ್ರಕಾರ ಆರು ವರ್ಷದ ಹಿಂದೆ ಕಾಂಗ್ರೆಸ್ನಿAದ ಮೂವರು, ಬಿಜೆಪಿಯಿಂದ ಇಬ್ಬರು ಹಾಗೂ ಜೆಡಿಎಸ್ನಿಂದ ಇಬ್ಬರು ಮೇಲ್ಮನೆಗೆ ಆಯ್ಕೆಗೊಂಡಿದ್ದರು.
ಇದೀಗ ಸದಸ್ಯರಾದ ವೀಣಾ ಅಚ್ಚಯ್ಯ, ಲಕ್ಷö್ಮಣ್ ಸಂಗಪ್ಪ ಸವದಿ, ರಾಮಪ್ಪ ತಿಮ್ಮಾಪುರ್, ಅಲ್ಲಂ ವೀರ ಭದ್ರಪ್ಪ, ಹೆಚ್.ಎಂ. ರಮೇಶ್ ಗೌಡ, ನಾರಾಯಣ ಸ್ವಾಮಿ ಕೆ.ವಿ. ಹಾಗೂ ಲೆಹರ್ ಸಿಂಗ್ ಸಿರೋಯ ಅವರುಗಳು ನಿವೃತ್ತರಾಗುತ್ತಿದ್ದಾರೆ.
ಪ್ರಸ್ತುತ ರಾಜಕೀಯದಲ್ಲಿ ಬದಲಾವಣೆಯಾಗಿದ್ದು, ಬಿಜೆಪಿಯಿಂದ ನಾಲ್ವರು, ಕಾಂಗ್ರೆಸ್ನಿAದ ಇಬ್ಬರು ಹಾಗೂ ಜೆಡಿಎಸ್ನಿಂದ ಒಬ್ಬರು ನೂತನ ಸದಸ್ಯರಾಗಲು ಅವಕಾಶವಿದೆ. ಇದರಂತೆ ಈಗಾಗಲೇ ಈ ಸ್ಥಾನಕ್ಕೆ ಅವಿರೋಧ ಆಯ್ಕೆಯೂ ನಡೆದಿದೆ.
ಬಿಜೆಪಿಯಿಂದ ಛಲವಾದಿ ನಾರಾಯಣ ಸ್ವಾಮಿ, ಹೇಮಲತಾ ನಾಯಕ್, ಲಕ್ಷö್ಮಣ್ ಸವದಿ ಮತ್ತು ಕೇಶವ ಪ್ರಸಾದ್ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ನಿAದ ನಾಗರಾಜ್ ಯಾದವ್ ಹಾಗೂ ಅಬ್ದುಲ್ ಜಬ್ಬಾರ್ ಮತ್ತು ಜೆಡಿಎಸ್ನಿಂದ ಟಿ.ಎ. ಶರವಣ ಅವರುಗಳು ನೂತನ ಎಂಎಲ್ಸಿಗಳಾಗಲಿದ್ದಾರೆ.