ಮಡಿಕೇರಿ, ಜೂ. ೧೩: ಜಿಲ್ಲೆಯಲ್ಲಿ ಖಾಸಗಿ ವಾಹನಗಳ ಮಾಲೀಕರು ತಮ್ಮ ವಾಹನಗಳ ಅನಧಿಕೃತ ನೋಂದಣಿ ಫಲಕಗಳ ಮೇಲಿನ ಸಂಘ, ಸಂಸ್ಥೆಯ ಹೆಸರು, ಚಿಹ್ನೆ, ಲಾಂಛನ ಹಾಗೂ ಇತರ ಹೆಸರುಗಳನ್ನು ಕೂಡಲೇ ತೆರವುಗೊಳಿಸುವಂತೆ ಮಡಿಕೇರಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಟಿ.ಜಿ. ಹೇಮಾವತಿ ಸೂಚನೆ ನೀಡಿದ್ದಾರೆ.
ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದನ್ವಯ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ನೀಡಿದ ನಿರ್ದೇಶನಗಳ ಮೇರೆಗೆ, ಸರ್ಕಾರದ ಎಲ್ಲಾ ಇಲಾಖೆಗಳು, ನಿಗಮಗಳು, ಮಂಡಳಿಗಳು, ಸರ್ಕಾರೇತರ ಸಂಘ - ಸಂಸ್ಥೆಗಳಲ್ಲಿ ಉಪಯೋಗಿಸುವ ಯಾವುದೇ ಖಾಸಗಿ ವಾಹನಗಳಲ್ಲಿ ಸ್ಥಳೀಯ ಸಂಸ್ಥೆಗಳ ಹೆಸರುಗಳನ್ನು, ಚಿಹ್ನೆ, ಲಾಂಛನಗಳನ್ನು ವಾಹನಗಳ ನೋಂದಣಿ ಫಲಕಗಳ ಮೇಲೆ ಅನಧಿಕೃತವಾಗಿ ಅಳವಡಿಸಿ ಕೊಳ್ಳಬಾರದು.
ಒಂದು ವೇಳೆ ಈ ರೀತಿಯಲ್ಲಿ ವಾಹನಗಳ ಅನಧಿಕೃತ ನಾಮ ಫಲಕಗಳನ್ನು ಬಳಸಿದ್ದಲ್ಲಿ ಕೇಂದ್ರ ಮೋಟಾರು ವಾಹನಗಳ ನಿಯಮಗಳ ೧೯೮೯ರ ನಿಯಮ ೫೦ ಮತ್ತು ೫೧ರಲ್ಲಿ ನಿಗಧಿಪಡಿಸಿರುವ ಮಾನದಂಡಗಳಿಗೆ ಹಾಗೂ ಕೇಂದ್ರದ (ಖಿhe ಇmbಟems oಜಿ Iಟಿಜiಚಿ ( Pಡಿohibiಣioಟಿ oಜಿ Imಠಿಡಿoಠಿeಡಿ use) ಂಛಿಣ ೨೦೦೫ (೫೦ oಜಿ ೨೦೦೫) ಕಲಂ ೩, ೪ ಮತ್ತು ೫ ರ ಉಲ್ಲಂಘನೆಯಾಗುತ್ತದೆ ಮತ್ತು ಇಂತಹ ನೋಂದಣಿ ಫಲಕಗಳನ್ನು ಕೂಡಲೇ ತೆರವುಗೊಳಿಸಬೇಕಾಗುತ್ತದೆ.
ನಮ್ಮ ಕೇಂದ್ರ ಕಚೇರಿಯಿಂದ ಅನಧಿಕೃತ ನಾಮ ಫಲಕಗಳ ತೆರವುಗೊಳಿಸುವ ವಿಷಯದ ಕುರಿತು ಹಲವಾರು ಬಾರಿ ಪ್ರಕಟಣೆ ನೀಡಿದರೂ ಸಹ ಈ ರೀತಿ ಅನಧಿಕೃತ ನೋಂದಣಿ ಫಲಕಗಳನ್ನು ಅಳವಡಿಸುತ್ತಿರುವುದು ಕಂಡು ಬರುತ್ತಿದ್ದು, ಈ ಕುರಿತು ಉಚ್ಚ ನ್ಯಾಯಾಲಯದಲ್ಲಿ ದಾಖಲಿಸುವ ಪ್ರಕರಣ (ಸಿ.ಆರ್.ಎಲ್.ಪಿ. ನಂ:೧೮೫೦/೨೦೧೭)ರಲ್ಲಿ ತಿಳಿಸಿರುವಂತೆ ಸ್ಥಳೀಯ ಸಂಸ್ಥೆಗಳ ಹೆಸರುಗಳನ್ನು, ಚಿಹ್ನೆ, ಲಾಂಛನಗಳನ್ನು ಖಾಸಗಿ ವಾಹನಗಳ ನೋಂದಣಿ ಫಲಕಗಳ ಮೇಲೆ ಅಳವಡಿಸಿರುವುದನ್ನು ತೆರವುಗೊಳಿಸಲು ಕಟ್ಟುನಿಟ್ಟಿನ ಕ್ರಮ ವಹಿಸಿ ವರದಿ ಸಲ್ಲಿಸುವಂತೆ ಆದೇಶ ನೀಡಿರುತ್ತದೆ.
ಒಂದು ವೇಳೆ ಅನಧಿಕೃತ ನೋಂದಣಿ ಫಲಕಗಳನ್ನು ಅಳವಡಿಸಿಕೊಂಡಿರುವ ವಾಹನವು ಸಾರ್ವಜನಿಕ ಸ್ಥಳದಲ್ಲಿ ಕಂಡುಬAದಲ್ಲಿ ಸಾರ್ವಜನಿಕರು ಅವರ ವಾಹನದ ನೋಂದಣಿ ಫಲಕ, ಸ್ಥಳ (ಲೊಕೇಶನ್) ಸಮೇತ ಭಾವಚಿತ್ರವನ್ನು ತೆಗೆದು ಮೊಬೈಲ್ ಸಂಖ್ಯೆ : ೯೪೪೯೮೬೪೦೧೨ಕ್ಕೆ ವಾಟ್ಸಾö್ಯಪ್ ಮೂಲಕ ರವಾನಿಸಿದಲ್ಲಿ ಅಂತಹ ವಾಹನ ಮಾಲೀಕರ ವಿರುದ್ಧ ನಿಯಮಾನುಸಾರ ಕಟ್ಟುನಿಟ್ಟಿನ ಕ್ರಮವಹಿಸಲಾಗುವುದು. ಆದ್ದರಿಂದ ಈ ಬಗ್ಗೆ ನಿರಂತರ ತಪಾಸಣಾ ಕ್ರಮ ಕೈಗೊಳ್ಳುತ್ತಿರುವುದರಿಂದ, ಅನಧಿಕೃತ ನೋಂದಣಿ ಫಲಕಗಳನ್ನು ತೆರವುಗೊಳಿಸುವಂತೆ ಸೂಚಿಸಿದೆ. ತಪ್ಪಿದಲ್ಲಿ ದಂಡ ವಿಧಿಸಲಾಗುತ್ತದೆ ಎಂದು ಟಿ.ಜಿ. ಹೇಮಾವತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.