*ಗೋಣಿಕೊಪ್ಪ, ಜೂ. ೧೩: ಸಮಾಜದಲ್ಲಿ ತಮ್ಮ ಐಕ್ಯತಾ ಬಲ ಪ್ರದರ್ಶಿಸಲು ಮಹಿಳೆಯರು ಹೆಚ್ಚು ಸಂಘಟಿತರಾಗುವುದರಿAದ ಸಾಧ್ಯವಿದೆ ಎಂದು ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ ಅಭಿಪ್ರಾಯಪಟ್ಟಿದ್ದಾರೆ.

ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯ ರೂ. ೫ ಲಕ್ಷ ಅನುದಾನದಲ್ಲಿ ನಿರ್ಮಾಣವಾದ ಬಾಡಗರಕೇರಿ ಮಹಿಳಾ ಸಮಾಜದ ಕಟ್ಟಡವನ್ನು ಮಹಿಳಾ ಚಟುವಟಿಕೆಗಳಿಗೆ ಅರ್ಪಿಸಿ ಮಾತನಾಡಿದರು.

ಮಹಿಳೆಯರು ಸಂಘಟಿತರಾದರೆ ಏನು ಬೇಕಾದರೂ ಸಾಧಿಸಬಹುದು. ಮಹಿಳೆಯರು ರಾಜಕೀಯವಾಗಿ ಸಶಕ್ತರಾಗಬೇಕು ಎಂದು ಹೇಳಿದ ಅವರು ಮಹಿಳಾ ಸಂಘಟನೆಗಳ ಅಭಿವೃದ್ಧಿಗೆ ತಾವು ಬೆನ್ನೆಲುಬಾಗಿ ನಿಲ್ಲುತ್ತಿದ್ದು, ಸರ್ಕಾರದಿಂದ ದೊರೆಯುವ ನೆರವು ಮತ್ತು ಅನುದಾನವನ್ನು ಒದಗಿಸಿಕೊಡುವ ಭರವಸೆ ನೀಡಿದರು.

ಸಂಘಟನೆಗಳು ಸವಲತ್ತುಗಳನ್ನು ಪಡೆದುಕೊಳ್ಳುವಲ್ಲಿ ಸಂಘಟಿತರಾಗಬೇಕೆAದು ಸಲಹೆ ನೀಡಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಮ್ಮತ್ತಿರ ರಾಜೇಶ್, ಸದಸ್ಯೆ ಮಲ್ಲಂಗಡ ರೀನಾ ಶಮಿ, ಬಿಜೆಪಿ ತಾಲೂಕು ಮಂಡಳ ಅಧ್ಯಕ್ಷ ನೆಲ್ಲೀರ ಚಲನ್‌ಕುಮಾರ್, ಕಾಫಿ ಪ್ರಕೋಷ್ಠ ಅಧ್ಯಕ್ಷ ಕುಪುö್ಪಡೀರ ಪೊನ್ನುಮುತ್ತಪ್ಪ, ಬಾಡಗರಕೇರಿ ಬೂತ್ ಅಧ್ಯಕ್ಷ ಕಾಯಪಂಡ ಮಧುಮೋಟಯ್ಯ, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧುದೇವಯ್ಯ ಇದ್ದರು.