ಗೋಣಿಕೊಪ್ಪ ವರದಿ, ಜೂ. ೧೩: ಮೂರು ವರ್ಷಕೊಮ್ಮೆ ಆಚರಿಸುವ ತಾವಳಗೇರಿ ಗ್ರಾಮದ ಕುಂದೂರು ಶ್ರೀ ಭದ್ರಕಾಳಿ ದೇವಿಯ ಉತ್ಸವ ಭಕ್ತಿಭಾವದಿಂದ ನಡೆಯಿತು.

ಮೂರು ದಿನಗಳ ಹಿಂದೆ ತಕ್ಕಮುಖ್ಯಸ್ಥರು ಉತ್ಸವಕ್ಕೆ ಚಾಲನೆ ನೀಡಿದರು. ಮಚ್ಚಮಾಡ ಮತ್ತು ಕಳ್ಳೇಂಗಡ ಕುಟುಂಬದವರು ದೇವಿಯ ಮೊಗವನ್ನು ತಂದು ದೇವಸ್ಥಾನದ ಅಂಬಲದಲ್ಲಿ ಪೂಜಿಸಲಾಯಿತು. ದೇವಿ ಹಾಗೂ ಮೊಗ ಸಮಾಗಮಗೊಂಡು ಆಚರಿಸಲಾಯಿತು. ಹೂವಿನಿಂದ ಮೊಗವನ್ನು ಶೃಂಗರಿಸಿ ಭಕ್ತಿ ಮೆರೆಯಲಾಯಿತು. ಸುತ್ತಲಿನ ಭಕ್ತರು ಪಾಲ್ಗೊಂಡು ಪುನೀತರಾದರು.