ಸೋಮವಾರಪೇಟೆ, ಜೂ. ೧೩: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಎರಡು ಹೈಮಾಸ್ಟ್ ದುರಸ್ತಿ ಹಾಗೂ ತಳಪಾಯ ನವೀಕರಣ ಕಾರ್ಯಕ್ಕೆ ಪ.ಪಂ. ಮುಂದಾಗಿದೆ. ಹೈಮಾಸ್ಟ್ ತಳಪಾಯಕ್ಕೆ ರೈಲಿಂಗ್ಸ್ ಹಾಗೂ ಟೈಲ್ ಹಾಕುವ ಕಾಮಗಾರಿಯನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು, ಸದಸ್ಯ ಬಿ.ಆರ್. ಮಹೇಶ್, ಮುಖ್ಯಾಧಿಕಾರಿ ನಾಚಪ್ಪ, ಆರೋಗ್ಯಾಧಿಕಾರಿ ಜಾಸಿಂ ಖಾನ್ ಅವರುಗಳು ಪರಿಶೀಲಿಸಿದರು. ಗುಣಮಟ್ಟದ ಕಾಮಗಾರಿಯನ್ನು ನಿರ್ವಹಿಸಬೇಕು. ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕೆಂದು ಅಧಿಕಾರಿಗಳು ಸಂಬAಧಿಸಿದ ಗುತ್ತಿಗೆದಾರರಿಗೆ ಸೂಚಿಸಿದರು.