ಮಡಿಕೇರಿ ಜೂ.೧೩ : ಪ್ರೋ. ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಶಿವಮೊಗ್ಗದಲ್ಲಿ ನಡೆದ ಪ್ರೋ. ಬಿ.ಕೃಷ್ಣಪ್ಪ ಅವರ ೮೫ ನೇ ಜನ್ಮ ದಿನಾಚರಣೆಯಲ್ಲಿ ಸಮಿತಿಯ ಕೊಡಗು ಜಿಲ್ಲಾ ಸಂಚಾಲಕಿ ಗಾಯತ್ರಿ ನರಸಿಂಹ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಹಾಗೂ ಪ್ರೋ.ಬಿ.ಎಲ್.ರಾಜು ಅವರ ನೇತೃತ್ವದಲ್ಲಿ ಕುವೆಂಪು ರಂಗಮAದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನವಾಗಿ ಆಯ್ಕೆಯಾದ ಜಿಲ್ಲಾ ಸಂಚಾಲಕರುಗಳನ್ನು ಸನ್ಮಾನಿಸಲಾಯಿತು. ಕೊಡಗು ಉಸ್ತುವಾರಿ ನಾಗಮಂಗಲ ಆರ್.ವೆಂಕಟೇಶ್, ಜಿಲ್ಲೆಯ ಪ್ರಮುಖರಾದ ನಾಗೇಶ್, ದಿವ್ಯ, ರವಿ, ಸಜಾದ್ ಮೊದಲಾದವರು ಉಪಸ್ಥಿತರಿದ್ದರು.