ಮಡಿಕೇರಿ, ಜೂ. ೧೩: ಮೂಲತಃ ಸುಂಟಿಕೊಪ್ಪ ಮಾದಾಪುರದ ಮಟ್ಟದ್‌ಕಾಡ್ ಎಸ್ಟೇಟ್‌ನ ಮಾಲೀಕರಾಗಿದ್ದ ದಾನಿ ಕೋದಂಡ ಬಿ. ದೇವಯ್ಯ (ದೇವಿ-೭೫) ಅವರು ತಾ. ೧೩ರಂದು ನಿಧನರಾದರು.

ಸಿ.ಬಿ. ದೇವಯ್ಯ ಎಂದು ಚಿರಪರಿಚಿತರಾಗಿದ್ದ ಇವರ ಕುಟುಂಬ ಮಡಿಕೇರಿಯ ಕೊಡಗು ವಿದ್ಯಾಲಯಕ್ಕೆ ೮ ಎಕರೆ ಜಾಗವನ್ನು ದಾನವಾಗಿ ನೀಡಿದ್ದು, ಈ ವಿದ್ಯಾಸಂಸ್ಥೆಯ ಸ್ಥಾಪಕ ಸದಸ್ಯರು, ಆಪರ್ಚುನಿಟಿ ಶಾಲೆಯ ಟ್ರಸ್ಟಿಯೂ ಆಗಿದ್ದರು. ಕಗ್ಗೋಡ್ಲುವಿನಲ್ಲಿ ವರ್ಷಂಪ್ರತಿ ನಡೆಯುವ ರಾಜ್ಯಮಟ್ಟದ ಕೆಸರುಗದ್ದೆ ಕ್ರೀಡಾಕೂಟವೂ ಇವರಿಗೆ ಸೇರಿದ ಗದ್ದೆಯಲ್ಲೇ ನಡೆದುಕೊಂಡು ಬರುತ್ತಿದೆ.

ಅಂತ್ಯಕ್ರಿಯೆ ಸೋಮವಾರ ಸಂಜೆ ಮಡಿಕೇರಿಯಲ್ಲಿರುವ ಕುಟುಂಬದ ರುದ್ರಭೂಮಿಯಲ್ಲಿ ನೆರವೇರಿತು. ಮೃತರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.