*ಗೋಣಿಕೊಪ್ಪ, ಜೂ. ೧೧: ಕಾನೂರು ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರೀನ್ ಡಾಟ್ ಟ್ರಸ್ಟ್ ಸಹಯೋಗದಲ್ಲಿ ಕಾನೂರು ವ್ಯಾಪ್ತಿಯ ಹೊಸಕೊಲ್ಲಿ ಹಾಡಿಯ ನಿವಾಸಿಗಳಿಗೆ ವಿವಿಧ ವೈದ್ಯಕೀಯ ಉಚಿತ ತಪಾಸಣೆ ಮಾಡಲಾಯಿತು.
ವೈದ್ಯರಿಂದ ಕಾಡಿನ ಮಕ್ಕಳ ಆರೋಗ್ಯ ತಪಾಸಣೆ, ಹಿಮೋಗ್ಲೋಬಿನ್ ಪರೀಕ್ಷೆ, ರಕ್ತದೊತ್ತಡ ಪರೀಕ್ಷೆ, ಮದುಮೇಹ ಪರೀಕ್ಷೆ ಮತ್ತು ಆರೋಗ್ಯ ಶಿಕ್ಷಣದ ಬಗ್ಗೆ ಅರಿವು ಮೂಡಿಸಲಾಯಿತು.
ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಾಗ ತಕ್ಷಣ ಆಸ್ಪತ್ರೆಗೆ ತಪಾಸಣೆಗೆ ಬರುವಂತೆ ಕಾಡು ಮಕ್ಕಳ ಮನವೊಲಿಸಿದರು.
ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ದಿವೆಂದರ್ ರಮೇಶ್, ಇ.ಹೆಚ್.ಸಿ.ಓ ಮಂಗಳ, ಸಿ.ಹೆಚ್.ಓ, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿಗಳು ಹಾಜರಿದ್ದರು.