ವರದಿ: ಎನ್.ಎನ್. ದಿನೇಶ್ *ಗೋಣಿಕೊಪ್ಪಲು, ಜೂ. ೧೨: ಖಾಸಗಿ ಭೇಟಿ ನಿಮಿತ್ತ ಕುಟುಂಬ ದೊಂದಿಗೆ ಕೊಡಗಿಗೆ ಆಗಮಿಸಿರುವ ಕೇಂದ್ರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವರಾದ ನಿತಿನ್ ಗಡ್ಕರಿ ಅವರನ್ನು ಇಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಭೇಟಿ ಮಾಡಿ ಮಾತುಕತೆ ನಡೆಸಿದರು.
ಖಾಸಗಿ ರೆಸಾರ್ಟ್ನಲ್ಲಿ ಮಾತುಕತೆ ಸಂದರ್ಭ ಸಚಿವರು ಕೊಡಗಿನ ಹೆದ್ದಾರಿಗಳ ಅಭಿವೃದ್ಧಿ ಮತ್ತು ಪ್ರವಾಸೋದ್ಯಮದ ಬಗ್ಗೆ ಬೋಪಯ್ಯ ಅವರೊಂದಿಗೆ ವಿಚಾರ ವಿನಿಮಯ ಮಾಡಿಕೊಂಡರು. ಕೊಡಗಿನ ಹೆದ್ದಾರಿಗಳ ಅಭಿವೃದ್ಧಿ ಬಗ್ಗೆ ರಾಜ್ಯ ಸರಕಾರದಿಂದ ಸೂಕ್ತ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಿದರೆ ತಮ್ಮ ಇಲಾಖೆಯಿಂದ ಆದ್ಯತೆಯಲ್ಲಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಸಚಿವರು ನೀಡಿದರು.
ಕೊಡಗಿನಲ್ಲಿ ಪ್ರವಾಸೋದ್ಯಮಕ್ಕೆ ವರದಿ: ಎನ್.ಎನ್. ದಿನೇಶ್
*ಗೋಣಿಕೊಪ್ಪಲು, ಜೂ. ೧೨: ಖಾಸಗಿ ಭೇಟಿ ನಿಮಿತ್ತ ಕುಟುಂಬ ದೊಂದಿಗೆ ಕೊಡಗಿಗೆ ಆಗಮಿಸಿರುವ ಕೇಂದ್ರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವರಾದ ನಿತಿನ್ ಗಡ್ಕರಿ ಅವರನ್ನು ಇಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಭೇಟಿ ಮಾಡಿ ಮಾತುಕತೆ ನಡೆಸಿದರು.
ಖಾಸಗಿ ರೆಸಾರ್ಟ್ನಲ್ಲಿ ಮಾತುಕತೆ ಸಂದರ್ಭ ಸಚಿವರು ಕೊಡಗಿನ ಹೆದ್ದಾರಿಗಳ ಅಭಿವೃದ್ಧಿ ಮತ್ತು ಪ್ರವಾಸೋದ್ಯಮದ ಬಗ್ಗೆ ಬೋಪಯ್ಯ ಅವರೊಂದಿಗೆ ವಿಚಾರ ವಿನಿಮಯ ಮಾಡಿಕೊಂಡರು. ಕೊಡಗಿನ ಹೆದ್ದಾರಿಗಳ ಅಭಿವೃದ್ಧಿ ಬಗ್ಗೆ ರಾಜ್ಯ ಸರಕಾರದಿಂದ ಸೂಕ್ತ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಿದರೆ ತಮ್ಮ ಇಲಾಖೆಯಿಂದ ಆದ್ಯತೆಯಲ್ಲಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಸಚಿವರು ನೀಡಿದರು.
ಕೊಡಗಿನಲ್ಲಿ ಪ್ರವಾಸೋದ್ಯಮಕ್ಕೆ ಅಧ್ಯಕ್ಷರಾಗಿದ್ದ ಸಂದರ್ಭ ಬೋಪಯ್ಯ ಅವರು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿದ ಬಗ್ಗೆ ಮತ್ತು ಆಗಿನ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಗಡ್ಕರಿಯವರು ಮಾತಿನ ನಡುವೆ ಸ್ಮರಿಸಿದರು. ಇದೇ ಸಂದರ್ಭ ಶಾಸಕರು ಸಚಿವರಿಗೆ ಶಾಲು ಹೊದಿಸಿ ಪುಸ್ತಕವನ್ನು ಉಡುಗೊರೆಯಾಗಿ ನೀಡಿದರು.
ಶಾಸಕರಿಂದ ಕೊಡಗಿನ ಜೇನುತುಪ್ಪ,
(ಮೊದಲ ಪುಟದಿಂದ) ಕಾಳುಮೆಣಸು, ಏಲಕ್ಕಿ ಮತ್ತು ಕಾಫಿಹುಡಿಯನ್ನು ಸ್ವೀಕರಿಸಿದ ಗಡ್ಕರಿಯವರು ಸ್ವತಃ ಜೇನುತುಪ್ಪವನ್ನು ಸವಿದು ಅದರ ತಾಜಾತನ ಮತ್ತು ಗುಣಮಟ್ಟವನ್ನು ಕೊಂಡಾಡಿದರು. ಕೊಡಗಿನ ಕಿತ್ತಳೆ ಬಗ್ಗೆ ಶಾಸಕರಿಂದ ಮಾಹಿತಿ ಬಯಸಿದ ಸಚಿವರು, ಕೊಡಗಿನಲ್ಲಿ ಕಿತ್ತಳೆ ಇಳುವರಿ ಕ್ಷೀಣಿಸುತ್ತಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿ, ಕೊಡಗಿನಲ್ಲಿ ಕಿತ್ತಳೆ ಪುನಶ್ಚೇತನಕ್ಕೆ ನಾಗ್ಪುರ ಮಾದರಿ ಕಿತ್ತಳೆಗೆ ಪೂರಕ ವಾತಾವರಣ ಸೃಷ್ಟಿ ಮತ್ತು ತಳಿ ಸಂವರ್ಧನೆ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಶಾಸಕರಿಗೆ ಸಲಹೆ ನೀಡಿದರು. ಸಚಿವರ ಭೇಟಿ ಸಂದರ್ಭ ಡಾ.ಕುಶ್ವಂತ್ ಕೋಳಿಬೈಲು ಮತ್ತು ಮಲ್ಲಂಡ ಮಧು ದೇವಯ್ಯರವರು ಹಾಜರಿದ್ದರು.