ಸಿದ್ದಾಪುರ: ಕುಶಾಲನಗರ ವಲಯ ಅರಣ್ಯ ಇಲಾಖೆ ಹಾಗೂ ನಂಜರಾಯಪಟ್ಟಣ ಪ್ರೌಢಶಾಲೆಯ ಜಂಟಿ ಆಶ್ರಯದಲ್ಲಿ ಮೀನುಕೊಲ್ಲಿ ಅರಣ್ಯ ವ್ಯಾಪ್ತಿಯಲ್ಲಿ ಪರಿಸರ ದಿನಾಚರಣೆ ಹಾಗೂ ಬೀಜ ಬಿತ್ತನೆ ಕಾರ್ಯ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಕುಶಾಲನಗರ ವಲಯ ಅರಣ್ಯಾಧಿಕಾರಿ ಸುಬ್ರಾಯ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಅನಿಲ್ ಡಿಸೋಜ, ದೇವಯ್ಯ, ಚೇತನ್, ರವಿ ಉತ್ನಲ್, ಪ್ರೌಢಶಾಲೆ ಮುಖ್ಯ ಶಿಕ್ಷಕ ಹೆಚ್.ಎನ್. ಮೂರ್ತಿ, ಗ್ರಾ.ಪಂ. ಕಾರ್ಯದರ್ಶಿ ಶೇಷಗಿರಿ, ಗ್ರಾ.ಪಂ. ಸದಸ್ಯೆ ಜಾಜಿ, ಜ್ಞಾನಜ್ಯೋತಿ ಶಾಲೆಯ ಶಿಕ್ಷಕ ಚೇತನ್ ಇನ್ನಿತರರು ಹಾಜರಿದ್ದರು.
ಬಡಬನ ಪ್ರಾಥಮಿಕ ಶಾಲೆಶನಿವಾರಸಂತೆ: ಬಡಬನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಶನಿವಾರಸಂತೆ ಅರಣ್ಯ ಇಲಾಖೆ ಸಹಯೋಗದಲ್ಲಿ ಪರಿಸರ ದಿನ ಹಾಗೂ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಆಲೂರು-ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್ ಹಾಗೂ ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಪ್ರಫೂಲ್ ಶೆಟ್ಟಿ ಗಿಡ ನೆಡುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ವಲಯ ಅರಣ್ಯಾಧಿಕಾರಿ ಪ್ರಫೂಲ್ ಶೆಟ್ಟಿ, ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಪ್ರತಿಯೊಬ್ಬರು ಒಂದೊAದು ಗಿಡಗಳನ್ನು ನೆಟ್ಟು ಪೋಷಿಸಬೇಕಾಗಿದೆ. ಗಿಡ ನೆಡುವುದಕ್ಕಾಗಿ ಈ ಕಾರ್ಯಕ್ರಮವಾಗಬಾರದು ನೆಟ್ಟ ಗಿಡಗಳನ್ನು ರಕ್ಷಣೆ ಮಾಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕ ರಾಜಕುಮಾರ್, ವನಪಾಲಕರುಗಳಾದ ಶ್ರೀನಿವಾಸ್, ಶಿವಕುಮಾರ್, ಪ್ರಶಾಂತ್, ಸೂರ್ಯ ಅರಣ್ಯ ರಕ್ಷಕರಾದ ಲೋಹಿತ್, ಜಯಕುಮಾರ್, ರಮೇಶ್ ಹಾಗೂ ಶಾಲಾ ಶಿಕ್ಷಕರು ಮತ್ತು ಗ್ರಾಮಸ್ಥರು ಹಾಜರಿದ್ದರು.
ಪೊನ್ನಂಪೇಟೆ ಸಂತ ಅಂಥೋಣಿ ವಿದ್ಯಾಸಂಸ್ಥೆ *ಗೋಣಿಕೊಪ್ಪ: ಪರಿಸರದ ಸಮತೋಲನ ಕಾಪಾಡಿಕೊಳ್ಳಲು ಸುತ್ತಮುತ್ತಲಿನ ಪ್ರದೇಶಗಳ ಗಿಡಮರಗಳನ್ನು ನೆಟ್ಟು ಮರಗಳ ರಕ್ಷಣೆಗೆ ಮುಂದಾಗುವುದಾಗಿ ಪೊನ್ನಂಪೇಟೆ ಸಂತ ಅಂಥೋಣಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಪ್ರತಿಜ್ಞೆ ಮಾಡಿದರು.
ನಂತರ ವಿವಿಧ ಬಗೆಯ ಮರಗಳನ್ನು ಶಾಲೆಯ ಆವರಣದಲ್ಲಿ ನೆಡುವ ಮೂಲಕ ಪರಿಸರ ಜಾಗೃತಿ ಅಭಿಯಾನಕ್ಕೆ ಮುಂದಾದರು. ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು. ಇದೇ ಸಂದರ್ಭ ಪರಿಸರಕ್ಕೆ ಸಂಬAಧಿಸಿದ ಚಿತ್ರಕಲಾ ಪ್ರದರ್ಶನ ನಡೆಯಿತು.
ಶಾಲೆಯ ಮುಖ್ಯೋಪಾಧ್ಯಾಯರು, ಆಡಳಿತ ಮಂಡಳಿ, ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶ್ರೀ ಚೌಡೇಶ್ವರಿ ದೇವಿ ಭನ ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ಬೆಟ್ಟಗೇರಿ ಗ್ರಾಮದ ಶ್ರೀ ಚೌಡೇಶ್ವರಿ ದೇವಿ ಭನದ ಜಾಗದಲ್ಲಿ ಅರಣ್ಯ ಇಲಾಖೆ ವತಿಯಿಂದ ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು. ಈ ಸಂದರ್ಭ ಕುಶಾಲನಗರ ವಲಯ ಅರಣ್ಯಾಧಿಕಾರಿ ಶಿವರಾಮ್, ಆರ್.ಎಫ್.ಓ.ಗಳಾದ ದೇವಯ್ಯ, ವಿಲಾಶ್, ಸುಭ್ರಾಯ ಮತ್ತು ಇಲಾಖಾ ಸಿಬ್ಬಂದಿಗಳು, ದೇವಸ್ಥಾನ ಸಮಿತಿ ಅಧ್ಯಕ್ಷ ಬಿ.ಬಿ. ಶಿವಕುಮಾರ್, ಉಪಾಧ್ಯಕ್ಷ ಕೆ.ಕೆ. ಚಿದಾನಂದ, ಕಾರ್ಯದರ್ಶಿ ಕೆ.ಕೆ. ತಿಮ್ಮಯ್ಯ, ಸಮಿತಿ ಸದಸ್ಯರಾದ ಕುಡೆಕಲ್ ಗಣೇಶ್, ಅಣ್ಣಯ್ಯ ಸುಧೀಶ್ ಮುಂತಾದವರು ಹಾಜರಿದ್ದರು.
ಗುಹ್ಯ ಅಂಗನವಾಡಿ ಕೇಂದ್ರ ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ಬೆಟ್ಟಗೇರಿ ಗ್ರಾಮದ ಶ್ರೀ ಚೌಡೇಶ್ವರಿ ದೇವಿ ಭನದ ಜಾಗದಲ್ಲಿ ಅರಣ್ಯ ಇಲಾಖೆ ವತಿಯಿಂದ ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು. ಈ ಸಂದರ್ಭ ಕುಶಾಲನಗರ ವಲಯ ಅರಣ್ಯಾಧಿಕಾರಿ ಶಿವರಾಮ್, ಆರ್.ಎಫ್.ಓ.ಗಳಾದ ದೇವಯ್ಯ, ವಿಲಾಶ್, ಸುಭ್ರಾಯ ಮತ್ತು ಇಲಾಖಾ ಸಿಬ್ಬಂದಿಗಳು, ದೇವಸ್ಥಾನ ಸಮಿತಿ ಅಧ್ಯಕ್ಷ ಬಿ.ಬಿ. ಶಿವಕುಮಾರ್, ಉಪಾಧ್ಯಕ್ಷ ಕೆ.ಕೆ. ಚಿದಾನಂದ, ಕಾರ್ಯದರ್ಶಿ ಕೆ.ಕೆ. ತಿಮ್ಮಯ್ಯ, ಸಮಿತಿ ಸದಸ್ಯರಾದ ಕುಡೆಕಲ್ ಗಣೇಶ್, ಅಣ್ಣಯ್ಯ ಸುಧೀಶ್ ಮುಂತಾದವರು ಹಾಜರಿದ್ದರು.
ಗುಹ್ಯ ಅಂಗನವಾಡಿ ಕೇಂದ್ರ ಕರಿಕೆ: ಸಂಪಾಜೆ ಉಪವಲಯದಲ್ಲಿ ಹಲಸು, ಹೆಬ್ಬಲಸು, ಮಾವು, ಇರ್ಪು, ಬಿದಿರು, ಚಾಕೋಟೆ, ಕೂಳಿ ಜಾತಿಯ ಮರಗಳ ಬೀಜವನ್ನು ಬಿತ್ತಿ ಬಿತ್ತೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಸಂದರ್ಭ ಸಂಪಾಜೆ ಉಪ ವಲಯ ಅರಣ್ಯ ಅಧಿಕಾರಿ ವಿಜೇಂದ್ರ ಕುಮಾರ್ ಎಂ. ಸಿಬ್ಬಂದಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿರ್ಮಲ ಭರತ್, ಉಪಾಧ್ಯಕ್ಷ ಜಗದೀಶ್ ಮತ್ತು ಪಂಚಾಯಿತಿ ಸದಸ್ಯರು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಇದ್ದರು.