ಮಡಿಕೇರಿ, ಜೂ. ೧೦: ಸಂಪಾಜೆಯ ಪಯಸ್ವಿನಿ ಯುವಕ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ತೀರ್ಥಪ್ರಸಾದ್ ದುಗ್ಗಳ, ಉಪಾಧ್ಯಕ್ಷರಾಗಿ ರಿತಿನ್ ಡೆಮ್ಮಲೆ, ಕಾರ್ಯದರ್ಶಿಯಾಗಿ ಶಬರೀಶ ಕುದ್ಕುಳಿ, ಸಹ ಕಾರ್ಯದರ್ಶಿಯಾಗಿ ನಿತಿನ್ ನಡುಬೆಟ್ಟು, ಖಜಾಂಚಿಯಾಗಿ ಚಂದ್ರಶೇಖರ ಗಬ್ಬಲಡ್ಕ ಆಯ್ಕೆಯಾಗಿದ್ದಾರೆ.

ಸಂಪಾಜೆಯಲ್ಲಿ ನಡೆದ ಸಭೆಯಲ್ಲಿ ಸಂಘದ ಬೆಳವಣಿಗೆ ಬಗ್ಗೆ ಚರ್ಚಿಸಿ ಸಾಮಾಜಿಕ ಕೆಲಸದಲ್ಲಿ ತೊಡಗಿಸಿಕೊಳ್ಳುವಂತೆ ನಿರ್ಧರಿಸಲಾಯಿತು. ಸ್ಥಳೀಯ ಪ್ರಮುಖರಾದ ತಿಲಕರಾಜ್ ಕಳಗಿ ಅವರು ಮಾತನಾಡಿದರು.

ರಂಗಪ್ಪ ಅಂಬಟೆಕಜೆ ಪ್ರಾರ್ಥಿಸಿ, ಆದರ್ಶ ಅಳಿಕೆ ಸ್ವಾಗತಿಸಿ, ವರುಣ್ ಆಚಾರ್ಯ ವಂದಿಸಿದರು.