ವೀರಾಜಪೇಟೆ, ಜೂ. ೧೦: ಬಿಲ್ಲವ ಸಮುದಾಯದ ಜನರು ಎಲ್ಲ ಕ್ಷೇತ್ರಗಳಲ್ಲೂ ಮುನ್ನಡೆಯಬೇಕು. ಶಿಕ್ಷಣಕ್ಕೆ ಆದ್ಯತೆ ನೀಡುವುದರೊಂದಿಗೆ ಸಂಘಟನೆಯು ಪ್ರಗತಿಯತ್ತ ಸಾಗಲು ಪರಸ್ಪರ ಸಹಕರಿಸಬೇಕು ಎಂದು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಬಿ.ಎಂ. ಗಣೇಶ್ ಹೇಳಿದರು.
ವೀರಾಜಪೇಟೆಯ ಖಾಸಗಿ ಸಭಾಂಗಣದಲ್ಲಿ ನಡೆದ ಬಿಲ್ಲವ ಸೇವಾ ಸಂಘದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಗಣೇಶ್ ಅವರು ರಾಜಕೀಯ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಜನಾಂಗದವರು ಮುಂದೆ ಬರಬೇಕು, ಬಿಟ್ಟಂಗಾಲದ ಅಂಬಟ್ಟಿ ಗ್ರಾಮದಲ್ಲಿ ಸ್ವಂತ ಕಟ್ಟಡದಲ್ಲಿ ಸಂಘ ಕಾರ್ಯನಿರ್ವಹಿಸುತ್ತಿದ್ದು, ಪ್ರತಿವರ್ಷ ನಾರಾಯಣ ಗುರು ಜಯಂತಿ ಹಾಗೂ ಜನಾಂಗದಲ್ಲಿ ಒಗ್ಗಟ್ಟು ಮೂಡಿಸಲು ಕ್ರೀಡಾಕೂಟಗಳನ್ನು ಹಾಗೂ ಪ್ರತಿಭಾ ವೀರಾಜಪೇಟೆ, ಜೂ. ೧೦: ಬಿಲ್ಲವ ಸಮುದಾಯದ ಜನರು ಎಲ್ಲ ಕ್ಷೇತ್ರಗಳಲ್ಲೂ ಮುನ್ನಡೆಯಬೇಕು. ಶಿಕ್ಷಣಕ್ಕೆ ಆದ್ಯತೆ ನೀಡುವುದರೊಂದಿಗೆ ಸಂಘಟನೆಯು ಪ್ರಗತಿಯತ್ತ ಸಾಗಲು ಪರಸ್ಪರ ಸಹಕರಿಸಬೇಕು ಎಂದು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಬಿ.ಎಂ. ಗಣೇಶ್ ಹೇಳಿದರು.
ವೀರಾಜಪೇಟೆಯ ಖಾಸಗಿ ಸಭಾಂಗಣದಲ್ಲಿ ನಡೆದ ಬಿಲ್ಲವ ಸೇವಾ ಸಂಘದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಗಣೇಶ್ ಅವರು ರಾಜಕೀಯ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಜನಾಂಗದವರು ಮುಂದೆ ಬರಬೇಕು, ಬಿಟ್ಟಂಗಾಲದ ಅಂಬಟ್ಟಿ ಗ್ರಾಮದಲ್ಲಿ ಸ್ವಂತ ಕಟ್ಟಡದಲ್ಲಿ ಸಂಘ ಕಾರ್ಯನಿರ್ವಹಿಸುತ್ತಿದ್ದು, ಪ್ರತಿವರ್ಷ ನಾರಾಯಣ ಗುರು ಜಯಂತಿ ಹಾಗೂ ಜನಾಂಗದಲ್ಲಿ ಒಗ್ಗಟ್ಟು ಮೂಡಿಸಲು ಕ್ರೀಡಾಕೂಟಗಳನ್ನು ಹಾಗೂ ಪ್ರತಿಭಾ ಮುಂದೂಡಲ್ಪಟ್ಟಿದ್ದ ಮಹಾಸಭೆಯಲ್ಲಿ ಸಂಘದ ಬೆಳವಣಿಗೆಗೆ ಪೂರಕವಾದ ಹಲವಾರು ವಿಚಾರಗಳು, ಚರ್ಚೆಗಳು ನಡೆದವು. ಮುಂದಿನ ದಿನಗಳಲ್ಲಿ ಇನ್ನಷ್ಟು ಪೂರಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಂಘದ ಮೂಲಕ ನಡೆಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಮರಣನಿಧಿಗೆ ಸಂಬAಧಿಸಿದAತೆ ಸದಸ್ಯರುಗಳು ಆದಷ್ಟು ಬೇಗ ತಮ್ಮ ಸದಸ್ಯತ್ವವನ್ನು ನವೀಕರಣಗೊಳಿಸುವಂತೆ ಮನವಿ ಮಾಡಲಾಯಿತು.
ಕಾರ್ಯಕ್ರಮಕ್ಕೆ ಮೊದಲು ಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಸಂಘದ ಉಪಾಧ್ಯಕ್ಷ ಪುರುಷೋತ್ತಮ, ಕಾರ್ಯದರ್ಶಿ ಬಿ.ಎಸ್. ಜನಾರ್ಧನ್, ಸಹ ಕಾರ್ಯದರ್ಶಿ ಬಿ.ಲಕ್ಷö್ಮಣ್, ಬಿ.ಎಸ್.ಸೋಮಪ್ಪ, ಖಜಾಂಚಿ ಸತೀಶ್, ಮಹಿಳಾ ಅಧ್ಯಕ್ಷೆ ಪವಿತ್ರ ಸುಂದರ್, ಉಪಾಧ್ಯಕ್ಷೆ ಬಿ.ಜಿ. ಅನಿತಾ, ಮಾಜಿ ಅಧ್ಯಕ್ಷ ಬಿ.ಎಸ್. ಚಂದ್ರಶೇಖರ್, ಗೌರವ ಅಧ್ಯಕ್ಷ ಬಿ.ಆರ್. ರಾಜ, ಸಂಘದ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.