ಸುAಟಿಕೊಪ್ಪ, ಜೂ. ೧೦: ಕೂಡ್ಲೂರು ಚೆಟ್ಟಳ್ಳಿ ಶ್ರೀ ವಿನಾಯಕ ದೇವಾಲಯಕ್ಕೆ ರೂ. ೧ ಲಕ್ಷವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೇಣಿಗೆ ನೀಡಿದ್ದು, ಇದನ್ನು ಜಿಲ್ಲಾ ನಿರ್ದೇಶಕಿ ಲೀಲಾವತಿ ದೇವಾಲಯಕ್ಕೆ ಹಸ್ತಾಂತರಿಸಿದರು.

ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಬ್ಯಾಂಕ್‌ನ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ, ಕೂಡ್ಲೂರು ಚೆಟ್ಟಳ್ಳಿ ಶ್ರೀ ವಿನಾಯಕ ದೇವಾಲಯ ಸಮಿತಿ ಅಧ್ಯಕ್ಷÀ ರವಿ, ಚೆಟ್ಟಳ್ಳಿ ವಿಎಸ್‌ಎಸ್‌ಎನ್ ಬ್ಯಾಂಕ್‌ನ ಉಪಾಧ್ಯಕ್ಷ ಪೂವಯ್ಯ, ದೇವಾಲಯದ ಅರ್ಚಕರಾದ ಯೋಗೇಶ್, ವಲಯ ಮೇಲ್ವಿಚಾರಕಿ ಪುಷ್ಪಲತಾ ಹಾಗೂ ಸಮಿತಿ ಸದಸ್ಯರು, ಸ್ವಸಹಾಯ ಸಂಘದ ಸದಸ್ಯರು ಹಾಜರಿದ್ದರು.