ಸೋಮವಾರಪೇಟೆ, ಜೂ. ೧೦: ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕಗಳ ರಚನೆಗೆ ತಾ.೧೨ರಂದು ಚಾಲನೆ ನೀಡಲಾಗುವುದು ಎಂದು ತಾಲೂಕು ಕಸಾಪ ಅಧ್ಯಕ್ಷ ಎಸ್.ಡಿ. ವಿಜೇತ್ ತಿಳಿಸಿದ್ದಾರೆ.
ತಾ. ೧೨ರಂದು ಪೂರ್ವಾಹ್ನ ೧೦ ಗಂಟೆಗೆ ಐಗೂರು ಹೋಬಳಿ ಘಟಕ ಸ್ಥಾಪನೆ ಸಂಬAಧ ಅಲ್ಲಿನ ವಿಎಸ್ಎಸ್ಎನ್ ಸಭಾಂಗಣದಲ್ಲಿ ಸಭೆ ನಡೆಯಲಿದೆ. ೧೨ ಗಂಟೆಗೆ ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಸಭೆಯು ಪಟ್ಟಣದಲ್ಲಿರುವ ತಾಲೂಕು ಕಸಾಪ ಭವನದಲ್ಲಿ ನಡೆಯಲಿದೆ ಎಂದು ವಿಜೇತ್ ಮಾಹಿತಿ ನೀಡಿದ್ದಾರೆ.
ಅಪರಾಹ್ನ ೩ ಗಂಟೆಗೆ ಶನಿವಾರಸಂತೆ ಹೋಬಳಿ ಘಟಕದ ನೂತನ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕಾವೇರಿ ಕಾಲೇಜು ಸಭಾಂಗಣದಲ್ಲಿ ನಡೆಯಲಿದ್ದು, ಕಸಾಪ ಜಿಲ್ಲಾಧ್ಯಕ್ಷ ಕೇಶವ ಕಾಮತ್, ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.