ವೀರಾಜಪೇಟೆ, ಜೂ. ೧೦: ಇತ್ತೀಚೆಗೆ ಪ್ರವಾದಿ ಮುಹಮ್ಮದ್ ಬಗ್ಗೆ ಅವಹೇಳನಕಾರಿ ನಿಂದನೆ ಮಾಡಿದ ಬಿಜೆಪಿ ರಾಷ್ಟಿçÃಯ ವಕ್ತಾರೆ ನುಪುರ್ ಶರ್ಮಾ ಹಾಗೂ ಬಿಜೆಪಿ ಮಾಧ್ಯಮ ಉಸ್ತುವಾರಿ ನವೀನ್ ಜಿಂದಾಲ್ ಅವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ವೀರಾಜಪೇಟೆ ಎಸ್.ಡಿ.ಪಿ.ಐ. ಸಂಘಟನೆಯಿAದ ನಗರದ ಗಡಿಯಾರ ಕಂಬದ ಬಳಿ ಪ್ರತಿಭಟನೆ ನಡೆಸಲಾಯಿತು.
ವೀರಾಜಪೇಟೆ ಎಸ್.ಡಿ.ಪಿ.ಐ. ಮುಖಂಡ ಇಬ್ರಾಹಿಂ ಮಾತನಾಡಿ, ದೇಶದಲ್ಲಿ ಅಲ್ಪಸಂಖ್ಯಾತ, ದಲಿತ, ಹಿಂದುಳಿದ ವರ್ಗಗಳ ವಿರೋಧಿ ಅಲೆ ಸೃಷ್ಟಿಸಲಾಗುತ್ತಿದೆ. ಸಂಘ ಪರಿವಾರ ದೇಶದಲ್ಲಿ ನಡೆಸುತ್ತಿರುವ ಮುಸ್ಲಿಂ ವಿರೋಧಿ ಹಿಂಸಾತ್ಮಕ ಕೃತ್ಯಗಳಿಗೆ ಅಧಿಕಾರದಲ್ಲಿರುವ ಬಿಜೆಪಿ ಸರಕಾರ ಮೌನ ವಹಿಸಿದೆ. ಪ್ರವಾದಿ ನಿಂದನೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಕ್ಕೆ ಸಾಧ್ಯವಿಲ್ಲ ಎಂದರು.
ಪ್ರತಿಭಟನಾನಿರತರು ಬಿಜೆಪಿ ಹಾಗೂ ಸಂಘ ಪರಿವಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆ ವೇಳೆ ಪಕ್ಷದ ರಾಜ್ಯ ಮುಖಂಡ ತನ್ವೀರ್, ವಿಧಾನಸಭಾ ಸದಸ್ಯರಾದ ಶರೀಫ್, ಸಾಧಿಕ್ ಹಾಗೂ ಕಾರ್ಯಕರ್ತರು ಹಾಜರಿದ್ದರು.
ಎಸ್.ವೈ.ಎಸ್ ಖಂಡನೆ
ಚೆಟ್ಟಳ್ಳಿ: ಜನರಿಂದ ಗೌರವಿಸಲ್ಪಡುವ ಪ್ರವಾದಿ (ಸ. ಅ) ರನ್ನು ನಿಂದಿಸಿದ ಬಿಜೆಪಿ ವಕ್ತಾರ ನಡೆಯನ್ನು ಕೊಡಗು ಜಿಲ್ಲಾ ಎಸ್.ವೈ.ಎಸ್. ಸಮಿತಿ ಖಂಡಿಸಿದೆ. ಜಿಲ್ಲೆಯ ಸಿದ್ದಾಪುರದ ವರಕ್ಕಲ್ ಭವನದಲ್ಲಿ ಸೇರಿದ ಎಸ್.ವೈ.ಎಸ್ ಜಿಲ್ಲಾ ನಾಯಕರ ಸಂಗಮದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ನೇತಾರರು, ದೇಶದ ಆಡಳಿತ ನಡೆಸುವ ಪಕ್ಷದ ವಕ್ತಾರರು ಈ ನಿಂದನೆಯ ಮೂಲಕ ದೇಶದ ಮಾನವನ್ನು ಕೆಡಿಸಿದ್ದಾರೆ. ಇದಕ್ಕೆ ಕಾರಣರಾದವರನ್ನು ಬಂಧಿಸಿ, ಜೈಲಿಗಟ್ಟುವ ಕೆಲಸ ಸರಕಾರದಿಂದ ಜರೂರಾಗಿ ನಡೆಯಬೇಕೆಂದು ಆಗ್ರಹಿಸಿದ್ದಾರೆ. ಇಪ್ಪತ್ತಕ್ಕೂ ಅಧಿಕ ಶಾಖೆಗಳಿಂದ ಬಂದ ಪದಾಧಿಕಾರಿಗಳ ಸಂಗಮಕ್ಕೆ ಎಸ್.ವೈ.ಎಸ್. ಕೊಡಗು ಜಿಲ್ಲಾಧ್ಯಕ್ಷ ಸಿ.ಪಿ.ಎಮ್. ಬಶೀರ್ ಹಾಜಿಯವರು ಅಧ್ಯಕ್ಷತೆ ವಹಿಸಿದ್ದರು ಹಾಗೂ ಸಮಸ್ತ ಉಲಮಾ ಒಕ್ಕೂಟದ ಕೇಂದ್ರೀಯ ಸಮಿತಿ ಸದಸ್ಯರಾದ ಬಹು ಅಬ್ದುಲ್ಲ ಫೈಝಿ ಉಸ್ತಾದ್ ಸಂಗಮ ಉದ್ಘಾಟಿಸಿದರು. ಜಂ ಇಯ್ಯತುಲ್ ಉಲಮಾ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಫೈಝಿ, ಕೋಶಾಧಿಕಾರಿ ಉಮರ್ ಫೈಝಿ ಮೊದಲಾದವರು ಉಪಸ್ಥಿತರಿದ್ದರು. ಎಸ್.ವೈ.ಎಸ್ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಶ್ರಫ್ ಪೈಝಿ ಸ್ವಾಗತಿಸಿ, ವಂದಿಸಿದರು.