*ಗೋಣಿಕೊಪ್ಪ, ಜೂ. ೯: ೭೫ನೇ ಸ್ವಾತಂತ್ರ÷್ಯ ಅಮೃತ ಮಹೋತ್ಸವ ಅಂಗವಾಗಿ ಕರ್ನಾಟಕ ಲಲಿತಾ ಕಲಾ ಅಕಾಡೆಮಿ ಆಯೋಜಿಸುತ್ತಿರುವ ಗಿರಿಜನ ಉಪಯೋಜನೆಯಡಿ ಬಿತ್ತಿ ಚಿತ್ರ ಕಾರ್ಯಾಗಾರವನ್ನು ನಿಟ್ಟೂರು ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ೬ ದಿನಗಳ ಕಾಲ ನಡೆಯಲಿದೆ.

ಕೊಡಗು ವನವಾಸಿ ಕಲ್ಯಾಣ ಆಶ್ರಮ, ಬೆಂಗಳೂರಿನ ಬೆಳಕು ಫೌಂಡೇಶನ್ ಸಹಯೋಗದೊಂದಿಗೆ ನಿಟ್ಟೂರು, ಕಾರ್ಮಾಡು, ವಾಲ್ಮೀಕಿ ಆಶ್ರಮ ಶಾಲೆ ಮತ್ತು ಬಾಳೆಲೆ ವಿಜಯಲಕ್ಷಿ÷್ಮ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಬಿತ್ತಿ ಚಿತ್ರ ರಚನೆ ಕಾರ್ಯಾಗಾರ ರಾಜ್ಯದ ವಿವಿಧ ಜಿಲ್ಲೆಗಳ ೨೧ ನುರಿತ ಯುವ ಕಲಾವಿದರಿಂದ ನಡೆಯಲಿದೆ. ತಾ. ೧೦ ರಂದು (ಇಂದು) ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.