ಸೋಮವಾರಪೇಟೆ, ಜೂ.೯: ತಾಲೂಕಿನಾದ್ಯಂತ ಪದವಿ ಪೂರ್ವ ತರಗತಿಗಳು ಇಂದಿನಿAದ ಆರಂಭಗೊAಡಿದ್ದು, ಪ್ರಥಮ ದಿನದಂದು ವಿದ್ಯಾರ್ಥಿಗಳ ಹಾಜರಾತಿ ಕಡಿಮೆ ಇತ್ತು.

ಇತ್ತೀಚೆಗಷ್ಟೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಬಂದಿದ್ದು, ಹಲವಷ್ಟು ವಿದ್ಯಾರ್ಥಿಗಳು ಇನ್ನೂ ಕಾಲೇಜುಗಳ ಆಯ್ಕೆಯಲ್ಲೇ ನಿರತರಾಗಿರುವುದರಿಂದ ಪ್ರಥಮ ಪಿಯುಸಿ ತರಗತಿಗಳಲ್ಲಿ ಹಾಜರಾತಿಯ ಪ್ರಮಾಣ ಕಡಿಮೆಯಿತ್ತು.

ಕಳೆದ ಶೈಕ್ಷಣಿಕ ವರ್ಷದ ಕೊನೆಯ ಹಂತದಲ್ಲಿ ಕಂಡು ಬಂದ ಹಿಜಾಬ್ ವಿವಾದ, ಈ ಶೈಕ್ಷಣಿಕ ವರ್ಷ ಆರಂಭದಲ್ಲಿ ಮತ್ತೆ ಉದ್ಭವಿಸಬಹುದೇ ಎಂಬ ಸಂಶಯ ಉಪನ್ಯಾಸಕ ವರ್ಗವನ್ನು ಕಾಡಿತ್ತು. ಆದರೆ ಪ್ರಥಮ ದಿನದಂದು ಯಾವುದೇ ಗೊಂದಲಗಳು ಇಲ್ಲದೇ ತರಗತಿಗಳು ನಡೆದವು.

ಪ್ರಥಮ ಪಿಯುಸಿಗೆ ದಾಖಲಾತಿಯಾಗುವ ಸಂದರ್ಭವೇ ಹಿಜಾಬ್ ಸಂಬAಧಿತ ನ್ಯಾಯಾಲಯದ ತೀರ್ಪಿನ ಬಗ್ಗೆ ತಿಳುವಳಿಕೆ ನೀಡಲಾಗಿತ್ತು. ಅದನ್ನು ವಿದ್ಯಾರ್ಥಿಗಳು ಪಾಲಿಸಿದ್ದಾರೆ. ಯಾವುದೇ ಗೊಂದಲವಿಲ್ಲದೆ ತರಗತಿಗಳು ನಡೆದಿವೆ. ಪ್ರಥಮ ಪಿಯುಸಿಗೆ ದಾಖಲಾತಿ ನಡೆಯುತ್ತಿದ್ದು, ದ್ವಿತೀಯ ಪಿಯುಸಿ ತರಗತಿಗಳು ಆರಂಭಗೊAಡಿವೆ ಎಂದು ಕಾಲೇಜಿನ ಪ್ರಾಂಶುಪಾಲರೋರ್ವರು ಅಭಿಪ್ರಾಯಿಸಿದ್ದಾರೆ.

ಇಲ್ಲಿನ ಸಂತ ಜೋಸೆಫರ ಕಾಲೇಜು, ವಿಶ್ವ ಮಾನವ ಕುವೆಂಪು ವಿದ್ಯಾಸಂಸ್ಥೆ, ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ತರಗತಿಗಳು ಆರಂಭಗೊAಡವು.

ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ತರಗತಿಗೆ ೬೦ ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದು, ಇದರಲ್ಲಿ ೩೮ ವಿದ್ಯಾರ್ಥಿಗಳು ಹಾಜರಾಗಿದ್ದರು. ದ್ವಿತೀಯ ಪಿಯುಸಿಯಲ್ಲಿ ೮೨ ವಿದ್ಯಾರ್ಥಿಗಳಿದ್ದು ೫೬ ಮಂದಿ ಆಗಮಿಸಿದ್ದರು. ತರಗತಿಗಳ ಆರಂಭಕ್ಕೆ ಕಾಲೇಜು ಅಭಿವೃದ್ಧಿ ಸಮಿತಿ, ಉಪನ್ಯಾಸಕ ವರ್ಗ ಪೂರ್ವ ಸಿದ್ಧತೆ ಮಾಡಿಕೊಂಡಿದ್ದರಿAದ ಯಾವುದೇ ಗೊಂದಲವಿಲ್ಲದAತೆ ತರಗತಿಗಳು ನಡೆದಿವೆ ಎಂದು ಪ್ರಾಂಶುಪಾಲ ಬೆಳ್ಳಿಯಪ್ಪ ತಿಳಿಸಿದ್ದಾರೆ.