ಸೋಮವಾರಪೇಟೆ, ಜೂ. ೧೦: ಕ್ರೀಡಾಪಟುಗಳಲ್ಲಿ ಧನಾತ್ಮಕ ಚಿಂತನೆ ಇದ್ದರೆ ಮಾತ್ರ ಕ್ರೀಡಾ ಕ್ಷೇತ್ರದಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅಭಿಪ್ರಾಯಿಸಿದರು.
ಇಲ್ಲಿನ ಬ್ಲೂ ಸ್ಟಾರ್ ಹಾಕಿ ಸಂಸ್ಥೆಯ ವತಿಯಿಂದ ಮಹಿಳಾ ಸಮಾಜದಲ್ಲಿ ಆಯೋಜಿಸಿದ್ದ ಸೋಮವಾರಪೇಟೆ ಮೂಲದ ಅಂರ‍್ರಾಷ್ಟಿçÃಯ ಹಾಕಿ ಪಟುಗಳು, ಸೀನಿಯರ್ ನ್ಯಾಷನಲ್ ಹಾಕಿಯಲ್ಲಿ ಭಾಗವಹಿಸಿದ ಆಟಗಾರರಿಗೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ, ಹಾಕಿ ಪಟುಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.
ಕ್ರೀಡೆಯಲ್ಲಿ ಗುರಿಯೊಂದಿಗೆ ಕಠಿಣ ಪರಿಶ್ರಮ ಬೇಕು. ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳಬೇಕು. ಸತತ ಅಭ್ಯಾಸ ದಿಂದ ಮಾತ್ರ ಸಾಧನೆ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ಸೋಮವಾರ ಪೇಟೆಯ ಎಸ್.ವಿ. ಸುನಿಲ್ ಅವರ ಸಾಧನೆ ಎಲ್ಲರಿಗೂ ಪ್ರೇರಣೆಯಾಗಿದೆ ಎಂದು ರಂಜನ್ ಅಭಿಪ್ರಾಯಿಸಿದರು.
ಭಾರತ ಹಾಕಿ ತಂಡವನ್ನು ಪ್ರತಿನಿಧಿಸುತ್ತಿರುವ ಎಸ್.ವಿ. ಸುನಿಲ್ ಅವರು ಪ್ರಪಂಚದ ಅತ್ಯಂತ ವೇಗದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದು, ಮುಂದಿನ ದಿನಗಳಲ್ಲಿ ಭಾರತ ತಂಡದ ನಾಯಕತ್ವ ವಹಿಸಿ ಕೊಂಡು ದೇಶಕ್ಕೆ ಚಿನ್ನದ ಪದಕ ತರು ವಂತಾಗಲಿ ಎಂದು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕೂಡಿಗೆ ಕ್ರೀಡಾ ಶಾಲೆಯ ಆಡಳಿತಾಧಿಕಾರಿ ಎನ್.ಡಿ. ಜಯರಾಂ ಮಾತನಾಡಿ, ಯಾವುದೇ ಕ್ರೀಡಾ ಪಟುಗಳು ಸಾಧನೆ ಮಾಡಬೇಕಾದರೆ ಪೋಷಕರ ಪ್ರೋತ್ಸಾಹ ಇರಬೇಕು ಎಂದರಲ್ಲದೇ, ಸೋಮವಾರಪೇಟೆಗೆ ಕ್ರೀಡಾ ವಸತಿ ಶಾಲೆಯ ಅವಶ್ಯಕತೆ ಯಿದ್ದು, ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಗಮನ ಹರಿಸಬೇಕೆಂದು ಮನವಿ ಮಾಡಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಲೂಸ್ಟಾರ್ ಹಾಕಿ ಸಂಸ್ಥೆಯ ಅಧ್ಯಕ್ಷ ಯಶವಂತ್ ವಹಿಸಿದ್ದರು. ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು, ತಾ.ಪಂ. ಮಾಜಿ ಉಪಾಧ್ಯಕ್ಷ ಅಭಿಮನ್ಯುಕುಮಾರ್, ಸಂಸ್ಥೆಯ ಗೌರವಾಧ್ಯಕ್ಷ ಬಿ.ಎಂ. ಸುರೇಶ್, ಎಂಇಜಿ ಮುಖ್ಯ ತರಬೇತುದಾರ ದೇವದಾಸ್, ತರಬೇತುದಾರ ವೆಂಕಟೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸಂಸ್ಥೆಯ ಬಿ.ಇ. ಅರುಣ್ ಕುಮಾರ್, ಅಭಿಷೇಕ್ ಗೋವಿಂದಪ್ಪ, ಕಿಬ್ಬೆಟ್ಟ ಮಧು, ಬಿ.ಆರ್. ಮಹೇಶ್ ಸೇರಿದಂತೆ ಇತರರು ಕಾರ್ಯಕ್ರಮ ನಿರ್ವಹಿಸಿದರು. ಇತ್ತೀಚೆಗಷ್ಟೇ ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆದÀ ಹೀರೋ ಮೆನ್ಸ್ ಏಷ್ಯಾಕಪ್ ಹಾಕಿ ಕ್ರೀಡಾಕೂಟದಲ್ಲಿ ಭಾಗವಹಿಸಿ ಕಂಚಿನ ಪದಕಕ್ಕೆ ಭಾಜನರಾದ ಸೋಮವಾರಪೇಟೆಯ ಎಸ್.ವಿ. ಸುನಿಲ್ ಹಾಗೂ ಆಭರಣ್ ಸುದೇವ್, ಹಾಸನದ ಶೇಷೇಗೌಡ ಅವರುಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಇದರೊಂದಿಗೆ ಸೀನಿಯರ್ ನ್ಯಾಷನಲ್ ಹಾಕಿಯಲ್ಲಿ ಭಾಗವಹಿಸಿ ಕಂಚಿನ ಪದಕ ಪಡೆದ ಬಾಲಕರ ತಂಡದ ಕ್ರೀಡಾಪಟುಗಳಾದ ಸೋಮವಾರಪೇಟೆಯ ಶಮಂತ್, ಮಹೇಶ್ ಸೇರಿದಂತೆ ಇತರರು ಕಾರ್ಯಕ್ರಮ ನಿರ್ವಹಿಸಿದರು. ಇತ್ತೀಚೆಗಷ್ಟೇ ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆದÀ ಹೀರೋ ಮೆನ್ಸ್ ಏಷ್ಯಾಕಪ್ ಹಾಕಿ ಕ್ರೀಡಾಕೂಟದಲ್ಲಿ ಭಾಗವಹಿಸಿ ಕಂಚಿನ ಪದಕಕ್ಕೆ ಭಾಜನರಾದ ಸೋಮವಾರಪೇಟೆಯ ಎಸ್.ವಿ. ಸುನಿಲ್ ಹಾಗೂ ಆಭರಣ್ ಸುದೇವ್, ಹಾಸನದ ಶೇಷೇಗೌಡ ಅವರುಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಇದರೊಂದಿಗೆ ಸೀನಿಯರ್ ನ್ಯಾಷನಲ್ ಹಾಕಿಯಲ್ಲಿ ಭಾಗವಹಿಸಿ ಕಂಚಿನ ಪದಕ ಪಡೆದ ಬಾಲಕರ ತಂಡದ ಕ್ರೀಡಾಪಟುಗಳಾದ ಸೋಮವಾರಪೇಟೆಯ ಶಮಂತ್, ಸೀನಿಯರ್ ನ್ಯಾಷನಲ್ ಹಾಕಿಯಲ್ಲಿ ಬೆಳ್ಳಿ ಪದಕ ಪಡೆದ ಮಹಿಳಾ ಹಾಕಿ ತಂಡದಲ್ಲಿದ್ದ ಸೋಮವಾರಪೇಟೆ ಕುಡಿಗಾಣ ನಿವಾಸಿ ಪೂಜಾ, ಕರ್ಕಳ್ಳಿಯ ಕಾವ್ಯ, ಅಭಿಮಠ ಗ್ರಾಮದ ಶ್ರಾವ್ಯ, ಹರಗ ಗ್ರಾಮದ ಧನುಶ್ರೀ, ಶನಿವಾರಸಂತೆಯ ಸಂಧ್ಯಾ, ಖೇಲೋ ಇಂಡಿಯಾದಲ್ಲಿ ಭಾಗವಹಿಸಿ ಚಿನ್ನದ ಪದಕಕ್ಕೆ ಭಾಜನರಾದ ನೇಗಳ್ಳೆ ಗ್ರಾಮದ ಆಶಿಕ್ ಎನ್.ಆರ್. ಅವರುಗಳನ್ನು ಅಭಿನಂದಿಸಲಾಯಿತು.
ಇದಕ್ಕೂ ಮುನ್ನ ಪಟ್ಟಣದ ಮುಖ್ಯ ಬೀದಿಗಳಲ್ಲಿ ಹಾಕಿ ಪಟುಗಳನ್ನು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು.