ಗುಡ್ಡಗಾಡು ಓಟ - ನಿತಿನ್‌ಗೆ ಚಿನ್ನದ ಪದಕ

ಮಡಿಕೇರಿ, ಜೂ. ೯: ಬೆಂಗಳೂರಿನ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ನಡೆದ ಬೆಂಗಳೂರು ರನ್ನರ್ಸ್ ಜಾತ್ರೆ ಗುಡ್ಡಗಾಡು ಓಟದ ಸ್ಪರ್ಧೆಯ ೧೦ ಕಿ.ಮೀ. ಪುರುಷರ ಮುಕ್ತ ಸ್ಪರ್ಧೆಯಲ್ಲಿ ಕುಶಾಲನಗರದ ಕರಿಯಪ್ಪ ಬಡಾವಣೆ ನಿವಾಸಿ ನಿತಿನ್ ಕುಮಾರ್ ಚಿನ್ನದ ಪದಕವನ್ನು ಗಳಿಸಿದ್ದಾರೆ. ನಿಗದಿತ ದೂರವನ್ನು ೩೨ ನಿಮಿಷ ೨೭ ಸೆಕೆಂಡ್‌ಗಳಲ್ಲಿ ಕ್ರಮಿಸಿದ ಇವರು, ಚಿಕ್ಕಮಗಳೂರಿನಲ್ಲಿ ನಡೆದ ಓಟದ ಸ್ಪರ್ಧೆಯಲ್ಲೂ ಚಿನ್ನದ ಪದಕವನ್ನು ಪಡೆದ ನಿತಿನ್ ಉಡುಪಿ ಜಿಲ್ಲೆಯ ಅಜ್ಜರಕಾಡು ಕ್ರೀಡಾಂಗಣದಲ್ಲಿ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ ಮತ್ತು ಉಡುಪಿ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ ಪ್ರಾಯೋಜಕತ್ವದಲ್ಲಿ ಮೇ ೮ರಂದು ನಡೆದ ಪುರುಷರ ೫೦೦೦ ಮೀಟರ್ ಓಟದಲ್ಲಿ ಚಿನ್ನದ ಪದಕವನ್ನು ಗಳಿಸುವ ಮೂಲಕ ಸಾಲು ಪದಕಗಳಿಗೆ ಕೊರಳೊಡ್ಡಿದ್ದಾರೆ.