ವೀರಾಜಪೇಟೆ, ಜೂ. ೯: ವೀರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಭಾರತದ ಆರ್ಥಿಕತೆಯಲ್ಲಿ ಬ್ಯಾಂಕಿAಗ್ ಕ್ಷೇತ್ರದ ಪಾತ್ರ ಕುರಿತು ಇತ್ತೀಚೆಗೆ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರೆರೆಯುವ ಮೂಲಕ ಅತಿಥಿ ಗಣ್ಯರು ಉದ್ಘಾಟಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಉಪನ್ಯಾಸ ನೀಡಿದ ಕುಶಾಲನಗರ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಹರ್ಷ ಬಿ.ಡಿಯವರು ಉಪನ್ಯಾಸ ನೀಡುತ್ತಾ, ಬ್ಯಾಂಕುಗಳು ಆರ್ಥಿಕ ಕ್ಷೇತ್ರದ ಸ್ಥಂಭಗಳಿದ್ದ ಹಾಗೆ ೧೭೫೦ರಂದು ಬ್ಯಾಂಕುಗಳು ಉಗಮವಾದವು. ಬ್ಯಾಂಕುಗಳು ಇಲ್ಲದಿದ್ದರೆ ಆರ್ಥಿಕತೆ ಬೆಳೆಯಲು ಸಾಧ್ಯವಿಲ್ಲ. ೧೯೪೯ ರ ನಂತರ ಬ್ಯಾಂಕುಗಳನ್ನು ರಾಷ್ಟಿçÃಕರಣ ಮಾಡಲಾಯಿತು. ನಮ್ಮ ದೇಶದಲ್ಲಿ ಬ್ಯಾಂಕಿAಗ್ ಕ್ಷೇತ್ರ ಶೇಕಡ ನೂರರಷ್ಟು ಡಿಜಿಟಲೀಕರಣಗೊಳ್ಳಲು ದೀರ್ಘಾವಧಿಯ ಸಮಯ ಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ದಯಾನಂದ ಕೆ.ಸಿ ಅವರು ಅಧ್ಯಕ್ಷೀಯ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಮುಲ್ಲೇಂಗಡ ಕಿಟ್ಟು ಕುಟ್ಟಪ್ಪ ಭಾಗವಹಿಸಿದ್ದರು. ಐಕ್ಯೂಎಸಿಯ ಮುಖ್ಯಸ್ಥ ವೇಣುಗೋಪಾಲ್ ಹೆಚ್.ಎಸ್ ವೇದಿಕೆಯಲ್ಲಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಪೂಜಾ ಹೆಚ್.ಪಿ ಸ್ವಾಗತ ಮಾಡಿದರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಉಪನ್ಯಾಸಕರು ಹಾಜರಿದ್ದರು.