ಸೋಮವಾರಪೇಟೆ, ಜೂ. ೯: ಅಂರ್ರಾಷ್ಟಿçÃಯ ಯೋಗ ದಿನಾಚರಣೆ ಪ್ರಯುಕ್ತ ಸೋಮವಾರಪೇಟೆಯ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಆಶ್ರಯದಲ್ಲಿ ಸಾರ್ವಜನಿಕರಿಗೆ ಉಚಿತ ಯೋಗ ತರಬೇತಿ ಶಿಬಿರ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಶಿಕ್ಷಕಿ ರಾಗಿಣಿ ತಿಳಿಸಿದ್ದಾರೆ. ತಾ. ೨೧ ರಂದು ನಡೆಯುವ ಯೋಗ ದಿನಾಚರಣೆ ಅಂಗವಾಗಿ ವಿವಿಧÀ ಯೋಗಾಸನಗಳು, ಪ್ರಾಣಾಯಾಮ ತರಬೇತಿ ಶಿಬಿರವನ್ನು ಪಟ್ಟಣದ ಜೇಸೀ ವೇದಿಕೆ ಮುಂಭಾಗ ಇರುವ ಅಟಲ್ಜೀ ಕನ್ನಡ ಭವನದಲ್ಲಿ ಆಯೋಜಿಸಲಾಗಿದೆ. ತಾ. ೮ ರಿಂದ ಶಿಬಿರ ಆರಂಭಗೊAಡಿದ್ದು, ಪ್ರತಿದಿನ ಸಂಜೆ ೫.೩೦ ರಿಂದ ೬.೩೦ ರವರೆಗೆ ತರಬೇತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಮೊ: ೯೯೪೫೯೮೭೭೧೭ ಸಂಖ್ಯೆಗಳನ್ನು ಸಂಪರ್ಕಿಸಬಹುದು.