ಮುಳ್ಳೂರು, ಜೂ. ೧೦: ನವೀಕರಣಗೊಂಡಿರುವ ಕೊಡ್ಲಿಪೇಟೆ ಹೋಬಳಿಯ ನಾಡ ಕಚೇರಿಯ ಉದ್ಘಾಟನೆ ಮತ್ತು ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ೧೨೪ ಮಂದಿಗೆ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ತಾ. ೧೧ ರಂದು (ಇಂದು) ಬೆಳಿಗ್ಗೆ ೧೦ ಗಂಟೆಗೆ ನಡೆಯಲಿದೆ. ನವೀಕರಣಗೊಳಿಸಿರುವ ನಾಡ ಕಚೇರಿಯನ್ನು ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸಲಿದ್ದಾರೆ. ನಂತರ ನಡೆಯಲಿರುವ ಸಮಾರಂಭದಲ್ಲಿ ಸೋಮವಾರಪೇಟೆ ತಹಶೀಲ್ದಾರ್ ಗೋವಿಂದ್‌ರಾಜ್ ಅಧ್ಯಕ್ಷತೆಯಲ್ಲಿ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಗೆ ಸೇರಿದ ೧೨೫ ಕುಟುಂಬಗಳಿಗೆ ೯೪ಸಿ ಹಕ್ಕುಪತ್ರ ವಿತರಣೆ ಮಾಡಲಾಗುತ್ತದೆ ಎಂದು ಕೊಡ್ಲಿಪೇಟೆ ಹೋಬಳಿ ಉಪ ತಹಶೀಲ್ದಾರ್ ಪುರುಷೋತ್ತಮ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.