ಚೆಟ್ಟಳ್ಳಿ, ಜೂ. ೮: ಕೊಡಗು ಜಿಲ್ಲಾ ಮುಸ್ಲಿಂ ಸ್ಪೋರ್ಟ್ಸ್ ಅಸೋಸಿಯೇಷನ್ ಹಾಗೂ ಎಸ್.ಆರ್.ಎಸ್ ಕ್ರಿಕೆಟರ್ಸ್ ಮೂರ್ನಾಡು ಇವರ ಆಶ್ರಯದಲ್ಲಿ ಮೂರ್ನಾಡುವಿನ ಬಾಚೆಟ್ಟಿರ ಲಾಲು ಮುದ್ದಯ್ಯ ಮೈದಾನದಲ್ಲಿ ನಡೆಯುತ್ತಿರುವ ೧೮ ನೇ ವರ್ಷದ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾವಳಿಯ ನಾಲ್ಕನೇ ದಿನದಲ್ಲಿ ಓಯಸಿಸ್ ಹೊದವಾಡ ಹಾಗೂ ರಾಯಲ್ ಬ್ರದರ್ಸ್ ನೆಲ್ಲಿಹುದಿಕೇರಿ ತಂಡಗಳು ಪ್ರಿ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದುಕೊಂಡಿವೆ.

ಪ್ರಥಮ ಪಂದ್ಯವು ಇ.ವೈ.ಸಿ ತ್ಯಾಗತ್ತೂರು ಹಾಗೂ ಬದ್ರಿಯಾ ಮಡಿಕೇರಿ ತಂಡಗಳ ನಡುವಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಇ.ವೈ.ಸಿ ತಂಡವು ಐದು ಓವರ್‌ನಲ್ಲಿ ಇಬ್ರಾಹಿಂ (೬೭) ಹಾಗೂ ನಸ್ರೂ (೩೮) ಇವರ ಜೊತೆಯಾಟದ ನೆರವಿನಿಂದ ಯಾವುದೇ ವಿಕೆಟ್ ನಷ್ಟವಿಲ್ಲದೆ ೧೧೦ ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತು.

ಬೃಹತ್ ಮೊತ್ತವನ್ನು ಬೆನ್ನಟ್ಟಿದ ಬದ್ರಿಯಾ ಮಡಿಕೇರಿ ತಂಡವು ೪ ವಿಕೆಟ್ ನಷ್ಟಕ್ಕೆ ೧೦೭ ರನ್‌ಗಳ ಕಲೆ ಹಾಕಿತು. ೪ ರನ್‌ಗಳ ವೀರೋಚಿತ ಸೋಲು ಕಂಡಿತು.

ದ್ವಿತೀಯ ಪಂದ್ಯವು ಬ್ಲೂಸ್ಟಾರ್ ಚೆಟ್ಟಿಮಾನಿ ಹಾಗೂ ಓಯಸಿಸ್ ಹೊದವಾಡ ತಂಡಗಳ ನಡುವೆ ನಡೆಯಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಚೆಟ್ಟಿಮಾನಿ ತಂಡವು ಐದು ಓವರ್‌ನಲ್ಲಿ ೭ ವಿಕೆಟ್ ನಷ್ಟಕ್ಕೆ ೩೪ ರನ್ ಕಲೆ ಹಾಕಿತು. ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಹೊದವಾಡ ತಂಡದ ಇಲ್ಯಾಸ್ (೨೩) ಹಾಗೂ ಬಶೀರ್ (೭) ರನ್‌ಗಳ ನೆರವಿನಿಂದ ಹತ್ತು ವಿಕೆಟ್‌ಗಳ ಅಂತರದಿAದ ಗೆದ್ದಿತು. ತೃತೀಯ ಪಂದ್ಯವು ಎಂ.ಜೆ.ಎಮ್ ಕೂಡಿಗೆ ಹಾಗೂ ರೋಯಲ್ ಬ್ರದರ್ಸ್ ನೆಲ್ಲಿಹುದಿಕೇರಿ ತಂಡಗಳ ನಡುವೆ ನಡೆಯಿತು.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೂಡಿಗೆ ತಂಡವು ಐದು ಓವರ್‌ನಲ್ಲಿ ೫ ವಿಕೆಟ್ ನಷ್ಟಕ್ಕೆ ೪೧ ರನ್ ಕಲೆ ಹಾಕಿದರು. ರೋಯಲ್ ಬ್ರದರ್ಸ್ ತಂಡದ ಸಿಯಾಬ್ (೧೨) ರನ್‌ಗಳ ಏಕಾಂಗಿ ಹೋರಾಟದ ಮೂಲಕ ರೋಯಲ್ ಬ್ರದರ್ಸ್ ನೆಲ್ಲಿಹುದಿಕೇರಿ ತಂಡವು ೩ ವಿಕೆಟ್ ಗಳ ಕಷ್ಟದ ಗೆಲುವು ಸಾಧಿಸಿತು.

ನಾಲ್ಕನೇ ಪಂದ್ಯವು ಗ್ರೀನ್ ಸ್ಟಾರ್ ಮಟ್ಟಮ್ ಹಾಗೂ ಚಿಲ್ಲ್ ಬಾಯ್ಸ್ ಮಡಿಕೇರಿ ತಂಡಗಳ ನಡುವೆ ನಡೆಯಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಗ್ರೀನ್ ಸ್ಟಾರ್ ಮಟ್ಟಮ್ ತಂಡದ ರಾಸಿಕ್ (೩೯) ಹಾಗೂ ಶಂಸು (೧೪) ರನ್‌ಗಳ ನೆರವಿನಿಂದ ಮೂರು ವಿಕೆಟ್ ನಷ್ಟಕ್ಕೆ ೫ ಓವರ್‌ನಲ್ಲಿ ೬೫ ರನ್ ಗಳನ್ನು ಕಲೆ ಹಾಕಿದರು.ಚಿಲ್ಲ್ ಬಾಯ್ಸ್ ಮಡಿಕೇರಿ ತಂಡದ ಅಫ್ನಾನ್ ರವರ (೩೭) ರನ್‌ಗಳ ಅಮೋಘ ಬ್ಯಾಟಿಂಗ್ ಮೂಲಕ ಮಡಿಕೇರಿ ತಂಡವು ೬ ವಿಕೆಟ್ ಗಳಿಂದ ಗೆಲುವು ಸಾಧಿಸಿತು.

ಐದನೇ ಪಂದ್ಯವು ಸುಡು ಕ್ರಿಕೆಟರ್ಸ್ ಸಿದ್ದಾಪುರ ಹಾಗೂ ಬ್ಯಾರಿ ವಾರಿಯರ್ಸ್ ಮಡಿಕೇರಿ ತಂಡಗಳ ನಡುವೆ ನಡೆಯಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಸಿದ್ದಾಪುರ ತಂಡವು ಮುನೀರ್ ಅವರ (೩೦) ರನ್‌ಗಳ ನೆರವಿನಿಂದ ಐದು ಓವರ್‌ನಲ್ಲಿ ೪೯ ರನ್ ಕಲೆ ಹಾಕಿತು.

ಬ್ಯಾರಿ ವಾರಿಯರ್ಸ್ ತಂಡವು ೨ ರನ್ ಗಳಿಂದ ವೀರೋಚಿತ ಸೋಲು ಕಂಡಿತು. ಆರನೇ ಪಂದ್ಯವು ಅರಫಾ ಕಡಂಗ ಹಾಗೂ ಯುನೈಟೆಡ್ ಕೊಯನಾಡು ತಂಡಗಳ ನಡುವೆ ನಡೆಯಿತು. ಮೊದಲು ಬ್ಯಾಟ್ ಮಾಡಿದ ಕಡಂಗ ತಂಡವು ಜಾಫರ್ ಅವರ (೩೪) ರನ್‌ಗಳ ನೆರವಿನಿಂದ ಐದು ಓವರ್‌ನಲ್ಲಿ ೩ ವಿಕೆಟ್ ನಷ್ಟಕ್ಕೆ ೫೧ ರನ್ ಕಲೆ ಹಾಕಿತು.

ಯುನೈಟೆಡ್ ಕೊಯನಾಡು ತಂಡದ ರಮೀಜ್ ಅವರ ೩೧ ರನ್‌ಗಳ ಅಮೋಘ ಬ್ಯಾಟಿಂಗ್‌ನಿAದ ಯುನೈಟೆಡ್ ಕೊಯನಾಡು ತಂಡವು ೯ ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು. ಏಳನೇ ಪಂದ್ಯದಲ್ಲಿ ಗ್ರೀನ್ ಸ್ಟಾರ್ ಸೋಮವಾರಪೇಟೆ ತಂಡದ ವಿರುದ್ಧ ಟಾಸ್ ಗೆದ್ದು ಬ್ಯಾಟ್ ಮಾಡಿದ ಲಿಮ್ರಾ ಮೆಕೇರಿ ತಂಡವು ಸಮೀರ್ ರವರ (೧೪) ರನ್‌ಗಳ ನೆರವಿನಿಂದ ಐದು ಓವರ್‌ನಲ್ಲಿ ೩ ವಿಕೆಟ್ ನಷ್ಟಕ್ಕೆ ೬೭ ರನ್‌ಗಳನ್ನು ಗಳಿಸಿತು. ಸೋಮವಾರಪೇಟೆ ತಂಡವು ೩೬ ರನ್‌ಗಳಿಂದ ಸೋಲು ಕಂಡಿತು.

ಎAಟನೇ ಪಂದ್ಯವು ಗ್ರೀನ್ ಬಾಯ್ಸ್ ಅಂಬಟ್ಟಿ ಹಾಗೂ ಟೀಮ್ ೯೬ ಕಲ್ಕಂದೂರು ತಂಡಗಳ ನಡುವೆ ನಡೆಯಿತು.ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಅಂಬಟ್ಟಿ ತಂಡವು ಸಮೀರ್ ಅವರ (೧೫) ರನ್‌ಗಳ ನೆರವಿನಿಂದ ಐದು ಓವರ್‌ನಲ್ಲಿ ೪ ವಿಕೆಟ್ ನಷ್ಟಕ್ಕೆ ೪೪ ರನ್‌ಗಳನ್ನು ಗಳಿಸಿತು. ಟೀಮ್ ೯೬ ಕಲ್ಕಂದೂರು ೯ ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.

ಒಂಭತ್ತನೆ ಪಂದ್ಯವು ತಾಜ್ ಕುಶಾಲನಗರ ಹಾಗೂ ಸಹರಾ ಹೊಳಮಾಳ ತಂಡಗಳ ನಡುವಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕುಶಾಲನಗರ ತಂಡವು ತಶಿ (೩೬) ಹಾಗೂ ಸಲ್ಮಾನ್ (೩೦) ರನ್‌ಗಳ ನೆರವಿನಿಂದ ಎರಡು ವಿಕೆಟ್ ನಷ್ಟಕ್ಕೆ ಐದು ಓವರ್‌ನಲ್ಲಿ ೧೦೪ ರನ್ ಕಲೆಹಾಕಿತು.

ಬೃಹತ್ ಮೊತ್ತವನ್ನು ಬೆನ್ನಟ್ಟಿದ ಹೊಳಮಾಳ ತಂಡವು ೭೬ ರನ್‌ಗಳಿಂದ ಹೀನಾಯ ಸೋಲು ಕಂಡಿತು. ಹತ್ತನೇ ಪಂದ್ಯವು ಪಿಸಿಸಿ ಕಲ್ಲುಬಾಣೆ ಹಾಗೂ ಬ್ಲಾö್ಯಕ್ ಕ್ಯಾಟ್ಸ್ ಮಡಿಕೇರಿ ತಂಡಗಳ ನಡುವೆ ನಡೆಯಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕಲ್ಲುಬಾಣೆ ತಂಡವು ಐದು ಓವರ್‌ನಲ್ಲಿ ೦೫ ವಿಕೆಟ್ ನಷ್ಟಕ್ಕೆ ೩೬ ರನ್ ಕಲೆಹಾಕಿತು. ಬ್ಲಾö್ಯಕ್ ಕ್ಯಾಟ್ಸ್ ಮಡಿಕೇರಿ ತಂಡವು ೭ ವಿಕೆಟ್‌ಗಳ ಅಂತರದಿAದ ಗೆದ್ದಿತು.

ದ್ವಿತೀಯ ಸುತ್ತಿನ ಮೊದಲ ಪಂದ್ಯವು ಓಯಸಿಸ್ ಹೊದವಾಡ ಹಾಗೂ ಇ.ವೈ.ಸಿ. ತ್ಯಾಗತ್ತೂರು ತಂಡಗಳ ನಡುವೆ ನಡೆಯಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಹೊದವಾಡ ತಂಡವು ಇಲ್ಯಾಸ್ ಅವರ ಏಕಾಂಗಿ (೪೪) ರನ್‌ಗಳ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದ ಐದು ಓವರ್‌ನಲ್ಲಿ ೪ ವಿಕೆಟ್ ನಷ್ಟಕ್ಕೆ ೫೧ ರನ್ ಕಲೆ ಹಾಕಿತು. ಇ.ವೈ.ಸಿ ತ್ಯಾಗತ್ತೂರು ತಂಡವು ೨೪ ರನ್‌ಗಳಿಂದ ಸೋಲು ಕಂಡಿತು. ರೋಯಲ್ ಬ್ರದರ್ಸ್ ನೆಲ್ಲಿಹುದಿಕೇರಿ ಹಾಗೂ ಚಿಲ್ಲ್ ಬಾಯ್ಸ್ ಮಡಿಕೇರಿ ತಂಡಗಳ ನಡುವೆ ನಡೆಯಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಚಿಲ್ಲ್ ಬಾಯ್ಸ್ ಮಡಿಕೇರಿ ತಂಡವು, ೬ ವಿಕೆಟ್ ನಷ್ಟಕ್ಕೆ ೨೭ ರನ್ ಕಲೆ ಹಾಕಿತು. ರಾಯಲ್ ಬ್ರದರ್ಸ್ ನೆಲ್ಲಿಹುದಿಕೇರಿ ತಂಡವು ೮ ವಿಕೆಟ್‌ಗಳ ಅಂತರದಿAದ ಗೆದ್ದು ಪ್ರ‍್ರೀ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿತು. (ಕೆ.ಎಂ ಇಸ್ಮಾಯಿಲ್ ಕಂಡಕರೆ)