ಮಿಥಾಲಿ ರಾಜ್ ವಿದಾಯ

ನವದೆಹಲಿ, ಜೂ. ೮: ಸುಮಾರು ೨೩ ವರ್ಷಗಳು ಭಾರತೀಯ ಮಹಿಳೆಯರ ಕ್ರಿಕೆಟ್ ತಂಡದಲ್ಲಿ ಆಡಿ ಹಲವಾರು ವರ್ಷಗಳು ತಂಡದ ನಾಯಕಿ ಆಗಿ ಕಾರ್ಯನಿರ್ವಹಿಸಿದ್ದಲ್ಲದೆ, ಮಹಿಳೆಯರ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳನ್ನು ಗಳಿಸಿದ ಹಿರಿಮೆ ಹೊಂದಿರುವ ಮಿಥಾಲಿ ರಾಜ್ ಅವರು ಅಂರ‍್ರಾಷ್ಟಿçÃಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದಾರೆ.

ಮಾಸ್ಕ್ ಧರಿಸದ ಪ್ರಯಾಣಿಕರಿಗೆ ಅವಕಾಶವಿಲ್ಲ

ನವದೆಹಲಿ, ಜೂ. ೮: ದೇಶದಲ್ಲಿ ಕೋವಿಡ್ ಪ್ರಕರಣಗಳು ದಿನೇ ದಿನೇ ಹೆಚ್ಚಳ ಆಗುತ್ತಿರುವ ಹಿನ್ನೆಲೆ ಮಾಸ್ಕ್ ಧಾರಣೆಗೆ ಕೇಂದ್ರ ಸರ್ಕಾರ ಒತ್ತು ನೀಡಿದ್ದು, ಮಾಸ್ಕ್ ಧರಿಸದ ಪ್ರಯಾಣಿಕರನ್ನು ಮುಲಾಜಿಲ್ಲದೆ ಕೆಳಿಗಿಳಿಸಿ ಎಂದು ವಿಮಾನಯಾನ ಸಂಸ್ಥೆಗಳಿಗೆ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಖಡಕ್ ಎಚ್ಚರಿಕೆ ನೀಡಿದೆ. ದೇಶದಲ್ಲಿ ಕೋವಿಡ್ ಪ್ರಕರಣಗಳು ಗಣನೀಯವಾಗಿ ಏರಿಕೆ ಕಾಣುತ್ತಿದ್ದು, ಆಡಳಿತಗಳು ಕೋವಿಡ್ ನಿಯಮಗಳನ್ನು ಮತ್ತೆ ಕಡ್ಡಾಯ ಗೊಳಿಸುತ್ತಿವೆ. ಆದಾಗ್ಯೂ ವಿಮಾನ ನಿಲ್ದಾಣಗಳಲ್ಲಿ ಹಾಗೂ ವಿಮಾನ ಗಳಲ್ಲಿ ಕೆಲವು ಬೇಜವಾಬ್ದಾರಿ ಪ್ರಯಾಣಿಕರು ಮಾಸ್ಕ್ ಧರಿಸಲು ನಿರಾಕರಿಸುತ್ತಿದ್ದಾರೆ. ಹೀಗಾಗಿ, ಮಾಸ್ಕ್ ಧರಿಸದ ಪ್ರಯಾಣಿಕರನ್ನು ವಿಮಾನ ಟೇಕ್‌ಆಫ್ ಆಗುವ ಮುನ್ನ ಕೆಳಗಿಳಿಸುವಂತೆ ವಿಮಾನಯಾನ ಸಂಸ್ಥೆಗಳಿಗೆ ಡಿಜಿಸಿಎ ಸೂಚನೆ ನೀಡಿದ್ದು, ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಕಣ್ಣಿಡಿ ಎಂದು ಸಿಐಎಸ್‌ಎಫ್ ಪಡೆಗೂ ಡಿಜಿಸಿಎ ತಾಕೀತು ಮಾಡಿದೆ. ಕೆಲ ದಿನಗಳ ಹಿಂದಷ್ಟೇ ದೆಹಲಿ ಹೈಕೋರ್ಟ್ ಕೂಡಾ ವಿಮಾನ ನಿಲ್ದಾಣಗಳಲ್ಲಿ ಹಾಗೂ ವಿಮಾನಗಳಲ್ಲಿ ಮಾಸ್ಕ್ ಧರಿಸದ ಪ್ರಯಾಣಿಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಮಾನಯಾನ ನಿರ್ದೇಶ ನಾಲಯಕ್ಕೆ ಛಾಟಿ ಬೀಸಿತ್ತು. ಈ ಹಿನ್ನೆಲೆಯಲ್ಲಿ ಡಿಜಿಸಿಎ ಹೊಸ ನಿಯಮಾವಳಿಗಳನ್ನು ಪ್ರಕಟಿಸಿದೆ.

ಭತ್ತದ ಕನಿಷ್ಟ ಬೆಂಬಲ ಬೆಲೆ ರೂ. ೧೦೦ ಏರಿಕೆ; ಕೇಂದ್ರ ಸಂಪುಟ ಸಭೆ ನಿರ್ಧಾರ

ನವದೆಹಲಿ, ಜೂ. ೮: ಭತ್ತದ ಕನಿಷ್ಟ ಬೆಂಬಲ ಬೆಲೆ(ಎಂಎಸ್‌ಪಿ)ಯಲ್ಲಿ ಕೇಂದ್ರ ಸರ್ಕಾರ ರೂ. ೧೦೦ ಹೆಚ್ಚಳ ಮಾಡಿದ್ದು, ಈ ಕುರಿತು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತಂತೆ ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಸುದ್ದಿಗಾರರಿಗೆ ಮಾಹಿತಿ ನೀಡಿದ್ದು, ಭತ್ತದ ಕನಿಷ್ಟ ಬೆಂಬಲ ಬೆಲೆ(ಎಂಎಸ್‌ಪಿ)ಯಲ್ಲಿ ಕೇಂದ್ರ ಸರ್ಕಾರ ರೂ. ೧೦೦ ಹೆಚ್ಚಳ ಮಾಡಲಾಗಿದೆ. ಈ ಪರಿಷ್ಕೃತ ದರ ೨೦೨೨-೨೩ರ ಬೆಳೆ ವರ್ಷಕ್ಕೆ ಅನ್ವಯ ವಾಗುತ್ತಿದ್ದು, ಪ್ರತಿ ಕ್ವಿಂಟಲ್ ಭತ್ತದ ಎಂಎಸ್‌ಪಿ ೨,೦೪೦ರೂ. ಗೆ ಏರಿಕೆಯಾಗಿದೆ ಎಂದು ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು(ಸಿಸಿಇಎ) ೨೦೨೨–೨೩ರ ಬೆಳೆ ವರ್ಷದಲ್ಲಿ ಎಲ್ಲ ಕಡ್ಡಾಯ ಖಾರಿಫ್ (ಬೇಸಿಗೆ) ಬೆಳೆಗಳಿಗೆ ಅನ್ವಯ ವಾಗುವಂತೆ ಎಂಎಸ್‌ಪಿ ಹೆಚ್ಚಳಕ್ಕೆ ಅನುಮೋದನೆ ನೀಡಿದೆ. ಇಂದಿನ ಕ್ಯಾಬಿನೆಟ್ ಸಭೆಯಲ್ಲಿ ೧೪ ಖಾರಿಫ್ ಬೆಳೆಗಳ ಎಂಎಸ್‌ಪಿಯನ್ನು ಅನು ಮೋದಿಸಲಾಗಿದೆ ಎಂದು ತಿಳಿಸಿದರು. ಮುಂಗಾರಿನಲ್ಲಿ ಬೆಳೆಯುವ ಬೆಳೆಗಳ ಬೆಂಬಲ ಬೆಲೆ ಏರಿಕೆ ನಿರ್ಧರಿಸಲಾಗಿದೆ. ಕ್ವಿಂಟಾಲ್ ಬೇಳೆ ಬೆಂಬಲ ಬೆಲೆ ೪೮೦ ರೂ ಹೆಚ್ಚಳ. ಕ್ವಿಂಟಾಲ್ ಎಳ್ಳು ೫೨೩ ರೂ ಹೆಚ್ಚಳ. ಸೂರ್ಯಕಾಂತಿ ಬೀಜದ ಬೆಂಬಲ ಬೆಲೆ ೩೮೫ ರೂ. ಹೆಸರುಕಾಳು ಕ್ವಿಂಟಾಲ್‌ಗೆ ರೂ. ೩೦೦ ಏರಿಕೆ ಮಾಡಲು ತೀರ್ಮಾನಿಸಲಾಗಿದೆ. ತೊಗರಿ ಮೇಲಿನ ಬೆಂಬಲೆ ಬೆಲೆ ಕ್ವಿಂಟಾಲ್‌ಗೆ ರೂ. ೩೦೦, ಹೆಸರು ಕಾಳಿಗೆ ರೂ. ೩೦೦, ರಾಗಿ ಬೆಂಬಲ ಬೆಲೆ ೨೦೧ ರೂ. ಶೇಂಗಾ ೩೦೦ ರೂ., ಹತ್ತಿ ಬೆಂಬೆಲ ಬೆಲೆ ೩೫೪ ರೂ. ಹೆಚ್ಚಳ ಮಾಡಲು ಸಂಫುಟ ಸಭೆಯಲ್ಲಿ ಈ ಕುರಿತು ತೀರ್ಮಾನ ತೆಗೆದು ಕೊಳ್ಳಲಾಗಿದೆ ಎಂದರು. ಸಾಮಾನ್ಯ ಗ್ರೇಡ್‌ನ ಭತ್ತದ ಮೇಲಿನ ಎಂಎಸ್‌ಪಿ ೧,೯೪೦ ರೂ ರಿಂದ ೨,೦೪೦ ರೂಗೆ ಹೆಚ್ಚಿಸಲಾಗಿದೆ. ಎ ಗ್ರೇಡ್ ಭತ್ತದ ಮೇಲಿನ ಎಂಎಸ್‌ಪಿ ೧,೯೬೦ ರಿಂದ ೨,೦೬೦ ರೂಗೆ ಏರಿಸಲಾಗಿದೆ. ಭತ್ತವು ಖಾರಿಫ್‌ನ ಪ್ರಮುಖ ಬೆಳೆಯಾಗಿದೆ. ರೈತರು ಈಗಾಗಲೇ ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. ಜೂನ್-ಸೆಪ್ಟೆಂಬರ್ ಅವಧಿಯಲ್ಲಿ ಸಾಮಾನ್ಯ ಮುಂಗಾರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.

ಮಿಲಿಟರಿ ಸಹಕಾರ ಒಪ್ಪಂದಕ್ಕೆ ಭಾರತ-ವಿಯೆಟ್ನಾಂ ಸಹಿ

ಹನೋಯಿ, ಜೂ. ೮: ಭಾರತ ಮತ್ತು ವಿಯೆಟ್ನಾಂ ದ್ವಿಪಕ್ಷೀಯ ಮಿಲಿಟರಿ ಸಹಕಾರ ಒಪ್ಪಂದಕ್ಕೆ ಬುಧವಾರ ಸಹಿ ಹಾಕಿವೆ. ಈ ಮೂಲಕ ಇದೇ ಮೊದಲ ಬಾರಿಗೆ ವಿಯೆಟ್ನಾಂ ಬೇರೊಂದು ದೇಶದೊಂದಿಗೆ ಮಿಲಿಟರಿ ಸಹಕಾರ ಪ್ರಕ್ರಿಯೆಯನ್ನು ಸರಳಗೊಳಿಸುವ ಒಪ್ಪಂದ ಮಾಡಿಕೊಂಡಿದೆ. ಮೂರು ದಿನಗಳ ಕಾಲ ಇಲ್ಲಿಗೆ ಭೇಟಿ ನೀಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಾತುಕತೆ ನಡೆಸಿದ ಬೆನ್ನಲ್ಲೇ ಈ ಒಪ್ಪಂದ ನಡೆದಿದೆ. ಇದೇ ವೇಳೆ ಉಭಯ ದೇಶಗಳ ದ್ವಿಪಕ್ಷೀಯ ಸಂಬAಧವನ್ನು ವೃದ್ಧಿಸುವ ಹಲವು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಜೂನ್ ೮ ರಿಂದ ಮೂರು ದಿನಗಳ ಭೇಟಿಗಾಗಿ ಪ್ರಮುಖ ಆಗ್ನೇಯ ಏಷ್ಯಾದ ದೇಶದಲ್ಲಿರುವ ಸಿಂಗ್, ವಿಯೆಟ್ನಾಂನ ರಾಷ್ಟಿçÃಯ ರಕ್ಷಣಾ ಸಚಿವಾಲಯದ ಪ್ರಧಾನ ಕಚೇರಿಯಲ್ಲಿ ಗೌರವ ಗೌರವವನ್ನು ಸ್ವೀಕರಿಸಿದರು. ಸಿಂಗ್ ಅವರಿಗೆ ಜನರಲ್ ಜಿಯಾಂಗ್ ಅವರು ಭವ್ಯ ಸ್ವಾಗತವನ್ನು ನೀಡಿದರು. ದ್ವಿಪಕ್ಷೀಯ ರಕ್ಷಣಾ ಕಾರ್ಯಗಳನ್ನು ಮತ್ತಷ್ಟು ವಿಸ್ತರಿಸಲು ಪರಿಣಾಮಕಾರಿ ಮತ್ತು ಪ್ರಾಯೋಗಿಕ ಉಪಕ್ರಮಗಳ ಕುರಿತು ವ್ಯಾಪಕ ಚರ್ಚೆಗಳು ಮತ್ತು ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ನಡುವೆ ಉಭಯ ದೇಶಗಳ ನಡುವೆ ನಡೆದವು ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ೨೦೩೦ ರ ಕಡೆಗೆ ಭಾರತ-ವಿಯೆಟ್ನಾಂ ರಕ್ಷಣಾ ಪಾಲುದಾರಿಕೆ ಕುರಿತು ಜಂಟಿ ವಿಷನ್ ಹೇಳಿಕೆಗೆ ಇಬ್ಬರು ರಕ್ಷಣಾ ಮಂತ್ರಿಗಳು ಸಹಿ ಹಾಕಿದರು, ಇದು ಅಸ್ತಿತ್ವದಲ್ಲಿರುವ ರಕ್ಷಣಾ ಸಹಕಾರದ ವ್ಯಾಪ್ತಿ ಮತ್ತು ಪ್ರಮಾಣವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ, ಈ ಸಮಯದಲ್ಲಿ ಚೀನಾವು ಕಾರ್ಯತಂತ್ರದ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ತನ್ನ ಸಾಮರ್ಥ್ಯ ಹೆಚ್ಚಿಸಲಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.