ಮಡಿಕೇರಿ: ಪರಿಸರದ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದ್ದು ಭವಿಷ್ಯದ ದೃಷ್ಟಿಯಿಂದ ಅರಣ್ಯ ಸಂರಕ್ಷಣೆಗಾಗಿ ಅರಣ್ಯ ಪ್ರದೇಶದಲ್ಲಿ ಹಮ್ಮಿಕೊಂಡಿರುವ ಬೀಜೋತ್ಸವದ ಮೂಲಕ ಕಾಡು ಪ್ರದೇಶ ಹಾಗೂ ಖಾಲಿ ಜಾಗದಲ್ಲಿ ಅರಣ್ಯ ಬಿತ್ತನೆ ಬೀಜವನ್ನು ಬಿತ್ತಿ ಗಿಡ ಮರಗಳನ್ನು ಬೆಳೆಸುವ ಮೂಲಕ ಹೆಚ್ಚೆಚ್ಚು ಅರಣ್ಯ ಪ್ರದೇಶವನ್ನು ವೃದ್ಧಿಸುವ ಮೂಲಕ ಪರಿಸರ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ ಬಿ.ಸಿ. ಸತೀಶ ಅವರು ಕರೆ ನೀಡಿದರು.
ಜಿಲ್ಲಾಡಳಿತ, ಅರಣ್ಯ ಇಲಾಖೆ ವತಿಯಿಂದ ನಗರದ ಹೊರವಲಯದ ನಿಶಾನೆ ಮೊಟ್ಟೆ ಬೆಟ್ಟದ ಅರಣ್ಯದಲ್ಲಿ ಭಾನುವಾರ 'ಒಂದೇ ಒಂದು ಭೂಮಿ" : ಪ್ರಕೃತಿಯೊಂದಿಗೆ ಸುಸ್ಥಿರ ಸಹಬಾಳ್ವೆ' ಎಂಬ ಕೇಂದ್ರ ವಿಷಯದಡಿ ನಡೆದ 'ವಿಶ್ವ ಪರಿಸರ ದಿನಾಚರಣೆ" ಸಂದರ್ಭದಲ್ಲಿ ಅರಣ್ಯ ಇಲಾಖೆಯ ವಿನೂತನ ಕಾರ್ಯಕ್ರಮವಾದ "ಬೀಜ ಬಿತ್ತೋಣ- ಅರಣ್ಯ ಬೆಳೆಸೋಣ”: ಬೀಜೋತ್ಸವ ಅಭಿಯಾನದಲ್ಲಿ ಬೀಜ ಬಿತ್ತನೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ನಾವು ಪಶ್ಚಿಮಘಟ್ಟದಲ್ಲಿನ ಜೀವ ವೈವಿಧ್ಯ, ಜಲಮೂಲಗಳನ್ನು ಸಂರಕ್ಷಿಸುವ ಮೂಲಕ ಸುಂದರ ಪ್ರಕೃತಿ ತಾಣವಾದ ಕೊಡಗಿನ ಅರಣ್ಯ, ಪರಿಸರ, ಜೀವ ವೈವಿಧ್ಯ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು. ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ತಮ್ಮ ಸುತ್ತಲಿನ ಪರಿಸರದಲ್ಲಿ ಹೆಚ್ಚೆಚ್ಚು ಗಿಡಗಳನ್ನು ನೆಟ್ಟು ಸಂರಕ್ಷಿಸಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರೂ ಆದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎನ್.ಪಿ. ಅನಿತಾ ಮಾತನಾಡಿ, ಮಕ್ಕಳು ತಮ್ಮನ್ನು ಪರಿಸರ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಭವಿಷ್ಯದಲ್ಲಿ ಪರಿಸರ ಸಂರಕ್ಷಣೆಯಲ್ಲಿ ತೊಡಗಬೇಕು ಎಂದರು.
ಅರಣ್ಯದಲ್ಲಿ ಕೈಗೊಂಡಿರುವ ಬೀಜೋತ್ಸವದ ಮಹತ್ವದ ಕುರಿತು ಮಾಹಿತಿ ನೀಡಿದ ಕೊಡಗು ಅರಣ್ಯ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್.ಎನ್. ಮೂರ್ತಿ ಪ್ರಸಕ್ತ ಪರಿಸರ ದಿನಾಚರಣೆ ಸಂದರ್ಭದಲ್ಲಿ ಅರಣ್ಯ ಇಲಾಖೆ ಈ ಬಾರಿ ಬೀಜೋತ್ಸವ ಆರಂಭಿಸಿದ್ದು, ಅತ್ಯಮೂಲ್ಯ ಮರಗಳ ಬೀಜ ಸಂಗ್ರಹಿಸಿ, ‘ಬೀಜ ಬಿತ್ತೋಣ, ಅರಣ್ಯ ಬೆಳೆಸೋಣ' ಎಂಬ ಮಹತ್ವದ ಬೀಜೋತ್ಸವದ ಅಭಿಯಾನ ಆರಂಭಿಸಿದೆ. ಬೀಜೋತ್ಸವ ಕಾರ್ಯಕ್ರಮ ತಾ. ೧೨ ರವರೆಗೆ ನಡೆಯಲಿದ್ದು, ಈ ಅಭಿಯಾನದಲ್ಲಿ ಶಾಲಾ-ಕಾಲೇಜಿನ ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ನಾಗರಿಕರು ಸಾಧ್ಯವಾದಷ್ಟು ಎಲ್ಲರೂ ಅರಣ್ಯ ಸಂರಕ್ಷಣೆಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಬೀಜೋತ್ಸವದ ಮಹತ್ವ ತಿಳಿಸಿದ ಮಡಿಕೇರಿ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ. ಪೂವಯ್ಯ, ಕಾಡಿನಲ್ಲಿ ಹೇಗೆ ಅರಣ್ಯ ಬಿತ್ತನೆ ಬೀಜ ಬಿತ್ತುವುದು ಮತ್ತು ಮಳೆ ಸಂದರ್ಭದಲ್ಲಿ ಆ ಬೀಜಗಳು ಹೇಗೆ ಮೊಳಕೆ ಬಂದು ಗಿಡವಾಗಿ ಬೆಳೆಯುತ್ತವೆ. ನಾವು ನೈಸರ್ಗಿಕ ಅರಣ್ಯ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ಅರಣ್ಯ ಇಲಾಖೆಯ ವತಿಯಿಂದ ಅರಣ್ಯ ಪ್ರದೇಶದಲ್ಲಿ ಮತ್ತಿ, ತಾರೆ, ಮಹಾಗಣಿ, ಅಳಲೆ, ನೆಲ್ಲಿ, ಬೇವು, ಮಾವು ಮೊದಲಾದ ಬಿತ್ತನೆ ಬೀಜಗಳನ್ನು ಬಿತ್ತನೆ ಮಾಡಲಾಗುತ್ತಿದೆ ಎಂದು ಪೂವಯ್ಯ ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ನಂಜುAಡೇಗೌಡ, ಜಿಲ್ಲಾ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ. ಬೇಬಿ ಮಾಥ್ಯೂ, ಡಿಎಫ್ಓ ಪೂರ್ಣಿಮ, ಶಿವರಾಮ್ ಬಾಬು, ಡಿಡಿಪಿಐ ವೇದಮೂರ್ತಿ, ನಗರಸಭೆಯ ಪೌರಾಯುಕ್ತ ರಾಮದಾಸ್, ರಾಷ್ಟಿçÃಯ ಹಸಿರು ಪಡೆಯ ಜಿಲ್ಲಾ ನೋಡಲ್ ಅಧಿಕಾರಿ ಟಿ.ಜಿ. ಪ್ರೇಮಕುಮಾರ್, ಆರ್ಎಫ್ಓ ಮಧುಸೂದನ್, ಮಯೂರ್ ಕಾರವೇಕರ್, ಡಿಆರ್ಎಫ್ಗಳಾದ ದರ್ಶಿನಿ, ರಾಥೋಡ್, ಕ್ಲಬ್ ಮಹೀಂದ್ರ ರೆಸಾರ್ಟ್ನ ಸ್ವಯಂ ಸೇವಕರು, ಅರಣ್ಯ ರಕ್ಷಕರು ಮತ್ತು ಅರಣ್ಯ ವೀಕ್ಷಕರು ಇದ್ದರು. ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಂಘಟಕಿ ದಮಯಂತಿ ಪ್ರತಿಜ್ಞಾ ವಿಧಿ ಬೋಧಿಸಿದರು. ಮದೆನಾಡು ಕಾಲೇಜಿನ ಪ್ರಾಂಶುಪಾಲ ಸಿದ್ದರಾಜು, ವಿಜ್ಞಾನ ಪರಿಷತ್ತಿನ ಪದಾಧಿಕಾರಿಗಳಾದ ಎಂ.ಎನ್. ವೆಂಕಟನಾಯಕ್, ಎಂ.ಹೆಚ್. ಹರೀಶ್, ಇತರರು ಇದ್ದರು.
ಅರಣ್ಯ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಸೇರಿದಂತೆ ನೌಕರರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು, ಸ್ವಯಂ ಸೇವಕರು ಜತೆಗೂಡಿ ನಿಶಾನೆ ಮೊಟ್ಟೆ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿನ ತಾಜ್ ರೆಸಾರ್ಟ್ ಸಮೀಪದ ಬೆಟ್ಟದಲ್ಲಿ ವಿವಿಧ ಜಾತಿಯ ಬೀಜಗಳನ್ನು ಬಿತ್ತನೆ ಮಾಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ರಾಷ್ಟಿçÃಯ ಹಸಿರು ಪಡೆ ಇಕೋ ಕ್ಲಬ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿಯ ಪದಾಧಿಕಾರಿಗಳು, ನಗರದ ಸಂತ ಜೋಸೆಫರ ಬಾಲಕಿಯರ ಬುಲ್ಬುಲ್ಸ್ ತಂಡ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಾಲಕಿಯರ ರೇಂಜರ್ಸ್ ತಂಡದ ವಿದ್ಯಾರ್ಥಿಗಳು, ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಇಕೋ ಕ್ಲಬ್ನ ವಿದ್ಯಾರ್ಥಿಗಳ ಹಸಿರು ಪಡೆ ತಂಡ, ಸ್ಕೌಟ್ಸ್-ಗೈಡ್ಸ್ನ ಸ್ವಯಂ ಸೇವಕರು ಮತ್ತು ಅರಣ್ಯ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಜತೆಗೂಡಿ ನಿಶಾನೆ ಮೊಟ್ಟೆ ಅರಣ್ಯ ಪ್ರದೇಶದಲ್ಲಿ ಬೀಜ ಬಿತ್ತನೆ ಮಾಡಿದರು.ಶನಿವಾರಸಂತೆ: ಪಟ್ಟಣದ ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯಲ್ಲಿ ಹಸಿರು ಉಡುಪು ಧರಿಸಿದ್ದ ವಿದ್ಯಾರ್ಥಿಗಳು ವಿಶ್ವ ಪರಿಸರ ದಿನವನ್ನು ಶಾಲಾ ಆವರಣ ಸುತ್ತ ೬೦೦ಕ್ಕೂ ಅಧಿಕ ಗಿಡಗಳನ್ನು ನೆಡುವ ಮೂಲಕ ಸಂಭ್ರಮದಿAದ ಆಚರಿಸಿದರು.
ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿದ ಶನಿವಾರಸಂತೆ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ಸಿ.ಕೆ. ದಿನೇಶ್ ಮಾತನಾಡಿ, ಇರುವುದೊಂದೇ ಭೂಮಿಯಲ್ಲಿ ಹಸಿರೇ ಉಸಿರು. ಹಸಿರು ಉಳಿಸಲು ಮನೆಗೊಂದು ಗಿಡ ನೆಡುವ ಮೂಲಕ ಪರಿಸರ ಉಳಿಸಬೇಕು. ಪ್ರತಿ ವಿದ್ಯಾರ್ಥಿಯೂ ಮನೆಯಿಂದ ಒಂದೊAದು ಗಿಡ ತಂದು ಶಾಲೆಯ ಮೂಲಕ ಪ್ರಕೃತಿಗೆ ಕೊಡುಗೆ ನೀಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
೨೫೦ ವಿದ್ಯಾರ್ಥಿಗಳು ವಿದ್ಯಾಸಂಸ್ಥೆಯ ಆವರಣದಲ್ಲಿ ತಾವು ಮನೆಗಳಿಂದ ತಂದಿದ್ದ ೬೦೦ಕ್ಕೂ ಅಧಿಕ ತೆಂಗು, ಅಡಿಕೆ, ಬಾಳೆ, ಮಾವು, ಹಲಸು, ಸ್ಟಾçಬೆರಿ, ಬೆಣ್ಣೆಹಣ್ಣು, ರಾಮಫಲ, ಸೀತಾಫಲ, ಸೀಬೆ, ದಾಳಿಂಬೆ ಹಣ್ಣುಗಳು ಗಿಡಗಳು, ಗುಲಾಬಿ, ಮಲ್ಲಿಗೆ, ಸಂಪಿಗೆ, ಕನಕಾಂಬರ, ಕಾಕಡ, ಸೇವಂತಿಗೆ, ಡೇಲಿಯಾ ಇತ್ಯಾದಿ ಹೂವುಗಳ ಗಿಡಗಳ ಜೊತೆಗೆ ಶೋ ಗಿಡಗಳನ್ನು ನೆಟ್ಟರು. ಕೆಲವು ವಿದ್ಯಾರ್ಥಿಗಳು ಪರಿಸರ ರಕ್ಷಣೆಯ ಘೋಷಣಾ ಫಲಕ ಹಿಡಿದು ಜಾಗೃತಿ ಮೂಡಿಸಿದರು.
ಸಂಸ್ಥೆಯ ಪ್ರಾಂಶುಪಾಲೆ ಡಿ. ಸುಜಲಾದೇವಿ, ಶಿಕ್ಷಕರು, ಸಿಬ್ಬಂದಿಗಳು ಹಾಜರಿದ್ದು, ಗಿಡ ನೆಡುವ ಕಾರ್ಯದಲ್ಲಿ ಜೊತೆಯಾದರು.ಪೊನ್ನಂಪೇಟೆ: ಗೋಣಿಕೊಪ್ಪಲು ಸಮೀಪದ ಅತ್ತೂರು ನ್ಯಾಷನಲ್ ಅಕಾಡೆಮಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಶಾಲೆಯ ಆವರಣದಲ್ಲಿ ಮಕ್ಕಳು ಗಿಡಗಳನ್ನು ನೆಟ್ಟರು. ಶಾಲೆಯಲ್ಲಿ ಮಕ್ಕಳಿಗೆ ಪರಿಸರದ ಬಗ್ಗೆ ಕಾಳಜಿ ಮತ್ತು ಸಂರಕ್ಷಣೆಯ ಅರಿವು ಮೂಡಿಸಲು ತರಗತಿವಾರು ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಕಿಂಡರ್ಗಾರ್ಟನ್ ಅವರಿಗೆ ಬಣ್ಣ ತುಂಬುವುದು, ೧ ರಿಂದ ೪ ರವರೆಗೆ ಚಿತ್ರಕಲೆ, ೫ ರಿಂದ ೭ನೇ ತರಗತಿಯವರೆಗೆ ಪೇಪರ್ ಬ್ಯಾಗ್ ತಯಾರಿ ಹಾಗೂ ೮ ರಿಂದ ೧೦ನೇ ತರಗತಿಯ ವಿದ್ಯಾರ್ಥಿಗಳಿಗೆ ಬರ್ಡ್ ಫೀಡರ್ ತಯಾರಿ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ಪರಿಸರದ ಪ್ರಾಮುಖ್ಯತೆಯನ್ನು ಸಾರುವ ಮೈಮ್ ಶೋ ಪ್ರದರ್ಶನ ೧೦ನೇ ತರಗತಿಯ ವಿದ್ಯಾರ್ಥಿಗಳಿಂದ ಮೂಡಿಬಂತು. ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷೆ ಶಾಂತಿ ಅಚ್ಚಪ್ಪ, ಟ್ರಸ್ಟಿ ರಕ್ಷಿತ್ ಅಯ್ಯಪ್ಪ, ಶಾಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ಕೊಡವಾಮೆರ ಕೊಂಡಾಟ ಸಂಘಟನೆ
ಮಡಿಕೇರಿ: ಪರಿಸರ ರಕ್ಷಣೆಯ ಕಾಳಜಿ ಕೇವಲ ಒಂದು ದಿನದ ಕಾರ್ಯಕ್ರಮಕ್ಕೆ ಸೀಮಿತವಾಗಿರದೆ, ನಮ್ಮ ಸುತ್ತಮುತ್ತಲೂ ಸದಾ ಹಸಿರಿನ ವಾತಾವರಣದೊಂದಿಗೆ, ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಪಣ ತೊಡಬೇಕು, ಮಾನವನ ಪ್ರತೀ ಆರೋಗ್ಯ ಸಮಸ್ಯೆಗೂ ಕೂಡ ನಮ್ಮ ಮನೆಯಂಗಳದ ಸುತ್ತಲೇ ಔಷಧಿಗಳು ಲಭ್ಯವಿರುತ್ತವೆ. ಅದನ್ನು ಗುರುತಿಸಿ ಪೋಷಿಸುವ ಮನಸ್ಥಿತಿ ನಮ್ಮಲ್ಲಿ ಬರಬೇಕು ಎಂದು ಹಿರಿಯ ನಾಟಿ ವೈದ್ಯ ಕರವಟ್ಟೀರ ಬಿ. ಅಯ್ಯಣ್ಣ ಅವರು ಕೊಡವಾಮೆರ ಕೊಂಡಾಟ ಸಂಘಟನೆ ವಿಶ್ವ ಪರಿಸರ ದಿನದ ಅಂಗವಾಗಿ ನಡೆಸಿದ ಗೂಗಲ್ ಮೀಟ್ ವೆಬಿನಾರ್'ನಲ್ಲಿ ಮುಖ್ಯ ಮಾಹಿತಿದಾರರಾಗಿ ಭಾಗವಹಿಸಿ ಮಾಹಿತಿ ನೀಡಿದರು.
ಪ್ರಕೃತಿ ತನ್ನ ಸೃಷ್ಟಿಯಲ್ಲಿ ಪ್ರತಿಯೊಂದಕ್ಕೂ ಮಹತ್ವ ನೀಡಿದ್ದು, ಅದರ ಸದ್ಬಳಕೆ ಮಾಡಿಕೊಳ್ಳುವುದು ನಮ್ಮ ಹೊಣೆಗಾರಿಕೆ ಎಂದರು. ತಾನು ಸುಮಾರು ೬೦ಕ್ಕೂ ಹೆಚ್ಚು ಮಾರಕ ಕಾಯಿಲೆಗಳಿಗೆ ಔಷಧಿಗಳನ್ನು ನೀಡುತ್ತಿದ್ದು, ಸಾವಿರಾರು ರೋಗಿಗಳು ಗುಣಮುಖರಾಗಿ ಆರೋಗ್ಯವಂತರಾಗಿದ್ದಾರೆ. ಇದಕ್ಕಾಗಿ ತಾನು ಬಳಸಿದ್ದು ಮನೆಯ ಸುತ್ತಲೂ ಬೆಳೆದ ಗಿಡಮರಗಳನ್ನು. ಸಣ್ಣ ನೆಗಡಿಯಿಂದ ಹಿಡಿದು ಇಂದಿನ ಮಹಾಮಾರಿ ಕೊರೊನಾದವರೆಗೂ, ಅಸಿಡಿಟಿಯಿಂದ ಹಿಡಿದು ಹೃದಯಘಾತ, ಪಾರ್ಶ್ವವಾಯುವರೆಗೂ ತನ್ನಲ್ಲಿ ಔಷಧ ಲಭ್ಯವಿದ್ದು, ಇದನ್ನ ಪ್ರತಿಯೊಬ್ಬರೂ ಕಲಿತು, ಸಂಬAಧಿಸಿದ ಗಿಡಗಂಟಿಗಳನ್ನು ಬೆಳೆಸಿ ತಮಗೆ ಬೇಕಾದ ಔಷಧಿಗಳನ್ನು ತಾವೇ ಸೃಷ್ಟಿಸುವಂತಾಗಬೇಕು ಎಂದರು. ಕೃಷಿ ಅಧಿಕಾರಿ ಹಾಗೂ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ರಿಜಿಸ್ಟಾçರ್ ಅಜ್ಜಿಕುಟ್ಟಿರ ಗಿರೀಶ್ ಮಾತನಾಡಿ, ಪರಿಸರ ದಿನದಂದು ಇಂತಹ ವಿಶಿಷ್ಟ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಿ ತಜ್ಞರ ಅಭಿಪ್ರಾಯವನ್ನು ಪ್ರತಿಯೊಬ್ಬರೂ ಪಾಲಿಸುವಂತಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ, ಸಂಘಟನೆಯ ಸ್ಥಾಪಕರೂ ಆದ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಅವರು, ಪರಿಸರ ದಿನ ಕೇವಲ ವೇದಿಕೆ ಕಾರ್ಯಕ್ರಮಕ್ಕೆ ಸೀಮಿತವಾಗಿರದೆ, ಪ್ರತೀ ದಿನವೂ ಅನುಷ್ಠಾನಗೊಳ್ಳಬೇಕು. ಪರಿಸರ ಎಂದರೆ ಕೇವಲ ಮರಗಿಡಗಳಷ್ಟೇ ಅಲ್ಲ, ಪ್ರಕೃತಿಯ ಪ್ರತಿಯೊಂದು ಅಂಶವೂ ಪರಿಸರ ಅದನ್ನು ಉಳಿಸಿ ಕಾಪಾಡುವುದು ನಮ್ಮ ಹೊಣೆಯಾಗಬೇಕು ಎಂದರು.
ಕಾರ್ಯಕ್ರಮದ ಮೊದಲಿಗೆ, ಸದಸ್ಯ ಚೆನಿಯಪಂಡ ಮನು ಮಂದಣ್ಣ ಅವರು ನೆಲ್ಲಕ್ಕಿಯಲ್ಲಿ ಕಾರೋಣರಿಗೆ ಅಕ್ಕಿಹಾಕಿ ಪ್ರಾರ್ಥಿಸಿದರೆ, ಸದಸ್ಯೆ ಪೇರಿಯಂಡ ಯಶೋಧ ಸ್ವಾಗತಿಸಿದರು. ಕಾರ್ಯದರ್ಶಿ ಕೆ. ಗಿರೀಶ್ ಭೀಮಯ್ಯ ಹಾಗೂ ಸಂಘಟನಾ ಕಾರ್ಯದರ್ಶಿ ತೀತಿಮಾಡ ಸೋಮಣ್ಣ ಅವರು ನಿರೂಪಿಸಿದರು. ಸದಸ್ಯ ಅಯ್ಯಲಪಂಡ ಪಟ್ಟು ಪೆಮ್ಮಯ್ಯ ವಂದಿಸಿ, ಸದಸ್ಯೆ ಕುಲ್ಲಚಂಡ ದೇಚಮ್ಮ ಕೇಸರಿ ಫೇಸ್ಬುಕ್ ಲೈವ್ ನಡೆಸಿದರು.ಸಂಪಾಜೆ: ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಪಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿರ್ಮಲ ಭರತ್, ಉಪಾಧ್ಯಕ್ಷ ಜಗದೀಶ್ ಪರಮಲೆ, ಸದಸ್ಯೆ ರಮಾದೇವಿ ಬಾಲಚಂದ್ರ ಕಳಗಿ, ಕುಮಾರ್ ಚೆದ್ಕಾರು, ಆರೋಗ್ಯ ಇಲಾಖೆ ವೈದ್ಯಾಧಿಕಾರಿ ಡಾ. ರಿಷಬ್ ರೈ, ಉದ್ಭವ್ ಸಂಸ್ಥೆ ಆಡಳಿತಾಧಿಕಾರಿ ಮಲ್ಲಿಕಾರ್ಜುನ್, ಸಂಪಾಜೆ ವಲಯ ಅರಣ್ಯಾಧಿಕಾರಿ ಮಧುಸೂಧನ್, ಉಪ ವಲಯ ಅರಣ್ಯಾಧಿಕಾರಿ ವಿಜೇಂದ್ರ ಕುಮಾರ್ಎಂ., ವಿನಯಕೃಷ್ಣ, ಅರಣ್ಯ ರಕ್ಷಕರಾದ ಜನಾರ್ದನ, ಪುನೀತ್, ನಾಗರಾಜ್ ಹಾಗೂ ಸಿಬ್ಬಂದಿ ವರ್ಗದವರು, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಅರಣ್ಯ ಸಮಿತಿ ಸದಸ್ಯರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.ಶನಿವಾರಸಂತೆ: ಶನಿವಾರಸಂತೆಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿಶ್ವ ಪರಿಸರ ದಿನದ ಪ್ರಯುಕ್ತ ಹಿಂದೂ ಜಾಗರಣಾ ವೇದಿಕೆ, ಹಿಂದೂ ಯುವ ವಾಹಿನಿ, ಭಜರಂಗದಳದ ವತಿಯಿಂದ ಗಿಡ ನೆಡಲಾಯಿತು. ಪದಾಧಿಕಾರಿಗಳೊಂದಿಗೆ ಆರೋಗ್ಯ ಕೇಂದ್ರದ ಸಿಬ್ಬಂದಿ ಇದ್ದರು.ಸಿದ್ದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ವತಿಯಿಂದ ಸಿದ್ದಾಪುರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಶಾಲೆಯ ಆವರಣದಲ್ಲಿ ಸಂಘದ ಸದಸ್ಯರುಗಳು ಹಾಗೂ ಶಿಕ್ಷಕರು ಸಸಿಗಳನ್ನು ನೆಟ್ಟರು. ಪರಿಸರ ದಿನಾಚರಣೆಯ ಬಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಣಾಭಿವೃದ್ಧಿ ಸಂಘಟನೆಯ ಮೇಲ್ವಿಚಾರಕಿ ಸೂದನ ಗೀತಾ ಸತೀಶ್ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕಿಯರು, ಸ್ಥಳೀಯ ಗ್ರಾ.ಪಂ. ಸದಸ್ಯರುಗಳು ಹಾಗೂ ಸಂಘಟನೆಯ ಪದಾಧಿಕಾರಿಗಳು ಹಾಜರಿದ್ದರು.ಬಾಳೆಲೆ: ಬಾಳೆಲೆ ವಿಜಯಲಕ್ಷಿö್ಮ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಿಂದ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಬಾಳೆಲೆ ವಿದ್ಯಾಸಂಸ್ಥೆಯ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಗಿಡ ನೆಟ್ಟು ಮಾತನಾಡಿ, ಮರಗಳು ಉಳಿದರೆ ಮಾತ್ರ ನಾಡು ಸುರಕ್ಷಿತವಾಗಿರಲು ಸಾಧ್ಯ ಎಂದರು. ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಕಾಯಮಾಡ ರಾಜ, ಸಹಕಾರ್ಯದರ್ಶಿ ಪೊಡಮಾಡ ಮೋಹನ್, ಕೋಶಾಧಿಕಾರಿ ಅಡ್ಡೇಂಗಡ ದೇವಯ್ಯ, ಸಹ ಖಚಾಂಚಿ ಆಲೇಮಾಡ ಕರುಂಬಯ್ಯ, ನಿರ್ದೇಶಕರಾದ ಅಳಮೇಂಗಡ ಸುರೇಶ್ ಸುಬ್ಬಯ್ಯ, ಮೇಚಂಡ ಪೆಮ್ಮಯ್ಯ, ಮಾಚಂಗಡ ಭೀಮಯ್ಯ, ಗ್ರಾಮದ ಪ್ರಮುಖರಾದ ಮುಕ್ಕಾಟಿರ ವಾಸು ಕಾವೇರಪ್ಪ, ದೇರಪಂಡ ಗಣಪತಿ, ಮುಖ್ಯ ಶಿಕ್ಷಕರಾದ ಚಂದ್ರಶೇಖರ್ ಹಾಜರಿದ್ದರು.
ಶಿಕ್ಷಕರಾದ ರಾಘವೇಂದ್ರ ಸ್ವಾಗತಿಸಿದರು. ತಿಮ್ಮರಾಜು ವಂದಿಸಿದರು. ನಂತರ ಬಾಳೆಲೆ ಮುಖ್ಯ ಬೀದಿಯಲ್ಲಿ ಮೆರವಣಿಗೆ ಮೂಲಕ ವಿದ್ಯಾರ್ಥಿಗಳು ಪರಿಸರ ಜಾಗೃತಿ ಮೂಡಿಸಿದರು.ಗೋಣಿಕೊಪ್ಪ ವರದಿ: ಹೆಚ್ಚು ಮರ, ಗಿಡ ಬೆಳೆಸಿಕೊಂಡು ಅಮ್ಲಜನಕ ಉತ್ಪಾದನೆಗೆ ಒತ್ತು ನೀಡುವುದು ಪ್ರತಿಯೊಬ್ಬರ ಜವಬ್ದಾರಿ ಎಂದು ಪೊನ್ನಂಪೇಟೆ ನ್ಯಾಯಾಲಯದ ನ್ಯಾಯಾಧೀಶೆ ಕೆ.ಎಸ್. ಆಶಾ ಹೇಳಿದರು.
ನ್ಯಾಯಾಲಯದ ಆವರಣದಲ್ಲಿ ಗಿಡ ನೆಟ್ಟು ಮಾತನಾಡಿದ ಅವರು, ಪರಿಸರ ಸಂರಕ್ಷಣೆ ಹೆಚ್ಚಾಗಬೇಕು. ಹೆಚ್ಚು ಮರಗಳನ್ನು ಬೆಳೆಸುವುದರಿಂದ ಜೀವ ಸಂಕುಲಗಳಿಗೂ ಬದುಕಲು ಅವಕಾಶ ನೀಡಿದಂತಾಗುತ್ತದೆ ಎಂದರು.
ಪೊನ್ನAಪೇಟೆ ವಕೀಲರ ಸಂಘದ ಅಧ್ಯಕ್ಷ ಕಳಕಂಡ ಡಿ. ಮುತ್ತಪ್ಪ ಮಾತನಾಡಿ, ಹೆಚ್ಚು ಜೀವಿಗಳ ತಾಣವಾಗಿರುವ ಭೂಮಿಯನ್ನು ರಕ್ಷಿಸಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದರು.
ಹಿರಿಯ ವಕೀಲ ಎಸ್.ಡಿ. ಕಾವೇರಪ್ಪ, ಎಂ.ಟಿ. ಕಾರ್ಯಪ್ಪ, ಸರ್ಕಾರಿ ವಕೀಲ ಅಮೃತ್, ಅಪರ ಸರ್ಕಾರಿ ವಕೀಲೆ ಅನಿತಾ, ಸಂಘದ ಕಾರ್ಯದರ್ಶಿ ಮೋನಿ ಪೊನ್ನಪ್ಪ ಇದ್ದರು.ಗುಡ್ಡೆಹೊಸೂರು: ವಿಶ್ವ ಪರಿಸರ ದಿನದ ಅಂಗವಾಗಿ ಭಾರತೀಯ ಜನತಾ ಪಕ್ಷದ ಗುಡ್ಡೆಹೊಸೂರು ಶಕ್ತಿ ಕೇಂದ್ರದ ವತಿಯಿಂದ ಗುಡ್ಡೆಹೊಸೂರು ಗ್ರಾಮದಲ್ಲಿನ ರಸ್ತೆಯ ಬದಿಗಳಲ್ಲಿ ಬಿದ್ದಿದ್ದ ಕಸವನ್ನು ತೆಗೆದು ಸ್ವಚ್ಛಗೊಳಿಸಲಾಯಿತು.
ಶಾಸಕ ಅಪ್ಪಚ್ಚು ರಂಜನ್ ಭಾಗವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಶಕ್ತಿ ಕೇಂದ್ರದ ಕುಡೆಕಲ್ ನಿತ್ಯಾನಂದ, ಪ್ರವೀಣ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಂದಿನಿ, ಬಿ.ಜೆ.ಪಿ. ಜಿಲ್ಲಾ ಕಾರ್ಯದರ್ಶಿ ಪುಷ್ಪ ನಾಗೇಶ್, ಗ್ರಾಮ ಪಂಚಾಯಿತಿ ಸದಸ್ಯರುಗಳು ಹಾಜರಿದ್ದರು.ಚೆಯ್ಯಂಡಾಣೆ: ಸ್ಥಳೀಯ ನರಿಯಂದಡ ಕೇಂದ್ರ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಶಾಲಾ ಮುಖ್ಯೋಪಾಧ್ಯಾಯ ಮನೋಹರ್ ನಾಯ್ಕ್ ಅವರು ಶಾಲಾ ವಠಾರದಲ್ಲಿ ಹಣ್ಣುಗಳ ಗಿಡಗಳನ್ನು ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.ಕುಶಾಲನಗರ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕರ್ನಾಟಕ ಕಾವಲುಪಡೆ ಆಶ್ರಯದಲ್ಲಿ ಕುಶಾಲನಗರ ಫಾತಿಮ ಪ್ರೌಢಶಾಲೆಯ ಆವರಣದಲ್ಲಿ ನೂರಕ್ಕೂ ಹೆಚ್ಚು ಗಿಡಗಳನ್ನು ನೆಡಲು ಚಾಲನೆ ನೀಡಲಾಯಿತು.
ಜಿಲ್ಲಾ ಅಧ್ಯಕ್ಷ ಎಂ. ಕೃಷ್ಣ ಮಾತನಾಡಿ, ಪ್ರತಿಯೊಬ್ಬರೂ ಪರಿಸರ ಬಗ್ಗೆ ಕಾಳಜಿ ವಹಿಸಿ ಗಿಡ ನೆಡುವ ಮುಖಾಂತರ ಪರಿಸರ ಕ್ರಾಂತಿ ಮೂಡಿಸಬೇಕೆಂದು ಮನವಿ ಮಾಡಿದರು. ಅರಣ್ಯ ಇಲಾಖೆ ಸಹಯೋಗದೊಂದಿಗೆ ಈ ಸಾಲಿನಲ್ಲಿ ಕುಶಾಲನಗರ ಮತ್ತು ಸುತ್ತಮುತ್ತ ವ್ಯಾಪ್ತಿಯಲ್ಲಿ ಸಾವಿರಕ್ಕೂ ಅಧಿಕ ಗಿಡಗಳನ್ನು ನೆಡುವ ಉದ್ದೇಶ ಇರುವುದಾಗಿ ಹೇಳಿದರು. ಈ ಸಂದರ್ಭ ಕುಶಾಲನಗರ ಅರಣ್ಯ ವಲಯ ಅಧಿಕಾರಿ ಶಿವರಾಮ್ ಮಾತನಾಡಿ, ವಿದ್ಯಾರ್ಥಿಗಳು ಗಿಡ ನೆಟ್ಟು ಪರಿಸರವನ್ನು ಉಳಿಸಿ ಬೆಳೆಸುವಂತೆ ಸಲಹೆ ನೀಡಿದರು.
ಈ ಸಂದರ್ಭ ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಮೋಹನ್, ಫಾತಿಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಜಫ್ರಿ ಡಿಸಿಲ್ವಾ, ಸಂಘಟನೆಯ ಮಹಿಳಾ ಘಟಕದ ಅಧ್ಯಕ್ಷೆ ಇಂದಿರಾ ಕಾರ್ಯದರ್ಶಿ ಸಮೀರ್ ಮತ್ತು ಶಾಲಾ ವಿದ್ಯಾರ್ಥಿಗಳು ಇದ್ದರು.