ಬಾಳೆಲೆ, ಜೂ. ೭: ನಿಟ್ಟೂರು ಕಾರ್ಮಾಡು ಅರಣ್ಯ ಇಲಾಖೆಯ ಚೆಕ್ ಪೋಸ್ಟ್ (ಫಾರೆಸ್ಟ್ ಗೇಟ್)ನಲ್ಲಿ ತಾ. ೮ ರಂದು (ಇಂದು) ಮತ್ತು ೯ ರಂದು ಅರಣ್ಯ ಇಲಾಖೆಯು ನೂತನ ಗೇಟ್ ಅಳವಡಿಸುತ್ತಿರುವ ಹಿನ್ನೆಲೆಯಲ್ಲಿ ಸದರಿ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ೨ದಿನಗಳ ಮಟ್ಟಿಗೆ ಅವಕಾಶ ಲಭ್ಯವಿರುವುದಿಲ್ಲ. ಬಾಳೆಲೆ ಕಾರ್ಮಾಡು ಮಾರ್ಗ ಹುಣಸೂರು, ಮೈಸೂರು ಹೆಗ್ಗಡೆ ದೇವನಕೋಟೆಗೆ ಹೋಗಿ ಬರಬೇಕಾದವರು ತಿತಿಮತಿ ಆನೆಚೌಕೂರು ಮಾರ್ಗದಲ್ಲಿ ತೆರಳಲು ಪ್ರಕಟಣೆಯಲ್ಲಿ ಅರಣ್ಯ ಇಲಾಖೆ ತಿಳಿಸಿದೆ.