*ಗೋಣಿಕೊಪ್ಪ, ಜೂ. ೭: ಸೇನೆಯಲ್ಲಿ ಕರ್ತವ್ಯದಲ್ಲಿದ್ದ ಸಂದರ್ಭ ಹುತಾತ್ಮರಾದ ಸೈನಿಕರಿಗೆ ಪ್ರಧಾನಮಂತ್ರಿಯವರಿAದ ನೀಡುವ ಗೌರವಾನ್ವಿತ ಸ್ಮರಣಿಕೆಯನ್ನು ಹುದಿಕೇರಿ, ಹೈಸೊಡ್ಲೂರು ಗ್ರಾಮದ ಕೇಚಮಾಡ ತಿಲಕ್ ಅವರ ತಾಯಿ ಕೇಚಮಾಡ ಸಿ. ಮುತ್ತಮ್ಮ ಅವರಿಗೆ ನೀಡಲಾಯಿತು. ಕಾವೇರಿ ಕಾಲೇಜಿನ ಎನ್.ಸಿ.ಸಿ. ಘಟಕ ಮತ್ತು ಮಡಿಕೇರಿ ೧೯ ಕರ್ನಾಟಕ ಎನ್.ಸಿ.ಸಿ ಬೆಟಾಲಿಯನ್ ವತಿಯಿಂದ ಮುತ್ತಮ್ಮ ಅವರ ಮನೆಗೆ ತೆರಳಿ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.

ಎನ್.ಸಿ.ಸಿ ಅಧಿಕಾರಿಗಳಾದ ಲೆಫ್ಟಿನೆಂಟ್ ಅಕ್ರಂ, ಜೆ.ಸಿ.ಒ. ಜುಲ್ಫಿಕರ್ ಖಾನ್, ಸುಬೇದಾರ್ ಬಸವರಾಜ್, ಗ್ರಾಮಪಂಚಾಯಿತಿ ಅಧ್ಯಕ್ಷ ಕೆ. ವಾಸು, ನಿವೃತ್ತ ಯೋಧ ಕಿರಿಯಮಾಡ ಮಿಲನ್, ಯುವಜನಸೇವಾ ಕ್ರೀಡಾ ಇಲಾಖೆಯ ನಿವೃತ್ತ ಅಧಿಕಾರಿ ಅಳಮೆಂಗಡ ಮುದ್ದಪ್ಪ, ಪ್ರಮುಖರಾದ ನೂರೇರ ಚಿಟ್ಯಪ್ಪ, ಚಕ್ಕೆರ ಕಿರಣ್, ಕೇಚಮಾಡ ಸುರೇಶ್, ಕೆಡೆಟ್‌ಗಳಾದ ಕಾರ್ಯಪ್ಪ, ಚಿಣ್ಣಪ್ಪ, ದ್ಯಾನ್ ಇದ್ದರು.