ಮಡಿಕೇರಿ, ಜೂ. ೭: ರಾಜ್ಯ ಸರಕಾರ ಕೈಗೊಂಡಿರುವ ಪಠ್ಯ ಪುಸ್ತಕ ಪರಿಷ್ಕರಣಾ ಕಾರ್ಯ ಸಮುದಾಯ ವಿರೋಧಿಯಾಗಿದ್ದು, ಬ್ರಾಹ್ಮಣ್ಯದಿಂದ ತುಂಬಿವೆೆ. ಹಾಗಾಗಿ ಈ ಪರಿಷ್ಕರಣಾ ಕಾರ್ಯವನ್ನು ಕೈಬಿಡಬೇಕು. ಈ ಸಂಬAಧ ಶಿಕ್ಷಣ ಸಚಿವ ರಾಜೀನಾಮೆ ನೀಡಬೇಕೆಂದು ದಸಂಸ ಸಂಘಟನೆಗಳ ಜಂಟಿ ಸಮಿತಿ ಒತ್ತಾಯಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಸಂಸ ಒಕ್ಕೂಟದ ಜಿಲ್ಲಾಧ್ಯಕ್ಷ ಜೆ.ಆರ್. ಪಾಲಾಕ್ಷ, ರೋಹಿತ್ ಚಕ್ರವರ್ತಿ ನೇತೃತ್ವದಲ್ಲಿ ರಚಿಸಲಾಗಿರುವ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ತಯಾರಿಸಿರುವ ಪಠ್ಯಗಳು ಬ್ರಾಹ್ಮಣ್ಯದಿಂದ ತುಂಬಿವೆ. ಆರ್‌ಎಸ್‌ಎಸ್ ಸ್ಥಾಪಕ ಕೆ.ಬಿ. ಹೆಡ್ಗೇವಾರ್, ಚಕ್ರವರ್ತಿ ಸೂಲಿಬೆಲೆ ಅವರುಗಳ ಪಠ್ಯವನ್ನು ಸೇರಿಸುವ ಮೂಲಕ ಕೋಮುಭಾವನೆ ಸೃಷ್ಟಿಸಲಾಗುತ್ತಿದೆ. ಇದಕ್ಕೆ ಸಂಬAಧಿಸಿದAತೆ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು. ರಾಜ್ಯದಾದ್ಯಂತ ವಿರೋಧ ವ್ಯಕ್ತವಾಗುತ್ತಿದ್ದರೂ ಮೌನ ವಹಿಸಿರುವ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನೆಗೆ ಮುತ್ತಿಗೆ ಹಾಕುವ ಬಗ್ಗೆ ತೀರ್ಮಾನಿಸಿರುವದಾಗಿ ಹೇಳಿದರು. ಜಿಲ್ಲೆಯಲ್ಲೂ ಕೂಡ ದಸಂಸ ಸಂಘಟನೆಗಳ ಜಂಟಿ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿರುವದಾಗಿ ತಿಳಿಸಿದರು.
ಉಪಾಧ್ಯಕ್ಷ ಹೆಚ್.ಆರ್. ಪರಶುರಾಮ್ ಮಾತನಾಡಿ, ರೋಹಿತ್ ಚಕ್ರತೀರ್ಥರನ್ನು ಇಗಾಗಲೇ ಸಮಿತಿಯಿಂದ ಕೈಬಿಡಲಾಗಿದೆ ಯಾದರೂ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕೆಂದು ಆಗ್ರಹಿಸಿದರು.
ದಸಂಸ ಮಂಗಳೂರು ಜಿಲ್ಲಾ ಸಂಚಾಲಕ ಆನಂದ ಬೆಳ್ಲಾರೆ ಮಾತನಾಡಿ, ಈಗಿನ ಪಠ್ಯದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಸರಿಯಾದ ಮಾಹಿತಿ ಇಲ್ಲವೆಂದು ಹೇಳಿದರು.
ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ವೀರೇಂದ್ರ ಪಾಟೀಲ್, ಸಂಘಟನಾ ಸಂಚಾಲಕ ರಜನಿಕಾಂತ್, ಸೋಮವಾರಪೇಟೆ ತಾಲೂಕು ಸಂಚಾಲಕ ಜೆ.ಎಲ್. ಜನಾರ್ದನ ಇದ್ದರು.