ವೀರಾಜಪೇಟೆ, ಜೂ. ೭: ೧೦ ಹೆಚ್,ಪಿ. ಮೋಟರ್ ಗೆ ಉಚಿತ ವಿದ್ಯುತ್ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕ ಮತ್ತು ಅಮ್ಮತ್ತಿ ಹೋಬಳಿ ಸಿದ್ದಾಪುರ ಶಾಖೆಯ ವತಿಯಿಂದ ನಿನ್ನೆ ದಿನ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ನಂತರ ವಿದ್ಯುತ್ ಇಲಾಖಾಧಿಕಾರಿಗಳೊಂದಿಗೆ ಸಭೆ ನಡೆಯಿತು.

ಚೆಸ್ಕಾಂ ಕಚೇರಿ ಎದುರು ಇಲಾಖೆಯ ಕಾರ್ಯವೈಖರಿಯನ್ನು ಖಂಡಿಸಿ ವೀರಾಜಪೇಟೆ-ಮಡಿಕೇರಿ ಮುಖ್ಯ ರಸ್ತೆಯಲ್ಲಿ ಕೆಲವು ನಿಮಿಷಗಳ ಕಾಲ ಮಾನವ ಸರಪಳಿಯನ್ನು ಮಾಡಿ ರಸ್ತೆ ತಡೆ ನಡೆಸಲಾಯಿತು. ನಂತರದಲ್ಲಿ ಇಲಾಖೆಯ ಅಧಿಕಾರಿಗಳೊಂದಿಗೆ ಬೆಳೆಗಾರರ ಸಮಸ್ಯೆಗಳನ್ನು ಖುದ್ದಾಗಿ ಆಲಿಸಲು ನಗರದ ಪುರಭವನದ ಸಭಾಂಗಣದಲ್ಲಿ ದ. ಕೊಡಗಿನ ವಿವಿಧ ಭಾಗಗಳಿಂದ ಆಗಮಿಸಿದ ರೈತರೊಂದಿಗೆ ಚರ್ಚೆ ನಡೆಯಿತು.

ರೈತರು ಅನುಭವಿಸುವ ಪ್ರಮುಖ ಸಮಸ್ಯೆಗಳನ್ನು ಸಭೆಯ ಮುಂದಿಟ್ಟು ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅವರು ಜಿಲ್ಲೆಯು ಗುಡ್ಡಗಾಡು ಪ್ರದೇಶವಾಗಿದ್ದು, ಇಲಾಖೆಯು ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ೧೦ ಹೆಚ್.ಪಿ. ಮೋಟಾರ್ ಉಪಯೋಗಕ್ಕೆ ವಿದ್ಯುತ್ ಪೂರೈಕೆ ಉಚಿತವಾಗಿ ನೀಡುವಂತೆ ಮುಖ್ಯಮಂತ್ರಿ ಸಕಾರಾತ್ಮಕವಾಗಿ ಒಪ್ಪಿಗೆ ವೀರಾಜಪೇಟೆ, ಜೂ. ೭: ೧೦ ಹೆಚ್,ಪಿ. ಮೋಟರ್ ಗೆ ಉಚಿತ ವಿದ್ಯುತ್ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕ ಮತ್ತು ಅಮ್ಮತ್ತಿ ಹೋಬಳಿ ಸಿದ್ದಾಪುರ ಶಾಖೆಯ ವತಿಯಿಂದ ನಿನ್ನೆ ದಿನ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ನಂತರ ವಿದ್ಯುತ್ ಇಲಾಖಾಧಿಕಾರಿಗಳೊಂದಿಗೆ ಸಭೆ ನಡೆಯಿತು.

ಚೆಸ್ಕಾಂ ಕಚೇರಿ ಎದುರು ಇಲಾಖೆಯ ಕಾರ್ಯವೈಖರಿಯನ್ನು ಖಂಡಿಸಿ ವೀರಾಜಪೇಟೆ-ಮಡಿಕೇರಿ ಮುಖ್ಯ ರಸ್ತೆಯಲ್ಲಿ ಕೆಲವು ನಿಮಿಷಗಳ ಕಾಲ ಮಾನವ ಸರಪಳಿಯನ್ನು ಮಾಡಿ ರಸ್ತೆ ತಡೆ ನಡೆಸಲಾಯಿತು. ನಂತರದಲ್ಲಿ ಇಲಾಖೆಯ ಅಧಿಕಾರಿಗಳೊಂದಿಗೆ ಬೆಳೆಗಾರರ ಸಮಸ್ಯೆಗಳನ್ನು ಖುದ್ದಾಗಿ ಆಲಿಸಲು ನಗರದ ಪುರಭವನದ ಸಭಾಂಗಣದಲ್ಲಿ ದ. ಕೊಡಗಿನ ವಿವಿಧ ಭಾಗಗಳಿಂದ ಆಗಮಿಸಿದ ರೈತರೊಂದಿಗೆ ಚರ್ಚೆ ನಡೆಯಿತು.

ರೈತರು ಅನುಭವಿಸುವ ಪ್ರಮುಖ ಸಮಸ್ಯೆಗಳನ್ನು ಸಭೆಯ ಮುಂದಿಟ್ಟು ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅವರು ಜಿಲ್ಲೆಯು ಗುಡ್ಡಗಾಡು ಪ್ರದೇಶವಾಗಿದ್ದು, ಇಲಾಖೆಯು ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ೧೦ ಹೆಚ್.ಪಿ. ಮೋಟಾರ್ ಉಪಯೋಗಕ್ಕೆ ವಿದ್ಯುತ್ ಪೂರೈಕೆ ಉಚಿತವಾಗಿ ನೀಡುವಂತೆ ಮುಖ್ಯಮಂತ್ರಿ ಸಕಾರಾತ್ಮಕವಾಗಿ ಒಪ್ಪಿಗೆ ನೆರವಾಗಲು ನೇಮಕ ಮಾಡಿದೆ. ಇದರಿಂದ ಮುಂಗಾರುವಿನ ಸಮಸ್ಯೆಗಳನ್ನು ಶಕ್ತವಾಗಿ ಎದುರಿಸಲು ಸಾಧ್ಯವಾಗುತ್ತದೆ. ರೈತರ ಸಮಸ್ಯೆಗಳಿಗೆ ಇಲಾಖೆಯು ಪೂರಕವಾಗಿ ಸ್ಪಂದಿಸುತ್ತದೆ. ಹಂತ ಹಂತವಾಗಿ ಕಾರ್ಯಯೋಜನೆ ಅನುಷ್ಠಾನ ಗೊಳ್ಳಲಿದೆ ಎಂದರು.

ಕಾರ್ಯಕ್ರಮ ಉದ್ದೇಶಿಸಿ ರೈತ ಸಂಘದ ಕಾನೂನು ಸಲಹೆಗಾರ ಕೆ.ಬಿ. ಹೇಮಚಂದ್ರ, ಸೆಸ್ಕ್ ಅಧಿಕಾರಿ ಎಂ.ಪಿ. ಅಶೋಕ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪಿ.ಎಸ್. ಸುರೇಶ್ ಅವರು ಮಾತನಾಡಿದರು.

ಸಭೆಯಲ್ಲಿ ವೀರಾಜಪೇಟೆ, ಅಮ್ಮತ್ತಿ, ಸಿದ್ದಾಪುರ, ಮಾಲ್ದಾರೆ ಮತ್ತು ದ. ಕೊಡಗಿನ ವಿವಿಧ ಭಾಗಗಳಲ್ಲಿನ ರೈತರು ಇಲಾಖೆಯ ಅಧಿಕಾರಿಗಳ ಮುಂದೆ ಸಮಸ್ಯೆಗಳನ್ನು ಅರ್ಜಿಯ ಮೂಲಕ ತೆರೆದಿಟ್ಟರು. ಸಭೆಯ ಕೊನೆಯಲ್ಲಿ ರೈತ ಸಂಘದಿAದ ಮನವಿ ಪತ್ರವನ್ನು ಇಲಾಖಾ ಅಧಿಕಾರಿಗಳಿಗೆ ನೀಡಲಾಯಿತು.

ಸಭೆಯಲ್ಲಿ ರೈತ ಸಂಘ ಜಿಲ್ಲಾ ಘಟಕದ ಪ್ರಧಾನ ಕಾರ್ಯದÀರ್ಶಿ ಚೆಟ್ರುಮಾಡ ಸುಜೈ, ಜಿಲ್ಲಾ ಕಾರ್ಯದÀರ್ಶಿ ಅಜ್ಜಮಾಡ ಚೆಂಗಪ್ಪ, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್, ಕೋಶಾಧಿಕಾರಿ ಇಟ್ಟೀರ ಸಬಿತ ಭೀಮಯ್ಯ, ಅಮ್ಮತ್ತಿ ಹೋಬಳಿಯ ಅಧ್ಯಕ್ಷ ಪ್ರವೀಣ್ ಬೋಪಯ್ಯ, ಪೊನ್ನಂಪೇಟೆ ಅಧÀ್ಯಕ್ಷ ಅಲೆಮಾಡ ಮಂಜುನಾಥ್, ವೀರಾಜಪೇಟೆ ತಾಲೂಕು ಅಧ್ಯಕ್ಷ ಭವಿ ಕುಮಾರ್, ಹುದಿಕೇರಿಯ ಸೂರಜ್ ಮತ್ತು ಶ್ರೀಮಂಗಲ ಹೋಬಳಿಯ ಕಂಭ ಕಾರ್ಯಪ್ಪ, ಇಲಾಖೆಯ ವಿವಿಧ ಹೋಬಳಿಯ ಸಹಾಯಕ ಇಂಜಿನಿಯರ್, ರೈತರು ಹಾಜರಿದ್ದರು.

ವರದಿ: ಕಿಶೋರ್ ಕುಮಾರ್ ಶೆಟ್ಟಿ