ಚೆಟ್ಟಳ್ಳಿ, ಜೂ. ೭: ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಅಸೋಸಿಯೇಷನ್ ಹಾಗೂ ಎಸ್.ಆರ್.ಎಸ್ ಕ್ರಿಕೆಟರ್ಸ್ ಮೂರ್ನಾಡು ಆಶ್ರಯದಲ್ಲಿ ಮೂರ್ನಾಡುವಿನ ಬಾಚೆಟ್ಟಿರ ಲಾಲು ಮುದ್ದಯ್ಯ ಮೈದಾನದಲ್ಲಿ ನಡೆಯುತ್ತಿರುವ ೧೮ನೇ ವರ್ಷದ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೆ.ವೈ.ಸಿ.ಸಿ. ಕಡಂಗ, ಆ್ಯಶಸ್ ಗೋಣಿಕೊಪ್ಪ, ಬ್ರದರ್ಸ್ ನಲ್ವತ್ತೇಕರೆ ಹಾಗೂ ವಾಯಾಂಬೋ ಸಿಕ್ಸರ್ಸ್ ವೀರಾಜಪೇಟೆ ತಂಡಗಳು ಸೇರಿ ನಾಲ್ಕು ತಂಡಗಳು ಮೂರನೇ ಸುತ್ತಿಗೆ ಅರ್ಹತೆ ಪಡೆದುಕೊಂಡಿವೆ.
ಕೆ.ವೈ.ಸಿ.ಸಿ ಕಡಂಗ ಹಾಗೂ ಬ್ಲ್ಯಾಕ್ ಹೋರ್ಸ್ ಬಲಮುರಿ ತಂಡಗಳ ನಡುವಿನ ಪಂದ್ಯದಲ್ಲಿ ಕೆ.ವೈ.ಸಿಸಿ ಗೆಲುವು ಪಡೆಯಿತು. ಕೊಂಡAಗೇರಿ ಬಿ ಹಾಗೂ ವೈ.ಸಿ.ಪಿ ಪೊನ್ನಂಪೇಟೆ ತಂಡಗಳ ನಡುವಿನ ಪಂದ್ಯದಲ್ಲಿ ಪೊನ್ನಂಪೇಟೆ ತಂಡವು ಗೆಲುವು ಪಡೆಯಿತು. ಆ್ಯಶಸ್ ಗೋಣಿಕೊಪ್ಪ ಹಾಗೂ ಸಹರಾ ಕುಶಾಲನಗರ ತಂಡಗಳ ನಡುವಿನ ಪಂದ್ಯದಲ್ಲಿ ಸಹರಾ ಸೋಲು ಕಂಡಿತು.
ಫ್ರೆAಡ್ಸ್ ಸಿದ್ದಾಪುರ ಹಾಗೂ ಡೆಕ್ಕನ್ ನಾಪೋಕ್ಲು ತಂಡಗಳ ನಡುವಿನ ಪಂದ್ಯದಲ್ಲಿ ಡೆಕ್ಕನ್ ನಾಪೋಕ್ಲು ತಂಡವು ಸೋಲು ಕಂಡಿತು. ಕ್ರೌನ್ಸ್ ವೀರಾಜಪೇಟೆ ಹಾಗೂ ಬ್ರದರ್ಸ್ ನಲ್ವತ್ತೇಕರೆ ತಂಡಗಳ ನಡುವಿನ ಪಂದ್ಯದಲ್ಲಿ ಬ್ರದರ್ಸ್ ನಲ್ವತ್ತೇಕರೆ ತಂಡವು ಗೆದ್ದಿತು. ಎಕೋ ಫ್ರೆಂಡ್ಸ್ ಅರೆಕಾಡು ಹಾಗೂ ಫೋರ್ ಸ್ಟಾರ್ ಎಡಪಾಲ ತಂಡಗಳ ನಡುವಿನ ಪಂದ್ಯದಲ್ಲಿ ಎಡಪಾಲ ತಂಡವು ಗೆಲುವು ಸಾಧಿಸಿತು.
ತ್ಯಾಗ್ ಬಾಯ್ಸ್ ಮಡಿಕೇರಿ ಹಾಗೂ ವಾಯಾಂಬೋ ವಿರಾಜಪೇಟೆ ನಡುವಿನ ಪಂದ್ಯದಲ್ಲಿ ವಾಯಾಂಬೋ ವೀರಾಜಪೇಟೆ ಜಯ ಸಾಧಿಸಿತು. ಸ್ಮಾö್ಯಶರ್ಸ್ ಮೂರ್ನಾಡು ಹಾಗೂ ಸೆಡ್.ವೈ.ಸಿ ವಯಕೋಲ್ ತಂಡಗಳ ನಡುವಿನ ಪಂದ್ಯದಲ್ಲಿ ಸ್ಮಾö್ಯಶರ್ಸ್ ಗೆಲುವು ದಾಖಲಿಸಿತು. ಗ್ರೀನ್ ಫೋರ್ಟ್ ಅಯ್ಯಂಗೇರಿ ಹಾಗೂ ಎಮ್.ಸಿ.ಸಿ ಮಾಲ್ದಾರೆ ತಂಡಗಳ ನಡುವಿನ ಪಂದ್ಯದಲ್ಲಿ ಮಾಲ್ದಾರೆ ತಂಡವು ಸೋಲು ಕಂಡಿತು. ಕೆ.ವೈ.ಸಿ.ಸಿ ಕಡಂಗ ಹಾಗೂ ವೈ.ಸಿ.ಪಿ ಪೊನ್ನಂಪೇಟೆ ತಂಡಗಳ ನಡುವಿನ ಪಂದ್ಯದಲ್ಲಿ ಪೊನ್ನಂಪೇಟೆ ತಂಡವು ಸೋಲು ಕಂಡಿತು.
ಆ್ಯಶಸ್ ಗೋಣಿಕೊಪ್ಪ ಹಾಗೂ ಫ್ರೆಂಡ್ಸ್ ಸಿದ್ದಾಪುರ ತಂಡಗಳ ನಡುವೆ ಪಂದ್ಯದಲ್ಲಿ ಗೋಣಿಕೊಪ್ಪ ತಂಡ ಗೆಲುವು ಪಡೆಯಿತು. ಬ್ರದರ್ಸ್ ನಲ್ವತ್ತೇಕರೆ ಹಾಗೂ ಯಂಗ್ ಸ್ಟಾರ್ ಚೆಟ್ಟಿಮಾನಿ ತಂಡಗಳ ನಡುವಿನ ಪಂದ್ಯದಲ್ಲಿ ನಲ್ವತ್ತೇಕರೆ ಗೆದ್ದಿತು. ಫೋರ್ ಸ್ಟಾರ್ ಎಡಪಾಲ ಹಾಗೂ ವಾಯಾಂಬೋ ಸಿಕ್ಸರ್ಸ್ ವೀರಾಜಪೇಟೆ ತಂಡಗಳ ಪಂದ್ಯದಲ್ಲಿ ವಾಯಾಂಬೋ ವೀರಾಜಪೇಟೆ ಗೆಲುವು ಸಾಧಿಸಿತು. (ಕೆ.ಎಂ ಇಸ್ಮಾಯಿಲ್ ಕಂಡಕರೆ)