ಮಡಿಕೇರಿ, ಜೂ. ೭: ಕೊಡಗು ಸಂಪಾಜೆ ಗ್ರಾಮದ ಅರಮನೆತೋಟ ಅಂಗನವಾಡಿ ಕೇಂದ್ರದಲ್ಲಿ ಬಾಲವಿಕಾಸ ಸಮಿತಿ ಸಭೆ ನಡೆಯಿತು. ಈ ಸಂದರ್ಭ ಸಂಪಾಜೆ ಗ್ರಾಮ ಪಂಚಾಯತಿ ಅಧ್ಯಕ್ಷೆ ನಿರ್ಮಲ ಭರತ್, ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಪ್ರಮೀಳಾ ಕುಕ್ಕೆಟ್ಟಿ, ಬಾಲವಿಕಾಸ ಸಮಿತಿ ಅಧ್ಯಕ್ಷೆ ಲತಾ ಕುಮಾರಿ ಹೊದ್ದೆಟ್ಟಿ, ಅಂಗನವಾಡಿ ಕೇಂದ್ರದ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಪುಟಾಣಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.