ಮಡಿಕೇರಿ, ಜೂ. ೭: ಯೂತ್ ಫ್ರೆಂಡ್ಸ್ ಪುತ್ತೂರು ಇವರ ಆಶ್ರಯದಲ್ಲಿ ನಡೆದ ಮೊದಲನೆ ವರ್ಷದ ‘ಕ್ಯಾಚ್ ದಿ ಬೀಟ್’ ಅಂತರ ರಾಜ್ಯ ಕೇರಳ ಹಾಗೂ ಕರ್ನಾಟಕ ಮೊಗೇರ ನೃತ್ಯ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಮಡಿಕೇರಿ ಗುರುಕುಲ ಕಲಾಮಂಡಳಿ ತಂಡ ಪ್ರಥಮ ಬಹುಮಾನ ಹಾಗೂ ಸೀನಿಯರ್ ಸೋಲೋ ವಿಭಾಗದಲ್ಲಿ ತಂಡದ ಶಿವು ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ ಶಾಸ್ತಿçà ನಗರದಲ್ಲಿರುವ ನೃತ್ಯ ಶಾಲೆಯ ವಿದ್ಯಾರ್ಥಿಗಳು ದಿನೇಶ್ ಪಿ.ಎನ್. ಹಾಗೂ ಚೇತನ್ ಅವರ ಮಾರ್ಗದರ್ಶನದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದುಕೊಂಡಿದ್ದಾರೆ.