ಸುAಟಿಕೊಪ್ಪ,ಜೂ.೭: ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ದೇವಾಲಯದ ೫೪ನೇ ವಾರ್ಷಿಕೋತ್ಸವ ಪ್ರಯುಕ್ತ ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ಹಾಗೂ ಪರಿವಾರ ದೇವರುಗಳ ತೆರೆ ಮಹೋತ್ಸವವು ಶ್ರದ್ಧಾಭಕ್ತಿಯಿಂದ ಮೂರು ದಿನಗಳ ಕಾಲ ನೆರವೇರಿತು. ಸೋಮವಾರ ಬೆಳಗಿನ ಜಾವ ಶ್ರೀ ತಿರುವಪ್ಪನ ಕೋಲ, ಶ್ರೀ ರಕ್ತ ಚಾಮುಂಡಿಕೋಲ, ಶ್ರೀ ವಿಷ್ಣುಮೂರ್ತಿಕೋಲ, ಶ್ರೀ ಚಾಮುಂಡೇಶ್ವರಿ ಕೋಲ, ಶ್ರೀ ವಸೂರಿ ಮಾಲೆ ಕೋಲ, ಗುರುಶ್ರೀ ದರ್ಪಣದೊಂದಿಗೆ ಬಾವುಟ ಇಳಿಸಲಾಯಿತು. ಶ್ರೀ ಚಾಮುಂಡೇಶ್ವರಿ ಹಾಗೂ ಮುತ್ತಪ್ಪ ದೇವಾಲಯದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವೈ.ಎಂ. ಕರುಂಬಯ್ಯ, ಕಾರ್ಯದರ್ಶಿ ಡಾ.ಶಶಿಕಾಂತ ರೈ, ಖಜಾಂಜಿ ಎಸ್.ಜಿ. ಶ್ರೀನಿವಾಸ್, ಸಮಿತಿ ಸದಸ್ಯರುಗಳಾದ ರಮೇಶ್ ಪಿಳ್ಳೆ, ಸುರೇಶ್ ಗೋಪಿ, ಧನು ಕಾವೇರಪ್ಪ, ವಿನೋದ್ ಮತ್ತಿತರರು ಇದ್ದರು.