ಕುಶಾಲನಗರ, ಜೂ.೭: ಕುಶಾಲನಗರ ಪ್ರಾದೇಶಿಕ ಅರಣ್ಯ ವಲಯ ವತಿಯಿಂದ ೨೦೨೧ -೨೨ನೇ ಸಾಲಿನಲ್ಲಿ ಆರ್ಎಸ್ಪಿಡಿ ಯೋಜನೆ ಅಡಿಯಲ್ಲಿ ಮಾವಿನಹಳ್ಳ ಸೊಂಡೂರು ನರ್ಸರಿಯಲ್ಲಿ ಬೆಳಸಲಾದ ಬೀಟೆ, ಮಹಾಗನಿ, ಹಲಸು, ನೇರಳೆ, ಮಾವು, ಹೊಂಗೆ, ಕರಡಿ, ನಂದಿ, ಪನಪುಳಿ, ಹೊನ್ನೆ, ಕೂಳಿ ಮತ್ತು ಸಿಲ್ವರ್ ಇತ್ಯಾದಿ ಗಿಡಗಳು ಲಭ್ಯವಿದೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ. ಆಸಕ್ತ ರೈತರು ಅರ್ಜಿಯೊಂದಿಗೆ ಜಮೀನಿನ ಆರ್ಟಿಸಿ ಮತ್ತು ಆಧಾರ್ ಕಾರ್ಡ್ ದಾಖಲೆಗಳನ್ನು ನೀಡಿ ಗಿಡಗಳನ್ನು ಪಡೆದುಕೊಳ್ಳಬಹುದು ಎಂದು ಅರಣ್ಯಾಧಿಕಾರಿ ಕೆ.ವಿ. ಶಿವರಾಂ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ೯೪೮೩೮೩೫೯೯೩, ೮೪೩೧೫೬೯೮೩೫ ಸಂಪರ್ಕಿಸಬಹುದಾಗಿದೆ.