ಮಡಿಕೇರಿ, ಜೂ. ೭: ಕ್ಲೋಸ್ಬರ್ನ್ ತೋಟದಲ್ಲಿ ಇತ್ತೀಚೆಗೆ ಮಾಲೀಕ ಬಿಜಲಾನಿ ದಂಪತಿಗಳ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಕಾರ್ಮಿಕರಿಗೆ ಸಮಾರಂಭ ಏರ್ಪಡಿಸಲಾಗಿತ್ತು. ಸಮಾರಂಭವನ್ನು ‘ಶಕ್ತಿ’ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಅವರು ಉದ್ಘಾಟಿಸಿ ಮಾತನಾಡಿ, ಒಂದು ಸಂಸ್ಥೆ, ತೋಟ, ಸಂಘಟನೆಯ ಅಭ್ಯುದಯಕ್ಕೆ ಪ್ರತಿಯೊಬ್ಬರ ಜವಾಬ್ದಾರಿ ಹಾಗೂ ಪಾತ್ರ ಅತಿಮುಖ್ಯ ಎಂದರು. ಕಾರ್ಮಿಕ-ಮಾಲೀಕರ ಬಾಂಧವ್ಯ ಅವಲಂಬಿಸಿ ಸಂಸ್ಥೆ ಬೆಳೆಯುತ್ತದೆ ಎಂದರು. ಅತಿಥಿ ಸಂಪತ್ ಕುಮಾರ್ ಮಾತನಾಡಿ, ಕರ್ತವ್ಯ ನಿಷ್ಠೆ ಮುಖ್ಯ ಎಂದರು. ವ್ಯವಸ್ಥಾಪಕ ಹೆಗ್ಡೆ ಸ್ವಾಗತಿಸಿದರು. ಸದಾಶಿವ್ ವಂದನಾರ್ಪಣೆ ಮಾಡಿದರು. ಬಾಲಕೃಷ್ಣ, ರಮೇಶ್, ಹನುಮಾನ್ ದಾಸ್ ಹಾಜರಿದ್ದರು. ಕಾರ್ಮಿಕರಾದ ದೇವಕಿ ಹಾಗೂ ತವಮನಿ ಮಾತನಾಡಿದರು.