ಮಡಿಕೇರಿ, ಜೂ.೭ : ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ತಾ. ೮ ರಂದು (ಇಂದು) ಲಸಿಕಾ ಮೇಳ ನಡೆಯಲಿವೆ. ಲಸಿಕಾಕರಣಕ್ಕೆ ಬಾಕಿ ಇರುವ ಎಲ್ಲಾ ಫಲಾನುಭವಿಗಳು ಕೋವಿಡ್ ಲಸಿಕಾ ಮೇಳದ ಸದುಪಯೋಗ ಪಡೆದುಕೊಂಡು ಕೋವಿಡ್ ಲಸಿಕೆ ಪಡೆಯುವಂತೆ ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಂಟಿ ಹೇಳಿಕೆಯಲ್ಲಿ ತಿಳಿಸಿದೆ.