ಗುಡ್ಡೆಹೊಸೂರು, ಜೂ. ೭: ಇಲ್ಲಿಗೆ ಸಮೀಪದ ಬಸವನಹಳ್ಳಿಯ ಆಶ್ರಮಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ ವತಿಯಿಂದ ಬ್ಯಾಗ್, ಪುಸ್ತಕ, ಲೇಖನಿಯನ್ನು ವಿತರಿಸಲಾಯಿತು.

ಸಂಘದ ಅಧ್ಯಕ್ಷ ಕುಮಾರಪ್ಪ ಮಾತನಾಡಿ, ಆಶ್ರಮ ಶಾಲೆಯಲ್ಲಿ ಕಡುಬಡತನದ ಕುಟುಂಬದಿAದ ಬಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ಉದ್ದೇಶದಿಂದ ಮಕ್ಕಳಿಗೆ ಕೊಡುಗೆ ನೀಡಲಾಗಿದೆ ಎಂದರು. ಉಪಾಧ್ಯಕ್ಷ ಟಿ.ಬಿ. ಜಗದೀಶ್ ಮಾತನಾಡಿ, ಮುಂದಿನ ವರ್ಷ ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬAಧಿಸಿದ ಯಾವುದಾದರು ವಸ್ತುಗಳು ಬೇಕಾದಲ್ಲಿ ವೈಯಕ್ತಿಕಗಾಗಿ ನೀಡುವುದಾಗಿ ತಿಳಿಸಿದರು.

ಈ ಸಂದÀರ್ಭ ನಿರ್ದೇಶಕ ಚಿಲ್ಲನ ಲತಾ ಗಣಿಪ್ರಸಾದ್, ಲ್ಯಾಂಪ್ಸ್ ಸಹಕಾರ ಸಂಘದ ಅಧ್ಯಕ್ಷ ಆರ್.ಕೆ. ಚಂದ್ರ ಉಪಾಧ್ಯಕ್ಷ ಮನು, ಗ್ರಾ.ಪಂ. ಸದಸ್ಯ ಎಂ.ಆರ್. ಮಾದಪ್ಪ, ಶಾಲಾ ಮುಖ್ಯಶಿಕ್ಷಕ ರವಿ ಎಂ.ಎನ್. ಹಾಜರಿದ್ದರು. ಈ ಸಂದÀರ್ಭ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಪಿ. ಜಗದೀಶ್, ಸತ್ಯಕುಮಾರ್, ಸಿಬ್ಬಂದಿಗಳು ಮತ್ತು ಶಾಲಾ ಶಿಕ್ಷಕ ವೃಂದದವರು ಹಾಜರಿದ್ದರು.