ಮಡಿಕೇರಿ, ಜೂ. ೭ : ವೀರಾಜಪೇಟೆ ಕೊಟ್ಟೋಳಿ ಶಾಲೆಯ ಮಕ್ಕಳಿಗೆ ವೀರಾಜಪೇಟೆ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ನೋಟ್ ಪುಸ್ತಕ, ಪೆನ್ ಹಾಗೂ ಇತರ ಕಲಿಕಾ ಪರಿಕರಗಳನ್ನು ಕೊಡುಗೆಯಾಗಿ ನೀಡಲಾಯಿತು.

ಇತ್ತೀಚೆಗೆ ನಿಧನರಾದ ಚಾಲಕರಾದ ತಾಜ್, ದಿವಾಕರ್ ಹಾಗೂ ಸತೀಶ್ ಅವರುಗಳ ಜ್ಞಾಪಾಕಾರ್ಥವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮುಖ್ಯ ಅತಿಥಿಗಳಾಗಿ ಸಂಘದ ಗೌರವ ಅಧ್ಯಕ್ಷ ತೋರೆರ ಪ್ರಭು ಭಾಗವಹಿಸಿದ್ದರು. ಅಧ್ಯಕ್ಷ ಎನ್. ಎನ್ ಶಿವು, ಪ್ರಧಾನ ಕಾರ್ಯದರ್ಶಿ ದೀಪು, ಗೌರವ ಸಲಹೆಗಾರ ಎಂ ಪ್ರವೀಣ್, ಸಹ ಕಾರ್ಯದರ್ಶಿ ಜೇಕಬ್ ನೊರೋನ , ಖಜಾಂಚಿ ಸೋಮಶೇಖರ್ ಹಾಗೂ ನಿರ್ದೇಶಕರು ಹಾಜರಿದ್ದರು.