ಮಡಿಕೇರಿ, ಜೂ. ೭: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ೨೦೨೨-೨೩ ಸಾಲಿಗೆ ನಿಗಮದ ಯೋಜನೆಗಳಾದ ಅರಿವು (ಶಿಕ್ಷಣಕ್ಕಾಗಿ), ಟ್ಯಾಕ್ಸಿ ಗೂಡ್ಸ್/ ಪ್ಯಾಸೆಂಜರ್ ಆಟೋ, ಶ್ರಮಶಕ್ತಿ, ಸ್ವಯಂ ಉದ್ಯೋಗ ಯೋಜನೆ ಅಡಿಯಲ್ಲಿ ಅರ್ಹ ಅಲ್ಪಸಂಖ್ಯಾತ ಅರ್ಜಿದಾರರಿಂದ ಆನ್‌ಲೈನ್ ಅರ್ಜಿ ಕರೆಯಲಾಗಿದೆ. ಅರ್ಜಿ ಸಲ್ಲಿಸಲು ಜುಲೈ ೧೫ ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ, ಜಿಲ್ಲೆಯ ನಿಗಮದ ಕಚೇರಿಗೆ ಸಂಪರ್ಕಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಹೆಲ್ಪ್ ಲೈನ್ ಸಂಖ್ಯೆ ೮೨೭೭೭೯೯೯೯೦ ಅಥವಾ ನಿಗಮದ ವೆಬ್‌ಸೈಟ್ hಣಣಠಿ://ಏmಜಛಿoಟಿಟiಟಿe.ಞಚಿಡಿಟಿಚಿಣಚಿಞಚಿ.gov.iಟಿ ಬಳಸಬಹುದು. ಅರ್ಹ ಅಲ್ಪಸಂಖ್ಯಾತ ಬಂಧುಗಳು ನಿಗಮದ ಯೋಜನೆಗಳ ಲಾಭ ಪಡೆಯಲು ನಿಗಮದ ಅಧ್ಯಕ್ಷ ಮುಕ್ತಾರ ಹುಸೇನ್ ಪಠಾಣ ತಿಳಿಸಿದ್ದಾರೆ.