ಮಡಿಕೇರಿ, ಜೂ. ೬: ಬೆಂಗಳೂರಿನಲ್ಲಿ ಇತ್ತೀಚೆಗೆ ಜರುಗಿದ ರಾಷ್ಟçಮಟ್ಟದ ಪ್ಯಾನ್ ಇಂಡಿಯಾ ಮಾಸ್ರ‍್ಸ್ ಗೇಮ್ಸ್ನಲ್ಲಿ ಮಡಿಕೇರಿಯ ತಾತಪಂಡ ಜ್ಯೋತಿ ಸೋಮಯ್ಯ ಅವರು ಬ್ಯಾಡ್‌ಮಿಂಟನ್‌ನಲ್ಲಿ ೫೫+ ವಿಭಾಗದಲ್ಲಿ ಸಾಧನೆ ಮಾಡಿದ್ದಾರೆ. ಸಿಂಗಲ್ಸ್ನಲ್ಲಿ ಪ್ರಥಮ ಸ್ಥಾನ ಹಾಗೂ ಡಬಲ್ಸ್ ಮತ್ತು ಮಿಕ್ಸೆಡ್ ಡಬಲ್ಸ್ನಲ್ಲಿ ತೃತೀಯ ಸ್ಥಾನವನ್ನು ಇವರು ಗಳಿಸಿದ್ದಾರೆ. ಜ್ಯೋತಿ ಅವರು ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಮಕ್ಕಳಿಗೆ ಬ್ಯಾಡ್‌ಮಿಂಟನ್ ತರಬೇತಿಯನ್ನು ನೀಡುತ್ತಿದ್ದಾರೆ.