ನಾಪೋಕ್ಲು, ಜೂ. ೬ : ಶಾಲಾ ಬಸ್ ಮತ್ತು ಮಾರುತಿ ವ್ಯಾನ್ ನಡುವೆ ಡಿಕ್ಕಿಯಾದ ಘಟನೆ ಮರಂದೋಡ ಗ್ರಾಮದ ನೈಂತ್‌ಮೈಲು ಎಂಬಲ್ಲಿ ನಡೆದಿದೆ. ಕಕ್ಕಬ್ಬೆಯಿಂದ ಮರಂದೋಡ ಕಡೆ ತೆರಳುತ್ತಿದ್ದ ಮಾರುತಿ ವ್ಯಾನ್ ಹಾಗೂ ಮರಂದೋಡ ಕಡೆಯಿಂದ ಕಕ್ಕಬೆ ಕಡೆಗೆ ವಿದ್ಯಾರ್ಥಿಗಳನ್ನು ಬಿಟ್ಟು ಬರುತ್ತಿದ್ದ ಶಾಲಾ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಅದೃಷ್ಟವಶಾತ್ ವಾಹನದಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಣ್ಣಪುಟ್ಟ ಗಾಯಗೊಂಡವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಘಟನಾ ಸ್ಥಳಕ್ಕೆ ನಾಪೋಕ್ಲು ಪೊಲೀಸರು ತೆರಳಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.