ಸುಂಟಿಕೊಪ್ಪ, ಜೂ. ೬: ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ದೇವಾಲಯದ ೫೪ನೇ ವಾರ್ಷಿಕೋತ್ಸವ ಭಾನುವಾರ ಬೆಳಿಗ್ಗೆ ೭ ಗಂಟೆಗೆ ವಾದ್ಯಮೇಳ ಸಹಿತ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪ್ರಾರಂಭಗೊAಡಿತು. ನಂತರ ಶ್ರೀ ಶಾಸ್ತಪ್ಪನ ವೆಳ್ಳಾಟಂ, ಶ್ರೀ ಗುಳಿಗನ ವೆಳ್ಳಾಟಂ ನಡೆಯಿತು. ಸಂಜೆ ಶ್ರೀ ಮುತ್ತಪ್ಪ ದೇವರ ಮಲೆ ಇಳಿಸುವಿಕೆ, ಸಂಜೆ ಅಡಿಯರ ಮೆರವಣಿಗೆ, ಶ್ರೀ ಚಾಮುಂಡೇಶ್ವರಿ ವೆಳ್ಳಾಟಂ, ಮತ್ತು ದೇವರುಗಳ ತೋಟಂ, ಶ್ರೀ ವಸೂರಿಮಾಲೆ ಸ್ನಾನಕ್ಕೆ ಹೊರಡುವುದು ಮತ್ತು ರಕ್ತ ಚಾಮುಂಡಿ ವೆಳ್ಳಾಟಂ, ಶ್ರೀ ವಿಷ್ಣುಮೂರ್ತಿ ವೆಳ್ಳಾಟಂ, ಶ್ರೀ ವಸೂರಿಮಾಲೆ ಸ್ನಾನ ಮೆರವಣಿಗೆ, ೆ ಕಳಿಗಪಾಟ್, ಅಂದಿಮೇಳ ಕಲಶಂ ಸ್ವೀಕರಿಸುವುದು, ವಳ್ಳಕೆಟ್ಟ್, ಶ್ರೀ ಗುಳಿಗನ ಕೋಲ, ಶ್ರೀ ಶಾಸ್ತಪ್ಪನ ಕೋಲಗಳು ನಡೆದವು. ಈ ಸಂದರ್ಭ ನೂರಾರು ಭಕ್ತಾದಿಗಳು ಕೋಲ ಹಾಗೂ ದೇವತಾ ಕಾರ್ಯಗಳಲ್ಲಿ ಪಾಲ್ಗೊಂಡರು.