ಮಡಿಕೇರಿ, ಜೂ. ೫: ಕೊಡವ ಸಮಾಜಗಳ ಪೈಕಿ ಪ್ರಥಮ ಸಮಾಜ ವಾಗಿ ರೂಪುಗೊಂಡ ಹಾಗೂ ಎಲ್ಲೆಡೆಯ ಸದಸ್ಯತ್ವ ಹೊಂದಿರುವ ಮಡಿಕೇರಿ ಕೊಡವ ಸಮಾಜದ ನೂತನ ಆಡಳಿತ ಮಂಡಳಿ ರಚನೆ ಗೊಂಡಿದೆ. ಈ ಬಾರಿ ಹಿರಿಯ ರೊಂದಿಗೆ ಯುವಕರನ್ನೊಳ ಗೊಂಡ ಹೊಸ ತಂಡ ಅಧಿಕಾರಕ್ಕೆ ಬಂದಿದೆ.ಕೊಡಗು ಜಿಲ್ಲಾ ಕೇಂದ್ರವೂ ಆಗಿರುವ ಮಡಿಕೇರಿಯಲ್ಲಿನ ಈ ಸಮಾಜಕ್ಕೆ ಈ ಬಾರಿ ಚುನಾವಣೆ ಎದುರಾಗಿದ್ದು, ಹಲವರ ಸ್ಪರ್ಧೆಯಿಂದಾಗಿ ಕುತೂಹಲಕ್ಕೆ ಎಡೆಯಾಗಿತ್ತು.

ಇಂದು ಬೆಳಿಗ್ಗೆಯಿಂದ ಸಮಾಜದ ಆವರಣದಲ್ಲಿ ಮತದಾನ ನಡೆದಿದ್ದು, ಅಪರಾಹ್ನದ ನಂತರ ಮತ ಎಣಿಕೆ ಜರುಗಿತು. ಎರಡು ಗುಂಪುಗಳಲ್ಲಿ ಗುರುತಿಸಿಕೊಂಡ ಹಲವರ ಸ್ಪರ್ಧೆ ಹಾಗೂ ವೈಯಕ್ತಿಕವಾಗಿಯೂ ಕೆಲವರು ಸ್ಪರ್ಧಾ ಕಣದಲ್ಲಿದ್ದರಿಂದ ಬೆಳಿಗ್ಗೆಯಿಂದಲೇ ಬಿರುಸಿನ ಚಟುವಟಿಕೆ ಕಂಡುಬAದಿತು.ಅಧ್ಯಕ್ಷರಾಗಿ ಮುತ್ತಪ್ಪಸಮಾಜದ ನೂತನ ಅಧ್ಯಕ್ಷರಾಗಿ ಹಿರಿಯ ಸಹಕಾರಿಯೂ ಆಗಿರುವ ಮಂಡುವAಡ ಪಿ. ಮುತ್ತಪ್ಪ ಅವರು ಚುನಾಯಿತರಾಗಿದ್ದಾರೆ. ೭೫೧ ಮತಗಳನ್ನು ಪಡೆದು ಮುತ್ತಪ್ಪ ಅವರು ಮುಂದಿನ ಸಾಲಿನ ಅಧ್ಯಕ್ಷರಾಗಿ ಹೊರಹೊಮ್ಮಿದ್ದಾರೆ. ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಖಜಾಂಚಿ ಹಾಗೂ ೮ ಪುರುಷ ಹಾಗೂ ಮೂವರು ಮಹಿಳಾ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ಅನಿವಾರ್ಯವಾಗಿತ್ತು. ಎಲ್ಲಾ ಕ್ಷೇತ್ರಗಳಲ್ಲೂ ಹಲವರು ಸ್ಪರ್ಧೆಯಲ್ಲಿದ್ದ ಕಾರಣ ಕೌತುಕ ಸೃಷ್ಟಿಸಿತ್ತು.

ಉಪಾಧ್ಯಕ್ಷರಾಗಿ ನಂದಿನೆರವAಡ ಚೀಯಣ್ಣ (೯೨೬ ಮತ), ಕಾರ್ಯದರ್ಶಿಯಾಗಿ ಕನ್ನಂಡ ಸಂಪತ್ (೮೫೭ ಮತ) ಆಯ್ಕೆಯಾ ಗಿದ್ದಾರೆ. ಜಂಟಿ ಕಾರ್ಯದರ್ಶಿ, ಖಜಾಂಚಿಯಾಗಿ ನಂದಿನೆರವAಡ ದಿನೇಶ್ ಆಯ್ಕೆಯಾಗಿದ್ದಾರೆ. ಈ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಚಂಬAಡ ಸುರೇಶ್ ಮುತ್ತಪ್ಪ ಕೊನೆ ಕ್ಷಣದಲ್ಲಿ ನಿವೃತ್ತಿ ಘೋಷಿಸಿ ದಿನೇಶ್ ಅವರಿಗೇ ಬೆಂಬಲ ಸೂಚಿಸಿದ್ದರಿಂದ ದಿನೇಶ್ ಆಯ್ಕೆ ಖಚಿತವಾಗಿತ್ತು.