ಕುಶಾಲನಗರ, ಜೂ. ೫: ದೇಹ ದಂಡನೆ ಮಾಡುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳÀಲು ಸಾಧ್ಯ ಎಂದು ವಾಸವಿ ಪೀಠಾಧಿಪತಿ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು. ಕುಶಾಲನಗರದ ಆರ್ಯವೈಶ್ಯ ಮಂಡಳಿ ಮತ್ತು ರಿಜಿಡ್ ಗ್ರೂಪ್ ಸಹಭಾಗಿತ್ವದಲ್ಲಿ ವಿಶ್ವ ಬೈಸಿಕಲ್ ದಿನದ ಬೈಸಿಕಲ್ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಸ್ವಾಮೀಜಿ, ಬೈಸಿಕಲ್ ಎನ್ನುವುದು ಬಡವರ ವಾಹನ ಎನ್ನುವ ಬ್ರಾö್ಯಂಡ್ ಆಗಿತ್ತು. ಆದರೆ ಸಾರ್ವಜನಿಕರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾದಂತೆ ಕುಶಾಲನಗರ, ಜೂ. ೫: ದೇಹ ದಂಡನೆ ಮಾಡುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳÀಲು ಸಾಧ್ಯ ಎಂದು ವಾಸವಿ ಪೀಠಾಧಿಪತಿ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು. ಕುಶಾಲನಗರದ ಆರ್ಯವೈಶ್ಯ ಮಂಡಳಿ ಮತ್ತು ರಿಜಿಡ್ ಗ್ರೂಪ್ ಸಹಭಾಗಿತ್ವದಲ್ಲಿ ವಿಶ್ವ ಬೈಸಿಕಲ್ ದಿನದ ಬೈಸಿಕಲ್ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಸ್ವಾಮೀಜಿ, ಬೈಸಿಕಲ್ ಎನ್ನುವುದು ಬಡವರ ವಾಹನ ಎನ್ನುವ ಬ್ರಾö್ಯಂಡ್ ಆಗಿತ್ತು. ಆದರೆ ಸಾರ್ವಜನಿಕರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾದಂತೆ ಸಂರಕ್ಷಣೆಯಲ್ಲಿ ತೊಡಗಿಕೊಂಡಿದೆ ಎಂದು ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಎಲ್. ಉದಯಕುಮಾರ್, ಉದ್ಯಮಿ ಎಸ್.ಕೆ. ಸತೀಶ್, ಜಿಲ್ಲಾಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್, ಮಹಿಳಾ ಮಂಡಳಿ ಅಧ್ಯಕ್ಷೆ ಶೋಭಾ ಸತ್ಯ, ಆರ್ಯವೈಶ್ಯ ಯುವ ಪರಿಷತ್ತಿನ ಉಪಾಧ್ಯಕ್ಷ ವಿ.ಆರ್. ಮಂಜುನಾಥ್, ರಿಜಿಡ್ ಗ್ರೂಪಿನ ಕೆ.ಎಸ್. ನಾಗೇಶ್, ಎನ್.ವಿ. ಬಾಬು, ಎ.ಎಸ್. ಕುಮಾರ್ ಸೇರಿದಂತೆ ಹಲವು ಸದಸ್ಯರು ಪಾಲ್ಗೊಂಡರು.