ಸುಂಟಿಕೊಪ್ಪ, ಜೂ. ೫: ತುಳುವೆರ ಜನಪದ ಕೂಟದ ಸುಂಟಿಕೊಪ್ಪ ಹೋಬಳಿ ಘಟಕದ ಅಧ್ಯಕ್ಷರಾಗಿ ಕೆದಕಲ್ ಗ್ರಾಮದ ವೆಂಕಪ್ಪ ಕೊಟ್ಯನ್, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಎಸ್. ಸುನಿಲ್ ಆಯ್ಕೆಗೊಂಡರು.

ಗುಂಡುಗುಟ್ಟಿ ಮಂಜನಾಥಯ್ಯ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಮಟ್ಟದ ತುಳುವೆರ ಜನಪದ ಸಮಿತಿಯ ಹೋಬಳಿಯ ಸಮತಿಯನ್ನು ಆಯ್ಕೆಗೊಳಿಸಲಾಗಿದ್ದು ಉಪಾಧ್ಯಕ್ಷರುಗಳಾಗಿ ಪಿ.ಬಿ. ಮಂಜು, ಸದಾಶಿವ ರೈ, ಮಹಿಳಾ ಉಪಾಧ್ಯಕ್ಷೆ ಜ್ಯೋತಿ ಭಾಸ್ಕರ್, ಖಜಾಂಚಿಯಾಗಿ ಪ್ರಕಾಶ್ ಸುಂಟಿಕೊಪ್ಪ, ಸಹ ಕಾರ್ಯದರ್ಶಿಯಾಗಿ ಶ್ರೀನಿವಾಸ್, ಸಲಹಾ ಸಮಿತಿ ಸದಸ್ಯರುಗಳಾಗಿ ಡಿ. ನರಸಿಂಹ, ಮಹಾಬಲ ರೈ, ಭವಾನಿ ಬಿ.ಐ., ದೇವಪ್ಪ ಎಂ.ಪಿ., ಸೋಮನಾಥ, ಜಿನ್ನಪ್ಪ ಪೂಜಾರಿ, ರಾಜ ಸತ್ಯಂದ್ರ, ಬಿ.ಜೆ. ರಮೇಶ್ ಮತ್ತಿತರರನ್ನು ನೇಮಕಗೊಳಿಸ ಲಾಯಿತು.

ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಬಿ. ಐತ್ತಪ್ಪ ರೈ ಹಾಗೂ ಪದಾಧಿಕಾರಿಗಳಾದ ರಘು ಆನಂದ, ಸುರೇಶ್ ಕುಲಾಲ್, ಪಿ.ಎಂ. ರವಿ ಮತ್ತಿತರರು ಸಂಘಟನೆಯ ಕುರಿತು ಮಾತನಾಡಿದರು.