ಕೂಡಿಗೆ, ಜೂ. ೫: ಸಮೀಪದ ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಆಡಳಿತರೂಢ ಪಕ್ಷದ ೬ ಮಂದಿ ಸದಸ್ಯರು ಅವಿಶ್ವಾಸ ನಿರ್ಣಯ ಮಂಡನೆಗೆ ಜಿಲ್ಲಾ ಉಪ ವಿಭಾಗಾಧಿಕಾರಿ ಅವರಿಗೆ ಲಿಖಿತ ಮನವಿಯನ್ನು ಸಲ್ಲಿಸಿದ್ದಾರೆ. ಹಾಲಿ ಉಪಾಧ್ಯಕ್ಷ ಎನ್.ಎನ್., ಧರ್ಮಪ್ಪ ಸದಸ್ಯರಾದ ಎಸ್.ಬಿ. ಶ್ರೀಕಾಂತ್, ಎಸ್.ಎ., ಪ್ರದೀಪ್, ಕೆ ಜೆ ಗೀತಾ, ಎಂ ಆರ್ ಲತಾಭಾಯಿ, ಲಕ್ಷಿö್ಮ ಇವರುಗಳು ಅವಿಶ್ವಾಸ ನಿರ್ಣಯ ಮಂಡನೆಯ ಪತ್ರಕ್ಕೆ ಸಹಿ ಮಾಡಿ ಮನವಿ ಸಲ್ಲಿಸಿದ್ದು, ತಾ. ೧೪ ರಂದು ಅವಿಶ್ವಾಸ ನಿರ್ಣಯ ಮಂಡನೆಗೆ ದಿನಾಂಕ ನಿಗದಿ ಮಾಡಲಾಗಿದೆ.