ಸುಂಟಿಕೊಪ್ಪ, ಜೂ. ೪: ಬೆಂಗಳೂರಿನಲ್ಲಿ ನಡೆದ ಸರಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟದ ಫೈನಲ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಕೊಡಗು ಜಿಲ್ಲಾ ತಂಡವು ಮಂಡ್ಯ ತಂಡದ ವಿರುದ್ಧ ೨-೦ ಗೋಲುಗಳಿಂದ ಗೆಲುವು ಸಾಧಿಸಿದೆ. ಉತ್ತಮ ಹೊಂದಾಣಿಕೆ ಹಾಗೂ ಚಾಣಾಕ್ಷತನದ ಆಟ ಪ್ರದರ್ಶಿಸಿದ ಕೊಡಗು ಜಿಲ್ಲಾ ಸರ್ಕಾರಿ ನೌಕರರ ಹಾಕಿ ತಂಡ ಬೀದರ್ ಜಿಲ್ಲಾ ತಂಡವನ್ನು ಮಣಿಸುವ ಮೂಲಕ ರಾಜ್ಯಮಟ್ಟದ ಹಾಕಿ ಚಾಂಪಿಯನ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.
ಫುಟ್ಬಾಲ್ ಫಲಿತಾಂಶ : ಫೈನಲ್ ಪಂದ್ಯಾಟಕ್ಕಿAತ ಮುನ್ನ ನಡೆದ ಸೆಮಿಫೈನಲ್ನಲ್ಲಿ ವಿಜಯನಗರ ಜಿಲ್ಲಾ ತಂಡದ ವಿರುದ್ಧ ಕೊಡಗು ತಂಡ ೪-೦ ಗೋಲುಗಳಿಂದ ಗೆಲುವಿನ ನಗು ಬೀರಿತು. ನಂತರ ನಡೆದ ಫೈನಲ್ ಹಣಾಹಣಿಯಲ್ಲಿ ಮಂಡ್ಯ ತಂಡದ ವಿರುದ್ಧ ಕೊಡಗು ತಂಡದ ನಾಯಕ ವೇಣುಗೋಪಾಲ್ ಅವರು ೨ ಗೋಲುಗಳನ್ನು ಬಾರಿಸುವ ಮೂಲಕ ಎದುರಾಳಿ ತಂಡವನ್ನು ಸೋಲಿಸಿದರು.
ತಂಡದಲ್ಲಿ ವೇಣುಗೋಪಾಲ್ ಬಿ.ಹೆಚ್. (ನಾಯಕ), ಅಶ್ವತ್ಥ್ ಬಿ.ಎಲ್. (ಉಪನಾಯಕ), ತಿಮ್ಮಯ್ಯ ಕೆ.ಎಂ., ಝಿಯಾ ಉರ್ ರೆಹಮಾನ್, ನಿತಿನ್, ನೂತನ್, ಮಧುಸೂದನ್, ವಿಜಯ ಕುಮಾರ್, ಹರೀಶ್, ಮೌನ್ ಮೊಣ್ಣಪ್ಪ, ಬಿಪಿನ್ ಕುಮಾರ್, ಫೆಲಿಕ್ಸ್ ಪಿಂಟೋ ಹಾಗೂ ಸಂದೇಶ್ (ಕೋಚ್) ಇದ್ದರು.
ಹಾಕಿ ಫಲಿತಾಂಶ
ರಾಜ್ಯಮಟ್ಟದ ಸರ್ಕಾರಿ ನೌಕರರ ಹಾಕಿ ಪಂದ್ಯಾವಳಿಯಲ್ಲಿ ಕೊಡಗು ಜಿಲ್ಲಾ ಸರ್ಕಾರಿ ನೌಕರರ ತಂಡ ಸೆಮಿಫೈನಲ್ನಲ್ಲಿ ಬೆಂಗಳೂರು ಸಚಿವಾಲಯ ತಂಡವನ್ನು ೬-೦ ಗೋಲುಗಳಿಂದ ಫೈನಲ್ ಪ್ರವೇಶಿಸಿತು.
ಬೀದರ್ ತಂಡ ಹಾಗೂ ಕೊಡಗು ತಂಡಗಳ ನಡುವೆ ನಡೆದ ಫೈನಲ್ ಪಂದ್ಯಾವಳಿಯಲ್ಲಿ ತೀವ್ರ ಹಣಾಹಣಿಯ ಪಂದ್ಯಾಟ ನಡೆಯಿತು. ಪ್ರಥಮ ಹಂತದ ಆಟದಲ್ಲಿ ಎರಡು ತಂಡಗಳು ಗೋಲು ಗಳಿಸಲು ತೀವ್ರ ಸೆಣಸಾಟ ನಡೆಸಿದರು. ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಎರಡನೇ ಅವಧಿಯ ಆಟದಲ್ಲಿ ಕೊಡಗು ತಂಡ ಉತ್ತಮ ಆಟವಾಡಿ ೪-೦ ಗೋಲು ಗಳಿಸುವ ಮೂಲಕ ವಿಜಯದ ಮಾಲೆಯನ್ನು ತನ್ನದಾಗಿಸಿ ಕೊಂಡಿತು.
(ಮೊದಲ ಪುಟದಿಂದ) ಕೊಡಗು ತಂಡದ ಜಾಗೃತ್ ೨, ಶ್ರೀನಿವಾಸ್ ೧, ಮಾಚಯ್ಯ ೧ ಗೋಲು ಗಳಿಸುವ ತಂಡದ ಗೆಲುವಿಗೆ ಕಾರಣರಾದರು. ತಂಡದಲ್ಲಿ ನಾಯಕ ಪ್ರಕಾಶ್, ಮೌನ್ ಮೊಣ್ಣಪ್ಪ, ಜಾಗೃತ್, ಮಾಚಯ್ಯ, ಪ್ರಸನ್ನ ಕುಮಾರ್, ಚಂದ್ರಶೇಖರ್, ಸತೀಶ್, ಲೋಕೇಶ್ ಆರ್.ಡಿ., ಶ್ರೀನಿವಾಸ್, ಪೂಣಚ್ಚ, ನವೀನ್ ಕುಮಾರ್ (ಗೋಲಿ) ಮಹೇಶ್ ಕುಮಾರ್ ಆರ್.ಡಿ. ಸೋಮಣ್ಣ, ಸುಬ್ಬಯ್ಯ, ಪ್ರಶಾಂತ್, ಶಿವಕುಮಾರ್, ರಮೆಶ್ ತಂಡದಲ್ಲಿದ್ದು ತರಬೇತಿದಾರರಾದ ಡ್ಯಾನಿ ಈರಪ್ಪ, ಮ್ಯಾನೇಜರ್ ಪೂರ್ಣೇಶ್ ಮಾರ್ಗದರ್ಶನ ನೀಡಿದರು.