ಚೆಟ್ಟಳ್ಳಿ, ಜೂ. ೪: ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಅಸೋಸಿಯೇಷನ್ ಹಾಗೂ ಎಸ್.ಆರ್.ಎಸ್ ಕ್ರಿಕೆಟರ್ಸ್ ಆಶ್ರಯದಲ್ಲಿ ೧೮ನೇ ವರ್ಷದ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾವಳಿ ತಾ. ೫ ರಿಂದ (ಇಂದಿನಿAದ) ಮೂರ್ನಾಡುವಿನ ಬಾಚೆಟ್ಟೀರ ಲಾಲು ಮುದ್ದಯ್ಯ ಮೈದಾನದಲ್ಲಿ ನಡೆಯಲಿದೆ.
ತಾ. ೫ ರಂದು ಬೆಳಿಗ್ಗೆ ೯ ಗಂಟೆಗೆ ಕೊಡಗು ಜಿಲ್ಲಾ ಮುಸ್ಲಿಂ ಕಪ್ ಕ್ರಿಕೆಟ್ ಸ್ಥಾಪಕ ಅಬ್ದುಲ್ ರಶೀದ್ ಕ್ರೀಡಾಕೂಟವನ್ನು ಉದ್ಘಾಟನೆ ಮಾಡಲಿದ್ದು, ಮೂರ್ನಾಡು ಮುಸ್ಲಿಂ ಜಮಾಹತ್ ಅಧ್ಯಕ್ಷ ಅಬ್ದುಲ್ ಮಜೀದ್ ಕೆ.ಎ. ಧ್ವಜಾರೋಹಣ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಆರೋಗ್ಯ ಕ್ಲಿನಿಕ್ ಕುಂಜ ಅಬ್ದುಲ್ಲ, ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಅಬ್ದುಲ್ ಖಾದರ್ ಎ.ಎ. ಫ್ರೆಂಡ್ಸ್ ಟ್ರೇಟರ್ಸ್ ಖಾಸಿಂ ಕೆ.ಎ. ಗುತ್ತಿಗೆದಾರ ಅಬ್ದುಲ್ಲ ಪಿ.ವೈ. ಮೂರ್ನಾಡು, ಉಸ್ತಾದ್ ಹೊಟೇಲ್ ಮಾಲೀಕ ಮುಜೀಬ್ ಕೆ.ಎಂ., ಮೈಮ ಅಧ್ಯಕ್ಷ ಖಾದರ್ ಕೆ.ಎ. ಹಾಗೂ ಇರ್ಫಾನ್ ಆಲಿ ಎಂ. ಬಿ. ಯು.ಎ.ಇ. ಇವರು ಪಾಲ್ಗೊಳ್ಳಲಿದ್ದಾರೆ ಎಂದು ಎಸ್.ಆರ್.ಎಸ್ ಕ್ರಿಕೆಟರ್ಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.