ಸೋಮವಾರಪೇಟೆ, ಜೂ. ೩: ಧಾರ್ಮಿಕ ಆಚರಣೆಗಳಿಂದ ಮಾನಸಿಕ ನೆಮ್ಮದಿ ಸಾಧ್ಯವೆಂದು ಕಿರಿಕೊಡ್ಲಿ ಮಠಾಧೀಶರಾದ ಸದಾಶಿವ ಸ್ವಾಮೀಜಿ ಹೇಳಿದರು.

ಇಲ್ಲಿಗೆ ಸಮೀಪದ ಯಲಕನೂರು ಗ್ರಾಮದ ಮಹಾಲಿಂಗೇಶ್ವರ ದೇವಾಲಯದ ಆವರಣದಲ್ಲಿ ಏರ್ಪಡಿಸಲಾಗಿದ್ದ ಧಾರ್ಮಿಕ ಸಮಾರಂಭದ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದರು. ಇಂದು ಗ್ರಾಮೀಣ ಭಾಗಗಳಲ್ಲಿ ಹೊಸ ಹೊಸ ದೇವಾಲಯಗಳು ತಲೆ ಎತ್ತುತ್ತಿರುವುದು ಉತ್ತಮ ಬೆಳವಣಿಗೆ ಎಂದ ಅವರು, ಜೀವನದ ಜಂಜಾಟ ಹೆಚ್ಚಿದಂತೆ ಮನುಷ್ಯ ಆಧ್ಯಾತ್ಮಿಕತೆಯ ಕಡೆಗೆ ವಾಲುತ್ತಿದ್ದಾನೆ ಎಂದರು.

ಮುಖ್ಯ ಅತಿಥಿಯಾಗಿದ್ದ ತಹಶೀಲ್ದಾರ್ ಗೋವಿಂದರಾಜು ಮಾತನಾಡಿ, ಮಕ್ಕಳಲ್ಲಿ ಸಂಸ್ಕಾರ ಬೆಳೆಸಬೇಕಾದ ಅನಿವಾರ್ಯತೆ ಇದೆ. ಉತ್ತಮ ಸಮಾಜ, ಭವಿಷ್ಯದ ಸುಭದ್ರ ದೇಶ ನಿರ್ಮಾಣವಾಗಬೇಕಾದರೆ ಪ್ರತಿಯೋರ್ವರೂ ಸಂಸ್ಕಾರವAತ ರಾಗಬೇಕು ಎಂದರು.

ಸಮಾರAಭದಲ್ಲಿ ಮನೆಹಳ್ಳಿ ಮಠಾಧೀಶ ಮಹಾಂತಶಿವಲಿAಗ ಸ್ವಾಮೀಜಿ, ದೇವಾಲಯ ಸಮಿತಿ ಅಧ್ಯಕ್ಷ ಶಿವಾನಂದ, ಉಪಾಧ್ಯಕ್ಷ ದಿನೇಶ್, ಕಾರ್ಯದರ್ಶಿ ಪ್ರಸನ್ನ, ಪ್ರಮುಖರಾದ ಬಿ.ಎಸ್.ದಿಲೀಪ್, ರವಿಶಂಕರ್, ನಟರಾಜ್, ಹರೀಶ್, ಸತೀಶ್, ಆನಂದ್, ಹರೀಶ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.