ಕುಶಾಲನಗರ / ಕಣಿವೆ, ಜೂ. ೩ : ದೇಹ ಬೆಳೆಯಲು ತಿಂಡಿ - ತಿನಿಸುಗಳು ಅಗತ್ಯವೋ ಹಾಗೆ ಮಾನಸಿಕ ಮಟ್ಟ ಬೆಳೆಯಲು ಸತ್ಸಂಗ ಅತಿ ಅಗತ್ಯ ಎಂದು ಆರ್ಯ ವೈಶ್ಯ ಸಮಾಜದ ಕುಲ ಗುರು ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಕರೆಕೊಟ್ಟರು. ಕುಶಾಲನಗರದ
(ಮೊದಲ ಪುಟದಿಂದ) ಆರ್ಯವೈಶ್ಯ ಸಮಾಜದ ಅಮೃತ ಮಹೋತ್ಸವದ ಅಂಗವಾಗಿ ರಥಬೀದಿಯ ವಾಸವಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದ ಅವರು, ಪ್ರತಿಯೊಬ್ಬರು ಸತ್ಸಂಗ, ದೇವತಾ ಆರಾಧನೆ ಹಾಗೂ ಪರೋಪಕಾರಿ ಗುಣಗಳನ್ನು ಮೈಗೂಡಿಸಿಕೊಂಡಲ್ಲಿ ಆದರ್ಶ ಸಮಾಜದ ನಿರ್ಮಾಣ ಸಾಧ್ಯವಿದೆ ಎಂದು ಹೇಳಿದರು.
ಪ್ರತಿಯೊಬ್ಬರು ಆಧ್ಯಾತ್ಮದತ್ತ ಹೆಚ್ಚಿನ ಒಲವು ಹೊಂದಬೇಕಿದೆ ಎಂದು ಹೇಳಿದ ಶ್ರೀಗಳು, ಭಗವದ್ಗೀತೆ ಹಾಗೂ ವಚನಗಳನ್ನು ಹೆಚ್ಚಾಗಿ ಓದುವ ಮೂಲಕ ಅದರೊಳಗಿನ ತಿರುಳನ್ನು ಅರಿತು ಅದರಂತೆ ನಾವುಗಳೆಲ್ಲಾ ನಡೆದರೆ ಜೀವನ ಸಾರ್ಥಕ ಎಂದು ಹೇಳಿದರು.
ಜೀವನದ ಭೌತಿಕ ತತ್ವವನ್ನು ಎಲ್ಲರು ಅರಿಯಬೇಕು. ಕಷ್ಟ ಸುಖಗಳು ಹಾಗೂ ನೋವು ನಲಿವುಗಳು ಎಲ್ಲರ ಜೀವನದಲ್ಲೂ ಬಂದು ಹೋಗುವ ಅತಿಥಿಗಳು. ನೋವಿಗೆ, ಕಷ್ಟಗಳಿಗೆ ಹೆದರದೇ ಶರಣರು, ಸಾಧು ಸಂತರು, ದಾಸ ಶ್ರೇಷ್ಠರು ಸಾರಿ ಹೋದ ಜೀವನ ಮೌಲ್ಯಗಳನ್ನು ಅರಿತು ಅಳವಡಿಸಿಕೊಳ್ಳಬೇಕೆಂದು ಶ್ರೀಗಳು ನುಡಿದರು.
ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ಆರ್ಯ ವೈಶ್ಯ ಮಹಾಸಭಾದ ಅಧ್ಯಕ್ಷ ಆರ್.ಪಿ. ರವಿಶಂಕರ್ ಮಾತನಾಡಿ, ದೇವಾಲಯಗಳು ಸೇವಾಲಯಗಳಾಗಿ ಮಾರ್ಪಾಡಾಗಬೇಕು, ದೇವಾಲ ಯಗಳ ಮೂಲಕ ಸಾಮಾಜಿಕ ಕೆಲಸಗಳು ನಡೆಯಬೇಕು; ಭಕ್ತಾದಿಗಳಿಗೆ ದೇವಾಲಯಗಳಿಂದ ಗುಣಾತ್ಮಕ ಶಕ್ತಿ ಲಭ್ಯವಾಗುತ್ತದೆ. ಭಕ್ತಿ ಮೂಲಕ ಶಕ್ತಿ ಪಡೆಯಲು ಸಾಧ್ಯ ಎಂದರಲ್ಲದೆ ಪ್ರತಿಯೊಬ್ಬರೂ ಭಕ್ತಿ ಕೇಂದ್ರಗಳಿಗೆ ತೆರಳಲು ಸಮಯ ಮೀಸಲು ಇಡುವಂತಾಗಬೇಕು ಎಂದರು.
ವಿಧಾನಪರಿಷತ್ ಸದಸ್ಯರು ಹಾಗೂ ಸಮಾಜದ ಪ್ರಮುಖರಾದ ಡಿ.ಎಸ್. ಅರುಣ್ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಬದಲಾವಣೆಗಳಿಗೆ ಹೊಂದಿ ಕೊಳ್ಳಬೇಕು ಹಿರಿಯರು ಮಕ್ಕಳಿಗೆ ಪ್ರೋತ್ಸಾಹ ನೀಡುವುದರೊಂದಿಗೆ ಹಂತಹAತವಾಗಿ ಮನೆ ಮತ್ತಿತರ ಜವಾಬ್ದಾರಿ ನಿಭಾಯಿಸಲು ಅವಕಾಶ ಕಲ್ಪಿಸಬೇಕಾಗಿದೆ, ಆರ್ಯವೈಶ್ಯ ಸಮುದಾಯದಂತಹ ಸಣ್ಣ ಸಮಾಜದ ಮೂಲಕ ರಾಜ್ಯದಲ್ಲಿ ೨೬೫ ದೇವಾಲಯಗಳನ್ನು ನಿರ್ಮಿಸಲಾಗಿದೆ. ಕುಶಾಲನಗರ ಆರ್ಯವೈಶ್ಯ ಜನಾಂಗದ ಅಭಿವೃದ್ಧಿ ಬಗ್ಗೆ ಅರುಣ್ ಶ್ಲಾಘನೆ ವ್ಯಕ್ತಪಡಿಸಿದರು.
ಅಮೃತ ಮಹೋತ್ಸವದ ಅಂಗವಾಗಿ ದೇವಾಲಯದಲ್ಲಿ ಚಂಡಿಕಾಹೋಮ, ಸುವಾಸಿನಿ ಪೂಜೆ, ಕನ್ನಿಕಾ ಪೂಜೆ, ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ವೇದಿಕೆ ಕಾರ್ಯಕ್ರಮದಲ್ಲಿ ಕನ್ನಿಕಾ ಪರಮೇಶ್ವರಿ ಅಮ್ಮನವರ ಭಾವಚಿತ್ರ ಮತ್ತು ಸ್ವಾಮೀಜಿಯವರ ಭಾವಚಿತ್ರ ಅನಾವರಣ ಗೊಳಿಸಲಾಯಿತು.
ಇದೇ ಸಂದರ್ಭ ಕಳೆದ ಇಪ್ಪತ್ತೆöÊದು ವರ್ಷಗಳ ಕಾಲ ಆರ್ಯವೈಶ್ಯ ಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ೧೫ ಮಂದಿ ಮಾಜಿ ಅಧ್ಯಕ್ಷರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಎಲ್ ಉದಯಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ಕೊಡಗು ಜಿಲ್ಲಾ ಆರ್ಯವೈಶ್ಯ ಮಹಾಸಭಾದ ಅಧ್ಯಕ್ಷ ಬಿ.ಆರ್. ನಾಗೇಂದ್ರಪ್ರಸಾದ್, ಜಿಲ್ಲಾ ಕಾರ್ಯದರ್ಶಿ ಬಿ.ಎಲ್. ಸತ್ಯನಾರಾಯಣ, ಆರ್ಯವೈಶ್ಯ ಮಂಡಳಿ ಕಾರ್ಯದರ್ಶಿ ಅಶೋಕ್ ಕುಮಾರ್ ಮತ್ತಿತರರು ಇದ್ದರು.
ಕುಶಾಲನಗರದ ಗಣಪತಿ ದೇವಾಲಯದ ಅರ್ಚಕ ರಾಘವೇಂದ್ರ ಭಟ್ ಹಾಗೂ ಚಿಕ್ಕಮಗಳೂರಿನ ರಾಜೇಶ್ ಭಟ್ ನೇತೃತ್ವದಲ್ಲಿ ಜರುಗಿದ ಪೂಜೋತ್ಸವದಲ್ಲಿ ಕನ್ನಿಕಾ ಪರಮೇಶ್ವರಿ ದೇವಾಲಯದ ಅರ್ಚಕರಾದ ಗಿರೀಶ್ ಭಟ್ ಹಾಗೂ ಯೋಗೇಶ್ ಭಟ್ ಪಾಲ್ಗೊಂಡಿದ್ದರು.
ವಾಸವಿ ಮಹಿಳಾ ಸಂಘದ ಸದಸ್ಯರು ಪ್ರಾರ್ಥಿಸಿದರೆ, ಉದಯಕುಮಾರ್ ಸ್ವಾಗತಿಸಿದರು. ಡಾ. ಶಾಂತಲಕ್ಷಿö್ಮ ಮತ್ತು ಸುಬ್ರಮಣ್ಯಂ ನಿರೂಪಿಸಿದರೆ, ಅಶೋಕ್ ಕುಮಾರ್ ವಂದಿಸಿದರು.